ಕೆ.ಆರ್.ಪೇಟೆ, ಮೇ 25- ಮೈಸೂರಿನಲ್ಲಿ ವಾಸವಿರುವ ಕೃಷ್ಣರಾಜಪೇಟೆ ತಾಲೂಕು ಮೈಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಮುಖ್ಯಮಂತ್ರಿಗಳ ಕೋವಿಡ್ -19 ಪರಿಹಾರ ನಿಧಿಗೆ 1ಲಕ್ಷ ರೂ. ಚೆಕ್ಕನ್ನು ದೇಣಿಗೆ ನೀಡಲಾಯಿತು. ಪಟ್ಟಣದ ಮಿನಿವಿಧಾನ ಸೌಧದಲ್ಲಿ ಸೋಮ ವಾರ ಸಂಘದ ಸದಸ್ಯರು ಚೆಕ್ ಅನ್ನು ತಹಶೀಲ್ದಾರ್ ಎಂ. ಶಿವಮೂರ್ತಿ ಅವರ ಮೂಲಕ ಸರ್ಕಾರಕ್ಕೆ ನೀಡಿದರು.
ಸಂಘದ ಅಧ್ಯಕ್ಷ ಡಿ.ಆರ್.ವೆಂಕಟೇಶ್ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ನಾಡಿನ ಜನರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಕೋವಿಡ್-19 ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ನಮ್ಮ ಕೃಷ್ಣರಾಜಪೇಟೆ ಮೈಸೂರು ನಿವಾಸಿಗಳ ಸಂಘದಿಂದ 1ಲಕ್ಷ ರೂ. ದೇಣಿಗೆ ನೀಡಿದ್ದೇವೆ. ಇದೇ ರೀತಿ ಉಳ್ಳವರು ಹಾಗೂ ಸಂಘ-ಸಂಸ್ಥೆಗಳು ಸರ್ಕಾರಕ್ಕೆ ಅಥವಾ ತಾಲೂಕು ಆಡಳಿತಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ದಲ್ಲಿ ಸಂಘದ ಹಿರಿಯ ಉಪಾಧ್ಯಕ್ಷ ಸಿ.ಚೆಲುವೇಗೌಡ, ಎ.ಆರ್.ರಘು, ಕೋಶಾಧ್ಯಕ್ಷ ಹೆಚ್.ಎಸ್.ಬಲರಾಂ, ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಎಂ.ಪಿ.ಲೋಕೇಶ್, ಸಂಘಟನಾ ಕಾರ್ಯದರ್ಶಿ ಕೆ.ಜೆ.ಯೋಗೇಶ್, ಗೌರವ ಸಲಹೆಗಾರ ಎಂ.ಜಿ.ಚಂದ್ರಶೇಖರ್, ಮನ್‍ಮುಲ್ ನಿರ್ದೇ ಶಕ ಕೆ.ಜಿ.ತಮ್ಮಣ್ಣ, ಜಂಟಿ ಕಾರ್ಯದರ್ಶಿ ಎನ್. ರಾಮೇ ಗೌಡ, ನಿರ್ದೇಶಕರಾದ ಎಂ.ಪಿ.ಲೋಕೇಶ್, ಹೆಚ್. ಎನ್. ನಾಗೇಶ್, ಎಂ.ಡಿ.ನರಸೇಗೌಡ, ಬಿ.ಆರ್.ಕೃಷ್ಣ, ಜವರ ಶೆಟ್ಟಿ, ಕೆ.ಆರ್.ಜಗದೀಶ್, ಸಚಿವ ನಾರಾಯಣಗೌಡ ಅವರ ಆಪ್ತ ಸಹಾಯಕ ದಯಾನಂದ್, ಪೈ.ರಾಜು, ಶೀಲಾ ಪಾಂಡುರಂಗೇಗೌಡ ಮತ್ತಿತರರು ಭಾಗವಹಿಸಿದ್ದರು.