ನಂ.ಗೂಡು ಬಳಿ ಪಂಚಳ್ಳಿಹುಂಡಿ ಗ್ರಾಮದಲ್ಲಿ ಘಟನೆ ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ
ನಂಜನಗೂಡು,ನ.2-ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಆತನ ಸ್ನೇಹಿತನೇ ಚಾಕುವಿ ನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಂಜನಗೂಡು ತಾಲೂಕು ಪಂಚಳ್ಳಿಹುಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಪಂಚಳ್ಳಿಹುಂಡಿ ಗ್ರಾಮದ ಮಂಜುನಾಥ್ ಎಂಬುವರ ಪುತ್ರ ರೋಹನ್(19) ಮಾರಣಾಂತಿಕ ಹಲ್ಲೆಗೆ ಒಳಗಾದವ ನಾಗಿದ್ದು, ಆತನ ಸ್ನೇಹಿತ ತಾಂಡವಪುರ ನಿವಾಸಿ ಇರ್ಷಾದ್ ಎಂಬುವರ ಪುತ್ರ ದಿಲ್‍ಶಾದ್(19) ಹತ್ಯೆಗೆ ಯತ್ನಿಸಿದವ ನಾಗಿದ್ದಾನೆ. ಇವರಿಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, ಇಂದು ರಾತ್ರಿ ರೋಹನ್ ಮನೆಗೆ ಇರ್ಷಾದ್ ತೆರಳಿದ್ದಾನೆ. ಅವರ ಮನೆಯ ಮೊದಲ ಅಂತಸ್ತಿನಲ್ಲಿರುವ ಕೊಠಡಿಯಲ್ಲಿ ರೋಹನ್ ಇದ್ದ. ಆತನ ಕುಟುಂಬದವರು ನೆಲ ಅಂತಸ್ತಿನಲ್ಲಿದ್ದರು. ಇದ್ದಕ್ಕಿ ದ್ದಂತೆ ಚಾಕುವಿನಿಂದ ಮೋಹನ್‍ನ ಕುತ್ತಿಗೆಗೆ ಇರ್ಷಾದ್ ಇರಿಯಲು ಯತ್ನಿಸಿದ್ದಾನೆ. ಮಗನ ಅರಚಾಟ ಕೇಳಿ ಮಹಡಿ ಮೇಲಿನ ಕೊಠಡಿಗೆ ತೆರಳಿದ ಮಂಜುನಾಥ್, ಇರ್ಷಾದ್‍ನಿಂದ ಮಗನನ್ನು ಬಿಡಿಸಿದ್ದಾರೆ. ಈ ವಿಷಯ ತಿಳಿಯುತ್ತಿ ದ್ದಂತೆಯೇ ಜಮಾಯಿಸಿದ ಗ್ರಾಮಸ್ಥರು ಇರ್ಷಾದ್‍ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರೋಹನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿರುವುದಾಗಿ ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತ ತಳವಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಇಬ್ಬರೂ ಯುವಕರು ಬಾಲ್ಯ ಸ್ನೇಹಿತರಾಗಿದ್ದು, ಈ ಕೊಲೆ ಯತ್ನ ಏಕೆ ನಡೆದಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಇಬ್ಬರೂ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನು ವಿಚಾರಣೆಗೊಳಪಡಿಸಿದ ನಂತರ ಕೊಲೆ ಯತ್ನಕ್ಕೆ ಕಾರಣ ತಿಳಿಯಲಿದೆ ಎಂದು ಅವರು ಹೇಳಿದರು. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ, ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ನಂಜನಗೂಡು ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸತೀಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.