ಪಕ್ಷದ ಸಂಸದರು, ಶಾಸಕರೊಂದಿಗಿನ ಸಭೆ ರದ್ದುಪಡಿಸಿದ ಸಿಎಂ ಯಡಿಯೂರಪ್ಪ
ಮೈಸೂರು

ಪಕ್ಷದ ಸಂಸದರು, ಶಾಸಕರೊಂದಿಗಿನ ಸಭೆ ರದ್ದುಪಡಿಸಿದ ಸಿಎಂ ಯಡಿಯೂರಪ್ಪ

July 6, 2020

ಬೆಂಗಳೂರು, ಜು. 5- ಬಿಜೆಪಿ ಪಕ್ಷದ ಶಾಸಕರು ಹಾಗೂ ಸಂಸದರೊಂದಿಗೆ ಸೋಮವಾರ ನಡೆಯಬೇಕಿದ್ದ ಸಭೆಯೊಂದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದ್ದಕ್ಕಿದ್ದಂತೆಯೇ ರದ್ದುಪಡಿಸಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವಲ್ಲೇ ಮುಖ್ಯಮಂತ್ರಿಗಳು ಇದ್ದಕ್ಕಿದ್ದಂತೆ ಸಭೆ ರದ್ದುಪಡಿಸಿರುವುದು ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ. ಸಭೆ ರದ್ದುಪಡಿಸಿರುವ ಕುರಿತು ಮುಖ್ಯಮಂತ್ರಿಗಳ ಕಚೇರಿ ಯಾವುದೇ ರೀತಿಯ ಕಾರಣಗಳನ್ನೂ ನೀಡಿಲ್ಲ. ಮೂಲಗಳ ಪ್ರಕಾರ ಮುಖ್ಯಮಂತ್ರಿಗಳು ಸ್ವತಃ ಪಕ್ಷದ ಸಂಸದರು ಹಾಗೂ ಶಾಸಕರೊಂದಿಗೆ ಸಭೆ ನಡೆಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಇದೀಗ ಇದ್ದಕ್ಕಿದ್ದಂತೆಯೇ ಸಭೆ ರದ್ದುಪಡಿಸಿರುವುದಕ್ಕೆ ಯಾವುದೇ ಕಾರಣಗಳೂ ತಿಳಿದುಬಂದಿಲ್ಲ.

Translate »