ಮೈಸೂರು ಪಾಲಿಕೆ ವ್ಯಾಪ್ತಿಯ ನೀರಿನ ಬಡ್ಡಿ ಮನ್ನಾಕ್ಕೆಶಾಸಕ ನಾಗೇಂದ್ರ ಆಗ್ರಹ
ಮೈಸೂರು

ಮೈಸೂರು ಪಾಲಿಕೆ ವ್ಯಾಪ್ತಿಯ ನೀರಿನ ಬಡ್ಡಿ ಮನ್ನಾಕ್ಕೆಶಾಸಕ ನಾಗೇಂದ್ರ ಆಗ್ರಹ

March 22, 2022

ಮೈಸೂರು,ಮಾ.21(ಪಿಎಂ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಶುಲ್ಕದ ಬಾಕಿ ಮೊತ್ತಕ್ಕೆ ವಿಧಿಸಿರುವ ಬಡ್ಡಿಯನ್ನು ಒಂದು ಬಾರಿಗೆ ಮನ್ನಾ ಮಾಡುವಂತೆ ಶಾಸಕ ಎಲ್.ನಾಗೇಂದ್ರ ಸದನದಲ್ಲಿ ಆಗ್ರಹಿಸಿದರು. ಪ್ರಸ್ತುತ 220 ಕೋಟಿ ಬಾಕಿ ಇದ್ದು, ಈ ಸಂಬಂಧ 74 ಕೋಟಿ ರೂ. ಬಡ್ಡಿ ವಿಧಿಸಲಾಗಿದೆ. ಬಡ ಜನರ ಹಿತದೃಷ್ಟಿಯಿಂದ ಸರ್ಕಾರ ಬಡ್ಡಿ ಮನ್ನಾ ಮಾಡಬೇಕು. ಈ ಸಂಬಂಧ ನಗರಾಭಿವೃದ್ಧಿ ಸಚಿವ ಭೈರತಿ ಬಸವ ರಾಜು ಅವರು ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೈಸೂರು ಪಾಲಿಕೆಯಿಂದ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಸಾರ್ವಜನಿಕರೂ ಮನವಿ ಸಲ್ಲಿಸಿ ದ್ದಾರೆ. ಮಾನವೀಯ ದೃಷ್ಟಿಯಲ್ಲಿ ಒಮ್ಮೆಗೆ ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾ ಯಿಸಿದರು. ಈ ಬಡ್ಡಿ ಹಣದಲ್ಲಿ ಪಾಲಿಕೆ ನಡೆಸುವುದು ಸರಿಯೇ? ಎಂದು ಪ್ರಶ್ನಿ ಸಿದ ಅವರು, ಬಡ್ಡಿ ಮನ್ನಾದ ಮನವಿ ಸಂಬಂಧ ಆರ್ಥಿಕ ಇಲಾಖೆಗೆ ಪರಿಶೀಲಿ ಸಲು ಕಳುಹಿಸಲಾಗಿದೆ. ಅದರ ಶಿಫಾರಸ್ಸಿ ನಂತೆ ಮುಂದಿನ ಕ್ರಮ ಕೈಗೊಳ್ಳಲಾಗು ವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಿಳಿಸಿದ್ದಾರೆ.

Translate »