ಪ್ರಧಾನಿ ಮೋದಿ ಸ್ವಂತಕ್ಕಾಗಿ ಏನು ಮಾಡುತ್ತಿಲ್ಲ; ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ
ಮೈಸೂರು

ಪ್ರಧಾನಿ ಮೋದಿ ಸ್ವಂತಕ್ಕಾಗಿ ಏನು ಮಾಡುತ್ತಿಲ್ಲ; ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ

August 18, 2021

ಮೈಸೂರು,ಆ.೧೭(ಆರ್‌ಕೆಬಿ)-ಪ್ರಧಾನಿ ಮೋದಿ ಸ್ವಂತಕ್ಕಾಗಿ ಏನು ಮಾಡಿಲ್ಲ, ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಬಣ್ಣಿಸಿದರು.

ಮೈಸೂರಿನ ಮೇದರ ಬ್ಲಾಕ್‌ನ ಅಬ್ದುಲ್ ಕಲಾಂ ವೃತ್ತದ ಬಳಿ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಗರ ಮತ್ತು ಜಿಲ್ಲಾ ಗ್ರಾಮಾಂತರದ ವತಿಯಿಂದ ಮಂಗಳವಾರ ಆಯೋಜಿಸಿದ್ದ `ಜನಾಶೀರ್ವಾದ ಯಾತ್ರೆ’ಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸ್ವಂತಕ್ಕಾಗಿ ಏನೂ ಮಾಡುತ್ತಿಲ್ಲ. ದೇಶಕ್ಕಾಗಿ, ದೇಶದ ಭದ್ರತೆಗಾಗಿ, ಗೌರವಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ ವಿಪಕ್ಷಗಳು, ಭ್ರಷ್ಟಾಚಾರಕ್ಕಾಗಿ ಮಾರಿಕೊಂಡವರು, ಲಕ್ಷಾಂತರ ಕೋಟಿ ರೂ. ಲೂಟಿ ಹೊಡೆದವರೆಲ್ಲಾ ಟೀಕಿಸು ತ್ತಿದ್ದಾರೆ. ನಮ್ಮ ಪ್ರದಾನಿ ಮೋದಿಯವರ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಕೃಷಿ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ ಅವರು, ಕೋವಿಡ್-೧೯ ಸಂದರ್ಭದಲ್ಲೂ ನಮ್ಮ ದೇಶ ಆಹಾರ, ತರಕಾರಿ, ಹಣ್ಣು, ಗೋಧಿ ರಫ್ತು ಮಾಡುತ್ತಿದೆ. ಇದು ಹೆಮ್ಮೆಪಡುವ ವಿಚಾರ. ಇದರಲ್ಲಿ ರೈತರ ಪರಿಶ್ರಮವಿದೆ. ಅಂತಹ ರೈತರಿಗೆ ಮೋದಿ ಸರ್ಕಾರ ವಿಶೇಷವಾಗಿ ಪ್ರೋತ್ಸಾಹ ನೀಡುತ್ತಿದೆ. ರೈತ ತನ್ನ ಬೆಳೆ ನಾಶವಾದರೆ ಎರಡು ತಿಂಗಳ ಒಳಗಾಗಿ ಸ್ವತಃ ತಾನೇ ಅದರ ಫೋಟೋ ತೆಗೆದು ಆಪ್‌ನಲ್ಲಿ ಹಾಕಿದರೆ, ಅವರಿಗೆ ವಿಮಾ ಸೌಲಭ್ಯ ದೊರೆಯಲಿದೆ ಎಂದರು.

ಕೃಷಿಗೆ ಆದ್ಯತೆ: ಕೃಷಿಕರ ಆತ್ಮಹತ್ಯೆ ದೇಶಕ್ಕೆ ಅವಮಾನವೇ ಹೊರತು ಗೌರವ ತರುವುದಿಲ್ಲ. ಹಾಗಾಗಿ ರೈತರ ಅಭಿವೃದ್ಧಿಗೆ ಹಣ, ಸಬ್ಸಿಡಿ, ಸಾಲ ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ. ಹಿಂದಿನ ಯುಪಿಎ ಸರ್ಕಾರ ಕೃಷಿಗೆ ನೀಡಿದ ಬಜೆಟ್ ೨೧,೦೦೦ ಕೋಟಿ. ಆದರೆ ಇಂದು ಮೋದಿ ಸರ್ಕಾರ ಕೃಷಿ ಅಭಿವೃದ್ಧಿಗೆ ೧,೨೩,೦೦೦ ಕೋಟಿ ರೂ. ಬಜೆಟ್ ನೀಡಿದೆ. ಜೊತೆಗೆ ೮೫೦೦ ಕೋಟಿ ರೂ. ಕೃಷಿ ಸಂಶೋಧನಾ ಸಂಸ್ಥೆಗಳಿಗೆ ನೀಡಿದೆ. ಒಂದು ಲಕ್ಷ ಕೋಟಿ ರೂ. ಕೃಷಿ ಮೂಲಭೂತ ಸೌಕರ್ಯಕ್ಕೆ ನೀಡಿದೆ ಎಂದು ತಿಳಿಸಿದರು.
ನಾಲ್ವಡಿ ಅವರು ನಮಗೆ ಪ್ರೇರಣೆ: ನವ ಕರ್ನಾಟಕ, ನವ ಮೈಸೂರು ನಿರ್ಮಾಣಕ್ಕೆ ಶ್ರಮಿಸಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ನಮಗೆ ಪ್ರೇರಣೆ. ಯಾವುದೇ ಸಾಗಾಣಿಕೆ ವ್ಯವಸ್ಥೆ ಇಲ್ಲದ ಕಾಲದಲ್ಲಿ ಕೃಷಿ ಅಭಿವೃದ್ದಿಗೆ ಶ್ರಮಿಸಿದವರು. ಕೃಷಿ, ಶಿಕ್ಷಣ, ನೀರಿಗಾಗಿ ಅವರ ಶ್ರಮ ನಮಗೆ ಪ್ರೇರಣಾ ಶಕ್ತಿ. ಅವರ ಸಂಕಲ್ಪದ ಅಡಿಯಲ್ಲಿ ನಾವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

ರಾಕ್ಷಸರ ಬೆಳಸಿದ್ದರ ಫಲ: ರಾಕ್ಷಸರನ್ನು ಬೆಳೆಸಿದರೆ ಏನಾಗುತ್ತದೆ ಎಂಬುದಕ್ಕೆ ಅಫ್ಘಾನಿಸ್ತಾನ ದಲ್ಲಿ ನಡೆದಿರುವ ಕ್ಷೆÆÃಭೆಯೇ ನಿದರ್ಶನ. ಪ್ರಜಾತಂತ್ರ ವ್ಯವಸ್ಥೆಗೆ ಗೌರವ ನೀಡುವ ರಾಷ್ಟç ನಮ್ಮ ಭಾರತ. ಹಾಗಾಗಿಯೇ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದೆ. ಭಯೋತ್ಪಾದಕರ ಬೆಳೆಸಿದರೆ ಯಾವ ದೇಶಕ್ಕೂ ಉಳಿಗಾಲವಿಲ್ಲ. ನಮ್ಮ ಕಣ್ಣಮುಂದೆಯೇ ಇದೆ. ಅಫ್ಘಾನಿಸ್ತಾನದ ಸ್ಥಿತಿ ವಿಶ್ವದ ಬೇರೆ ಯಾವ ದೇಶಕ್ಕೂ ಬರಬಾರದು ಎಂಬುದಾಗಿ ಎಲ್ಲಾ ದೇಶಗಳು ಹೇಳುತ್ತಿವೆ ಎಂದರು. ನಮ್ಮ ದೇಶದ ಬಗ್ಗೆ ಎಲ್ಲಾ ದೇಶಗಳಲ್ಲೂ ಬಹಳ ಗೌರವವಿದೆ. ಭಾರತದ ಪ್ರಧಾನಿ ಮಾತನಾಡುತ್ತಾರೆಂದರೆ ಇಡೀ ವಿಶ್ವವೇ ಗಂಭೀರವಾಗಿ ಆಲಿಸುತ್ತದೆ. ಈ ರೀತಿ ವಿದೇಶದ ಬಗ್ಗೆ, ವೈರಿಗಳ ಬಗ್ಗೆ ಮಾತನಾಡುವಾಗ ನಮಗೆ ದೇಶ ಮುಖ್ಯವೇ ಹೊರತು ಪಕ್ಷವಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಪಾಕಿಸ್ತಾನಕ್ಕೆ ಹೋದರೆ ಭಾರತದ ಬಗ್ಗೆ, ಭಾರತದ ಪ್ರಧಾನಿಯ ಬಗ್ಗೆ ಅವಹೇಳನವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡುತ್ತಿದೆ. ನಮಗೆ ದೇಶ ಮೊದಲು, ನಂತರದ್ದು ಪಕ್ಷ ಎಂಬುದನ್ನು ಅನೇಕ ಹಿರಿಯರು ಕಲಿಸಿಕೊಟ್ಟಿದ್ದಾರೆ ಎಂದರು. ಕೇವಲ ಇಬ್ಬರು ಸದಸ್ಯರಿದ್ದ ಬಿಜೆಪಿ ಇಂದು ವಿಶ್ವದ ನಂಬರ್ ಒನ್ ಪಕ್ಷ ಎನಿಸಿಕೊಂಡಿದೆ. ಇದಕ್ಕೆ ಪಕ್ಷದ ಹಿರಿಯರ ಬಲಿದಾನ, ತ್ಯಾಗ ಕಾರಣ. ಒಮ್ಮೆಯೂ ಯಾವುದೇ ಚುನಾವಣೆಯಲ್ಲಿ ನಿಲ್ಲದೇ, ಪಕ್ಷವೇ ತನ್ನ ತಾಯಿ ಎಂದು ತಿಳಿದು ಕಚೇರಿಯಲ್ಲಿಯೇ ಕುಳಿತು ಪಕ್ಷ ಕಟ್ಟಿದ ಅನೇಕ ಮಹನೀಯರಿದ್ದಾರೆ ಎಂದು ಅವರನ್ನು ಸ್ಮರಿಸಿಕೊಂಡರು.

Translate »