ಜಲದರ್ಶಿನಿ ಪಕ್ಕದ ಸರ್ಕಾರಿ ವಸತಿ ಸಮುಚ್ಛಯ ಆವರಣ ಸ್ವಚ್ಛ
ಮೈಸೂರು

ಜಲದರ್ಶಿನಿ ಪಕ್ಕದ ಸರ್ಕಾರಿ ವಸತಿ ಸಮುಚ್ಛಯ ಆವರಣ ಸ್ವಚ್ಛ

July 6, 2020

ಮೈಸೂರು,ಜು.5(ಎಂಕೆ)- ಮೈಸೂರು -ಹುಣಸೂರು ಮುಖ್ಯ ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿ ಗೃಹದ ಪಕ್ಕದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ರಂಗಾ ಯಣ ಮತ್ತಿತರ ಇಲಾಖೆಗಳ ನೌಕರರು, ವಿದ್ಯಾರ್ಥಿಗಳು ವಾಸವಿರುವ ವಸತಿ ಸಮು ಚ್ಛಯದ ಆವರಣದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿ, ಪಾರ್ಥೇನಿಯಂ ಗಿಡಗಳನ್ನು ಭಾನುವಾರ ಕಿತ್ತೆಸೆಯಲಾಯಿತು.

ಜುಲೈ 3ರಂದು ‘ಮೈಸೂರು ಮಿತ್ರ’ನಲ್ಲಿ ‘ಪಾರ್ಥೇನಿಯಂ ವನಸಿರಿ, ದುರ್ವಾಸನೆ ಜೊತೆಗೆ ಆತಂಕದಲ್ಲಿ ಸರ್ಕಾರಿ ವಸತಿ ಸಮು ಚ್ಛಯದ ನಿವಾಸಿಗಳು’ ಶೀರ್ಷಿಕೆಯಡಿ ವಸತಿ ಸಮುಚ್ಛಯದಲ್ಲಿನ ದುರವಸ್ಥೆ ಕುರಿತು ವರದಿ ಪ್ರಕಟವಾದ ಬಳಿಕ ಜೆಸಿಬಿ ಬಳಸಿ ಕಸದ ರಾಶಿ, ಪಾರ್ಥೇನಿಯಂ ಗಿಡಗಳನ್ನು ತೆಗೆದು ಆವರಣವನ್ನು ಸ್ವಚ್ಛಗೊಳಿಸಲಾಗಿದೆ. ಹೀಗೆ ತಿಂಗಳಿಗೊಮ್ಮೆಯಾದರೂ ಸ್ವಚ್ಛತಾ ಕಾರ್ಯ ನಡೆಯಬೇಕು. ಹುಣಸೂರು ರಸ್ತೆ ಅಗಲೀಕರಣ ವೇಳೆ ಸಮುಚ್ಛಯದ ಮುಂಭಾಗ ಕಾಂಪೌಂಡ್ ಕೆಡವಿದ್ದು, ಹೊಸದಾಗಿ ನಿರ್ಮಿಸಿಕೊಡಬೇಕು. ಸಮುಚ್ಛಯಕ್ಕೆ ಭದ್ರತೆ ಒದಗಿಸಬೇಕು ಎಂದು ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ

Translate »