ಅಲ್ಪಸಂಖ್ಯಾತ ಪ್ರಾರ್ಥನಾ ಮಂದಿರಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಆಯೋಗ
ಮೈಸೂರು

ಅಲ್ಪಸಂಖ್ಯಾತ ಪ್ರಾರ್ಥನಾ ಮಂದಿರಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಆಯೋಗ

June 1, 2020

ಬೆಂಗಳೂರು, ಮೇ 31- ಕೊರೊನಾ ವೈರಸ್ ಲಾಕ್‍ಡೌನ್ 5.0 ಜಾರಿಯಾಗು ತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅಲ್ಪಸಂಖ್ಯಾ ತರ ಪ್ರಾರ್ಥನಾ ಮಂದಿರಗಳನ್ನು ತೆರೆ ಯಲು ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಅಲ್ಪಸಂಖ್ಯಾತರ ಆಯೋಗ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಜೂ. 8ರಿಂದ ಮಸೀದಿ, ದರ್ಗಾ ತೆರೆಯಲು ಅನುಮತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದಿಂದ ಮಾರ್ಗ ಸೂಚಿ ಬಿಡುಗಡೆ ಮಾಡಿದೆ.

ಮಾರ್ಗಸೂಚಿಯಲ್ಲಿನ ಪ್ರಮುಖಾಂಶ ಗಳು: ಎಲ್ಲರೂ ಮನೆಯಲ್ಲೇ ಸ್ವಚ್ಛತೆ ಮಾಡಿ ಕೊಂಡು ಬರಬೇಕು, ಮಸೀದಿ ಆವರಣದಲ್ಲಿ ನಲ್ಲಿ ಬಳಕೆ, ಶೌಚಾಲಯಗಳನ್ನು ಶುಚಿಯಾಗಿ ಇಡಬೇಕು, ಮಸೀದಿಯ ಒಳಗೆ, ಹೊರಗೆ ಹೋಗಲು ಒಂದೇ ದ್ವಾರ, ಪ್ರಾರ್ಥನೆಗೂ ಮುನ್ನ ಸಭಾಂ ಗಣದಲ್ಲಿ ಫ್ಯೂಮಿಗೇಷನ್ (ರಾಸಾಯನಿಕ ಗ್ಯಾಸ್ ಸಿಂಪಡಣೆ ಮೂಲಕ ಸೋಂಕು ನಿವಾರಣೆ) ಕಡ್ಡಾಯ, ಪ್ರಾರ್ಥನಾ ಸಭಾಂಗಣದ ಪ್ರವೇಶಕ್ಕೂ ಮುನ್ನ ಎಲ್ಲರ ದೇಹದ ಉಷ್ಣಾಂಶ ಪರೀಕ್ಷೆ ಕಡ್ಡಾಯ, ಮಸೀದಿಯಲ್ಲಿ ಕನಿಷ್ಠ 1-2 ಮೀಟರ್ ಸಾಮಾಜಿಕ ಅಂತರ ಕಡ್ಡಾಯ, 10-15 ನಿಮಿಷಗಳಲ್ಲಿ ಪ್ರಾರ್ಥನೆಯನ್ನು ಮುಗಿಸಬೇಕು, ಪ್ರಾರ್ಥನೆಗೆ ಬರುವವರು ಪ್ರೇಯರ್ ಮ್ಯಾಟ್ ತರಬೇಕು, ಸುನ್ನತ್, ನಫೀಲ್ ಪ್ರಾರ್ಥನೆ ಮನೆಯಲ್ಲೇ ಮಾಡಬೇಕು, ಮಸೀದಿ ಆವರಣದಲ್ಲಿ ನಿಂತು ಚರ್ಚೆಯಲ್ಲಿ ತೊಡಗಬಾರದು, ಮಸೀದಿ, ದರ್ಗಾ ಆವರಣದಲ್ಲಿ ಭಿಕ್ಷಾಟನೆ ನಿಷೇಧ, ಗೋರಿಗಳ ಮೇಲೆ ನಮಸ್ಕರಿಸುವುದು ನಿಷೇಧ.

Translate »