ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ನಿರೀಕ್ಷೆಯಲ್ಲಿ ಪಾಲಿಕೆ
ಮೈಸೂರು

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ನಿರೀಕ್ಷೆಯಲ್ಲಿ ಪಾಲಿಕೆ

November 3, 2020

ಮೈಸೂರು, ನ.2(ಆರ್‍ಕೆಬಿ)- ದೀಪಾವಳಿ ಹಬ್ಬ ಸಮೀಪಿಸು ತ್ತಿದ್ದು, ಕೋವಿಡ್ ನಡುವೆಯೇ ಪಟಾಕಿ ಮಾರಾಟ ಮಾಡುವ ಕುರಿತಂತೆ ಮೈಸೂರು ಮಹಾನಗರಪಾಲಿಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಯ ನಿರೀಕ್ಷೆಯಲ್ಲಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಕೋವಿಡ್ ರೋಗಿಗಳು ಮತ್ತು ಚೇತ ರಿಸಿಕೊಳ್ಳುತ್ತಿರುವ ರೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತವೆ ಮತ್ತು ಉಸಿರಾಟದ ತೊಂದರೆಯಿಂದ ಬಳಲು ತ್ತಿರುವ ಇತರರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾ ಗುತ್ತವೆ ಎಂಬ ಅಂಶ ಆಧರಿಸಿ, ಕೇಂದ್ರ ಆರೋಗ್ಯ ಸಚಿವಾಲ ಯದ ಮಾರ್ಗಸೂಚಿಯನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ಮೈಸೂರು ಮಹಾನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಪಟಾಕಿ ಅಂಗಡಿಗಳ ಮುಂದೆ ಹೆಚ್ಚು ಸಂಖ್ಯೆಯಲ್ಲಿ ಜನ ಸೇರು ವುದನ್ನು ತಪ್ಪಿಸುವ ದೃಷ್ಟಿಯಿಂದ ಪರವಾನಗಿ ಪಡೆಯುವ ವ್ಯಾಪಾರಿ ಗಳಿಗೆ ಜೆ.ಕೆ.ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವ ಕುರಿತು ಯೋಚಿಸಲಾಗುತ್ತಿದೆ ಎಂದರು. ಪರಿಸರ ಮತ್ತು ಕೋವಿಡ್ ರೋಗಿಗಳ ಹಿತದೃಷ್ಟಿಯಿಂದ ನಾಗರಿಕರು ಪಟಾಕಿ ಸಿಡಿಸದಿರಲು ಮನವಿ ಮಾಡಿದರು. ಈ ಮೂಲಕ ಕೋವಿಡ್‍ನಿಂದ ತೊಂದರೆಗೆ ಸಿಲುಕುವ, ಸಿಲುಕುತ್ತಿರುವವರ ಹಿತದೃಷ್ಟಿಯಿಂದ ಪಟಾಕಿ ಸಿಡಿಸದಿ ರುವಂತೆಯೂ ಮನವಿ ಮಾಡಲಾಗುವುದು ಎಂದು ಹೇಳಿದರು.

 

 

 

 

 

 

 

Translate »