ರಾಜ್ಯಾದ್ಯಂತ ಬರುವ ವರ್ಷದಿಂದಲೇ ಟೆಕ್ನಿಕಲ್ ಶಾಲೆಗಳ ಆರಂಭ
ಮೈಸೂರು

ರಾಜ್ಯಾದ್ಯಂತ ಬರುವ ವರ್ಷದಿಂದಲೇ ಟೆಕ್ನಿಕಲ್ ಶಾಲೆಗಳ ಆರಂಭ

August 18, 2021

ಬೆAಗಳೂರು, ಆ.೧೭ (ಕೆಎಂಶಿ)- ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಟೆಕ್ನಿಕಲ್ ಶಾಲೆಗಳನ್ನು ರಾಜ್ಯಾದ್ಯಂತ ಪ್ರಾರಂಭಿಸಲು ರಾಜ್ಯ ಸರ್ಕಾರ ಇಂದಿಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಟೆಕ್ನಿಕಲ್ ಶಾಲೆಗಳನ್ನು ಅರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿ ಸಿದರು. ಅಭಿವೃದ್ಧಿ ಹೊಂದಿದ ರಾಷ್ಟçಗಳಲ್ಲಿ ಇಂತಹ ಶಾಲೆಗಳನ್ನು ನಡೆಸುತ್ತಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಶಾಲೆಗಳನ್ನು ತೆರೆಯಬೇಕು. ಗ್ರಾಮೀಣ ಮಕ್ಕಳಿಗೆ ಪ್ರೌಢ ಶಿಕ್ಷಣ ದಲ್ಲೇ ತಂತ್ರಜ್ಞಾನ ಅಧ್ಯ ಯನ ಶಿಕ್ಷಣ ನೀಡುವಂತಾ ಗಬೇಕು. ಮುಂದಿನ ಶೈಕ್ಷ ಣಿಕ ವರ್ಷದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಲಾ ಒಂದು ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲೇಬೇಕು. ಜಿಲ್ಲೆಯ ಯಾವ ಸರ್ಕಾರಿ ಶಾಲೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತದೆಯೋ ಅಂತಹ ಶಾಲೆಯನ್ನು ಆಯ್ಕೆ ಮಾಡಿ, ಈ ಶಿಕ್ಷಣವನ್ನು ಪ್ರಾರಂಭಿಸಿ.

ಡಿಪ್ಲೊಮಾ ಮತ್ತು ಐಟಿಐನಲ್ಲಿ ನೀಡಲಾಗುತ್ತಿರುವ ಶಿಕ್ಷಣವನ್ನು ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣವನ್ನರಿತು, ಮುಂದಿನ ದಿನಗಳಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಮುಖ್ಯಮಂತ್ರಿಯವರು ಅಭಿಪ್ರಾಯಿಸಿದರು. ರಾಷ್ಟಿçÃಯ ಶಿಕ್ಷಣ ನೀತಿ ಯಥಾವತ್ತಾಗಿ ರಾಜ್ಯದಲ್ಲಿ ಅನುಷ್ಠಾನಗೊಳ್ಳಬೇಕು. ಇದಕ್ಕೆ ಆದ್ಯತೆ ನೀಡುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ನಾರಾಯಣ್ ಅವರ ಕೆಲವು ಸಲಹೆಗಳಿಗೆ ಸಭೆಯಲ್ಲೇ ಮನ್ನಣೆ ನೀಡಿದ ಮುಖ್ಯಮಂತ್ರಿಯವರು ಅಧ್ಯಾಪಕರ ಖಜಾನೆ ಆರಂಭಿಸುವ ತೀರ್ಮಾನ ಕೈಗೊಳ್ಳಲಾಯಿತು.

ಸಿಇಟಿ ಮಾದರಿಯಲ್ಲೇ ಪ್ರತ್ಯೇಕ ಕೇಂದ್ರವನ್ನು ಸ್ಥಾಪಿಸಲಾಗುವುದು, ಈ ಮೂಲಕ ಅಧ್ಯಾಪಕ ವೃತ್ತಿ ಬಯಸುವವರು ಈ ಕೇಂದ್ರದಲ್ಲಿ ಪರೀಕ್ಷೆ ತೆಗೆದುಕೊಂಡು, ತೇರ್ಗಡೆ ಹೊಂದಿದರೆ ಅಂತಹವರಿಗೆ ವಿಶ್ವವಿದ್ಯಾಲಯ, ಸರ್ಕಾರಿ, ಮತ್ತು ಅರೆ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇರ್ಪಡೆಗೊಳ್ಳಬಹುದು.

ಖಜಾನೆಯಲ್ಲಿ ತೇರ್ಗಡೆಗೊಂಡವರನ್ನೇ ಮುಂದಿನ ದಿನಗಳಲ್ಲಿ ಯಾವುದೇ ಪರೀಕ್ಷೆ ನಡೆಸದೇ ನೇರವಾಗಿ ಈ ಸಂಸ್ಥೆಗಳು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಭ್ರಷ್ಟಾಚಾರ ತಪ್ಪುವುದಲ್ಲದೆ, ಅರ್ಹತೆವುಳ್ಳವರಿಗೆ ಅವಕಾಶಗಳು ಲಭ್ಯವಾಗುತ್ತದೆ. ಈ ಖಜಾನೆಯನ್ನು ತಕ್ಷಣವೇ ಪ್ರಾರಂಭಿಸಲು ರೂಪುರೇಷೆ ಸಿದ್ಧಪಡಿಸುವಂತೆ ಅಧಿಕಾರಿ ಗಳಿಗೆ ಸೂಚಿಸಲಾಯಿತು. ಅರೆಕಾಲಿಕ ಉಪನ್ಯಾಸಕರನ್ನು ಇನ್ನು ಮುಂದೆ ಇಂತಹ ಖಜಾನೆ ಮೂಲಕವೇ ಭರಿಸಿಕೊಳ್ಳಬಹುದು. ಇದರಿಂದ ಮಧ್ಯವರ್ತಿಗಳಿಗೆ ನೀಡಲಾ ಗುತ್ತಿರುವ ಹಣವನ್ನು ತಪ್ಪಿಸಬಹುದಾಗಿದೆ. ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಕಾಲೇಜು ಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಯವರು, ಮುಂದಿನ ಆಯವ್ಯಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಅನುದಾನ ನೀಡುವುದಾಗಿಯೂ ತಿಳಿಸಿದರು.

Translate »