ಮಾಜಿ ಶಾಸಕ ವಾಸು ಸೇರಿ 60 ಹಿರಿಯ ಸಹಕಾರಿಗಳಿಗೆ `ಸಹಕಾರ ರತ್ನ’ ಪ್ರಶಸ್ತಿ ಪ್ರದಾನ
ಮೈಸೂರು

ಮಾಜಿ ಶಾಸಕ ವಾಸು ಸೇರಿ 60 ಹಿರಿಯ ಸಹಕಾರಿಗಳಿಗೆ `ಸಹಕಾರ ರತ್ನ’ ಪ್ರಶಸ್ತಿ ಪ್ರದಾನ

March 21, 2022

`ಕ್ಷೀರ ಸಮೃದ್ಧಿ ಬ್ಯಾಂಕ್’ ಸ್ಥಾಪನೆ: ಸಿಎಂ

ಬೆAಗಳೂರು, ಮಾ.೨೦-ರಾಜ್ಯದಲ್ಲಿ ಹಾಲು ಉತ್ಪಾದನೆ ಒಂದು ದೊಡ್ಡ ಚಟುವಟಿಕೆಯಾಗಿದ್ದು, ಅದರಿಂದ ಬರುವ ಲಾಭವು ಹಾಲು ಉತ್ಪಾದಕರಿಗೆ ಸೇರಬೇಕೆಂಬ ಉದ್ದೇಶದಿಂದ ಬಜೆಟ್‌ನಲ್ಲಿ ೩೦೦ ಕೋಟಿ ರೂ. ವೆಚ್ಚದಲ್ಲಿ `ಕ್ಷೀರ ಸಮೃದ್ಧಿ ಬ್ಯಾಂಕ್’ ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದ್ದು, ಶೀಘ್ರದಲ್ಲೇ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನ ಕೆಂಗೇರಿ ಉಪ ನಗರದಲ್ಲಿರುವ ಗಣೇಶ ಮೈದಾನದಲ್ಲಿ ಭಾನುವಾರ ಸಹಕಾರ ಇಲಾಖೆ ಹಾಗೂ ರಾಜ್ಯ ಸಹಕಾರ ಮಹಾ ಮಂಡಳದ ಸಂಯುಕ್ತ ಆಶ್ರಯ ದಲ್ಲಿ ಏರ್ಪಡಿಸಲಾಗಿದ್ದ `ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ೬೦ ಹಿರಿಯ ಸಹಕಾರಿಗಳಿಗೆ `ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಿ, ಅವರು ಮಾತನಾಡುತ್ತಿದ್ದರು.
ಪ್ರತಿಯೊಂದು ತಾಲೂಕಿನಲ್ಲೂ ಕ್ಷೀರ ಸಮೃದ್ಧಿ ಬ್ಯಾಂಕ್ ತೆರೆಯಲಾಗುತ್ತಿದ್ದು, ಪ್ರತಿಯೊಬ್ಬ ಹಾಲು ಉತ್ಪಾದಕರು ಅದಕ್ಕೆ ಸದಸ್ಯರಾಗಿ ಹಾಲು ಉತ್ಪಾದಕರ ಎಲ್ಲಾ ಚಟುವಟಿಕೆ ಗಳಿಗೆ ಸಹಕಾರಿಯಾಗುವಂತೆ ಸುಲಭದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ನಿAದ ಸಾಲ ದೊರೆಯಲಿದೆ. ಕ್ಷೀರ ಸಮೃದ್ಧಿ ಬ್ಯಾಂಕ್ ಅನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಅದು ಅಪೆಕ್ಸ್ ಬ್ಯಾಂಕ್‌ಗೆ ಸರಿಸಮನಾಗಿ ಸಹಕಾರಿ ರಂಗದಲ್ಲಿ ಬೆಳೆಯಲಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಹಸಿರು ಕ್ರಾಂತಿಯಾಗಿದೆ. ಆದರೆ ಕೃಷಿಗೆ ತಕ್ಕಂತೆ ರೈತ ಅಭಿವೃದ್ಧಿ ಹೊಂದಿಲ್ಲ. ಅದಕ್ಕಾಗಿ ಯಶಸ್ವಿನಿ ಯೋಜನೆ ಯನ್ನು ಮತ್ತೆ ಜಾರಿ ಮಾಡಲಾಗುತ್ತಿದೆ. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಯಶಸ್ವಿನಿ ಯೋಜನೆ ಮತ್ತೆ ಜಾರಿ ಮಾಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ ೩೦೦ ಕೋಟಿ ರೂ. ಹಾಗೂ ರೈತರ ಯಂತ್ರೋಪಕರಣಗಳಿಗೆ ಅಗತ್ಯವಿರುವ ಪೆಟ್ರೋಲ್ ಮತ್ತು ಡೀಸೆಲ್‌ಗೆ ೫೦೦ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ರಾಜ್ಯದ ೩೩ ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಒಟ್ಟು ೨೪ ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡಲಾಗುವುದು ಎಂದರಲ್ಲದೆ, ಕೃಷಿಯಲ್ಲಿ ಬಂಡವಾಳ ಹೂಡಿಕೆಯಾಗಬೇಕು. ಕೃಷಿಯೇ ಆರ್ಥಿಕತೆ ಮೂಲ. ರೈತ ಕೇವಲ ಉತ್ಪಾದಕನಲ್ಲ, ಬಳಕೆದಾರನೂ
ಕೂಡ ಎಂದು ಮುಖ್ಯಮಂತ್ರಿಗಳು ಹೇಳಿದರು. ಏಷ್ಯಾ ಖಂಡದಲ್ಲೇ ಮೊಟ್ಟ ಮೊದಲಿಗೆ ಸಹಕಾರ ಸಂಘ ಹುಟ್ಟಿದ್ದು ಕರ್ನಾಟಕದಲ್ಲಿ. ಹಿರಿಯರ ಸೇವೆಯಿಂದ ಸಹಕಾರಿ ಸಂಘಗಳು ಬೆಳೆದಿವೆ ಎಂದ ಮುಖ್ಯಮಂತ್ರಿಗಳು, ಸಹಕಾರಿ ರಂಗದಲ್ಲಿ ಗುಜರಾತ್ ಹಾಗೂ ಮಹಾರಾಷ್ಟç ಮುಂಚೂಣ ಯಲ್ಲಿವೆ. ನಮ್ಮ ರಾಜ್ಯವು ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಬರಬೇಕು ಎಂದು ಆಶಿಸಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕೂಡ ಸಹಕಾರಿ ರಂಗದಿAದ ಬಂದವರು. ಅವರು ಅಹಮ ದಾಬಾದ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು ಎಂದರು.

ಜೀವನಕ್ಕೆ ದುಡ್ಡೇ ದೊಡ್ಡಪ್ಪ ಅಲ್ಲ. ದುಡಿಮೆಯೇ ದೊಡ್ಡಪ್ಪ ಎಂದು ನಂಬಿದ್ದೇನೆ. ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಬಹಳ ದೊಡ್ಡದಾಗಿದೆ. ದುಡಿಯುವ ವರ್ಗ ಸಹಕಾರಿ ಕ್ಷೇತ್ರಕ್ಕೆ ಸೇರ್ಪಡೆಯಾಗಬೇಕು. ಈಗಾಗಲೇ ಸಾಕಷ್ಟು ಮಹಿಳಾ ಸಂಘಗಳಿವೆ. ಮುಂದಿನ ದಿನಗಳಲ್ಲಿ ವಿವಿಧೋದ್ದೇಶ ಸಹಕಾರಿ ಮಹಿಳಾ ಸಂಘಗಳನ್ನು ಪ್ರತೀ ತಾಲೂಕಿನಲ್ಲೂ ಪ್ರಾರಂಭ ಮಾಡುತ್ತೇವೆ. ಅದಕ್ಕೆ ಸರ್ಕಾರದಿಂದಲೇ ಬಂಡವಾಳ ಹೂಡುತ್ತೇವೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲಿದ್ದಾರೆ. ರಾಜ್ಯ ಕೂಡ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಅವರು ಹೇಳಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ರೈತರು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸ್ವಲ್ಪ ಅಡಚಣೆ ಇರಬಹುದು. ಸದನದಲ್ಲಿ ಯಶಸ್ವಿನಿ ಯೋಜನೆಗೆ ಕೆಲವರು ವಿರೋಧ ಮಾಡಿದ್ದರು. ಆದರೆ ಈ ಕ್ಷೇತ್ರಕ್ಕೆ ಸುದೀರ್ಘವಾದ ಇತಿಹಾಸವಿದೆ. ಮುಖ್ಯಮಂತ್ರಿಗಳು ಮತ್ತೆ ಯಶಸ್ವಿನಿ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಾರೆ ಎಂದು ಹೇಳಿದರು. ಸಹಕಾರಿ ಕ್ಷೇತ್ರಕ್ಕೆ ಏನೆಲ್ಲಾ ಕೊಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಮುಖ್ಯಮಂತ್ರಿಗಳು ಸಹಕಾರಿ ವಲಯಕ್ಕೆ ಹೆಚ್ಚಿನ ಮಹತ್ವ ನೀಡಿ, ಹೆಚ್ಚು ಅನುದಾನ ಘೋಷಿಸಿದ್ದಾರೆ. ಯಶಸ್ವಿನಿ ಯೋಜನೆಗೆ ೩೦೦ ಕೋಟಿ ರೂ. ಅನುದಾನ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಇಡೀ ವಿಶ್ವದಲ್ಲೇ ಆರ್ಥಿಕ ಹಿನ್ನಡೆಯಾಗಿದ್ದರೂ, ಭಾರತದಲ್ಲಿ ಹಿನ್ನಡೆಯಾಗದಿರಲು ಸಹಕಾರಿ ಕ್ಷೇತ್ರ ಕಾರಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಭೈರತಿ ಬಸವರಾಜು, ಡಾ. ಕೆ.ಸುಧಾಕರ್, ಕೆ.ಗೋಪಾಲಯ್ಯ, ಆನಂದ್ ಸಿಂಗ್, ರಾಜ್ಯದ ವಿವಿಧ ಮಹಾ ಮಂಡಳಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಹಕಾರಿ ಇಲಾಖೆಯ ನಿಬಂಧಕರಾದ ಜಿಯಾವುಲ್ಲಾ ಇನ್ನಿತರರು ಉಪಸ್ಥಿತರಿದ್ದರು.

Translate »