`ಸೇವಾವಧಿಯಲ್ಲಿ ಅರಣ್ಯ ಸಂಪತ್ತಿನ ರಕ್ಷಣೆಗೆ ಬದ್ಧತೆ, ದಕ್ಷತೆ ತೋರಿ’
ಮೈಸೂರು

`ಸೇವಾವಧಿಯಲ್ಲಿ ಅರಣ್ಯ ಸಂಪತ್ತಿನ ರಕ್ಷಣೆಗೆ ಬದ್ಧತೆ, ದಕ್ಷತೆ ತೋರಿ’

October 21, 2020

ಮೈಸೂರು,ಅ.20(ಎಂಟಿವೈ)-ಭವಿಷ್ಯದ ಪೀಳಿಗೆಗಾಗಿ ಅರಣ್ಯ ಸಂಪತ್ತಿನ ಸಂರಕ್ಷಣೆ ಅತ್ಯಗತ್ಯವಾಗಿದೆ. ಅರಣ್ಯ ಇಲಾಖೆಗೆ ಹೊಸ ದಾಗಿ ಆಯ್ಕೆಯಾದ ಸಿಬ್ಬಂದಿ ತಮ್ಮ ಸೇವಾ ವಧಿಯಲ್ಲಿ ದಕ್ಷತೆಯಿಂದ ಕೆಲಸ ಮಾಡಬೇಕು. ಅರಣ್ಯ ಸಂಪತ್ತಿನ ರಕ್ಷಣೆಗೆ ಪಣ ತೊಡಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ರೀತು ಕಕ್ಕರ್ ಸಲಹೆ ನೀಡಿದರು.

ಮೈಸೂರು ತಾಲೂಕಿನ ಇಲವಾಲದಲ್ಲಿ ರುವ ಅರಣ್ಯ ತರಬೇತಿ ಕೇಂದ್ರದಲ್ಲಿ 4ನೇ ತಂಡದ ಉಪವಲಯ ಅರಣ್ಯಾಧಿಕಾರಿ ಮೋಜಣಿದಾರರ ಬುನಾದಿ ತರಬೇತಿ ಘಟಿ ಕೋತ್ಸವದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಪ್ರಮಾಣಪತ್ರ ವಿತರಿಸಿದ ಅವರು, ಧಾರ ವಾಡದ ಗುಂಗರಗಟ್ಟಿಯಲ್ಲಿರುವ ಕರ್ನಾ ಟಕ ರಾಜ್ಯ ಅರಣ್ಯ ಅಕಾಡೆಮಿ ಹೊರತು ಪಡಿಸಿದರೆ ಇಲವಾಲದ ತರಬೇತಿ ಕೇಂದ್ರ ಅತ್ಯುತ್ತಮವಾಗಿದೆ. ಇಲ್ಲಿ ತರಬೇತಿ ಪಡೆದ ಡಿಆರ್‍ಎಫ್, ವಿವಿಧ ವರ್ಗಗಳ ಸಿಬ್ಬಂದಿ ಸೇವಾ ದಕ್ಷತೆ ಮೈಗೂಡಿಸಿಕೊಂಡಿರುವುದು ಶ್ಲಾಘನೀಯ. ಸೇವೆಗೆ ನಿಯೋಜನೆಗೊಂಡ ಸ್ಥಳದಲ್ಲಿ ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಪಣ ತೊಟ್ಟು ಕರ್ತವ್ಯ ನಿರ್ವಹಿಸಿರಿ. 4ನೇ ತಂಡದ ಡಿಆರ್‍ಎಫ್‍ಒ ಮೋಜಣಿದಾರರ ತಂಡದಲ್ಲಿ ತರಬೇತಿ ಪಡೆದು ವಿವಿಧೆಡೆ ಕರ್ತವ್ಯಕ್ಕೆ ತೆರಳುತ್ತಿರುವ ಎಲ್ಲಾ ಸಿಬ್ಬಂದಿಗಳ ಭವಿಷ್ಯ ಉಜ್ವಲವಾಗಲೆಂದು ಹಾರೈಸುವೆ ಎಂದರು.

ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾ ಲಾಲ್ ಮಾತನಾಡಿ, ಇಲವಾಲದ ತರಬೇತಿ ಕೇಂದ್ರದಲ್ಲಿ ಮೊದಲಿಂದಲೂ ಉತ್ತಮ ತರಬೇತಿ ನೀಡಲಾಗುತ್ತಿದೆ. 4ನೇ ತಂಡದ ಉಪವಲಯ ಅರಣ್ಯಾಧಿಕಾರಿಗಳು, ಮೋಜಣಿ ದಾರರು ತರಬೇತಿ ವೇಳೆ ಜ್ಞಾನವನ್ನು ಮೇಲ್ಮ ಟ್ಟಕ್ಕೇರಿಸಿಕೊಂಡಿದ್ದಾರೆ. ಕೋವಿಡ್ ಸಂದರ್ಭ ದಲ್ಲಿಯೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಯಶಸ್ವಿಯಾಗಿ ತರಬೇತಿ ಶಿಬಿರ ನಡೆಸಲಾಗಿದೆ. 15 ತಿಂಗಳ ತರಬೇತಿಯಲ್ಲಿ 15 ವಿಷಯಗಳಲ್ಲಿ ತರಬೇತಿ ನೀಡಿ ಸೇವೆಗೆ ಅಣಿಗೊಳಿಸಲಾಗಿದೆ. ಪ್ರಶಿಕ್ಷಣಾರ್ಥಿಗಳಲ್ಲಿ ಜಿ.ಪಿ.ಭರತ್ ಅತ್ಯುತ್ತಮ ಪ್ರದರ್ಶನ ನೀಡಿ, ಮೊದಲ ರ್ಯಾಂಕ್ ಗಳಿಸಿರುವುದು ಶ್ಲಾಘ ನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಎಫ್‍ಗಳಾದ ಕೆ.ಸಿ.ಪ್ರಶಾಂತ್ ಕುಮಾರ್, ಅಂಥೋಣಿ ಎಸ್.ಮರಿ ಯಪ್ಪ, ಎಂ.ಜಿ.ಅಲೆಗ್ಸಾಂಡರ್, ಎಸಿಎಫ್ ಸೀಮಾ, ಆರ್‍ಎಫ್‍ಓಗಳಾದ ಎಸ್.ಡಿ. ರಾಜೇಶ್, ಅನಿತಾ, ರವೀಂದ್ರ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »