ಮೈಸೂರು,ನ.2(ಪಿಎಂ)-ಕಬ್ಬಿಗೆ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಎಫ್‍ಆರ್‍ಪಿ ದರ ನಿಗದಿಗೊಳಿಸಿದೆ ಹಾಗೂ ರಾಜ್ಯ ಸರ್ಕಾರ ಎಸ್‍ಎಪಿ ದರ ನಿಗದಿ ಮಾಡದೇ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ಜಿಲ್ಲಾ ಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು, ಒಂದು ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ಕಬ್ಬಿನ ಜಲ್ಲೆ ಹಿಡಿದು ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು, ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆಯು ಟನ್ ಕಬ್ಬು ಬೆಳೆಯಲು 3,050 ರೂ. ವೆಚ್ಚಾ ಗುತ್ತದೆಂದು ವರದಿ ನೀಡಿದೆ. ಇದರ ಪ್ರಕಾರ ಕನಿಷ್ಠ 3,300 ರೂ. ಎಫ್‍ಆರ್‍ಪಿ ದರವನ್ನು (ನ್ಯಾಯಸಮ್ಮತ ಮತ್ತು ಮೌಲ್ಯಾಧಾರಿತ ಕನಿಷ್ಠ ಬೆಂಬಲ ಬೆಲ) ಟನ್ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿ ಮಾಡ ಬೇಕಿತ್ತು. ಆದರೆ ಕೇವಲ 2,850 ರೂ. ನಿಗದಿ ಮಾಡಿದೆ. 2 ವರ್ಷಗಳಿಂದ 2,750 ರೂ. ಇತ್ತು. ಈಗ ಕೇವಲ 100 ರೂ. ಹೆಚ್ಚಳ ಮಾಡಿದ್ದಾರೆ. ಇದು ಅವೈಜ್ಞಾನಿಕ ಎಂದು ಖಂಡಿಸಿದರು.
ರಾಜ್ಯದಲ್ಲಿ ಎಸ್‍ಎಪಿ (ರಾಜ್ಯ ಸಲಹಾ ದರ) ಕಾಯ್ದೆ ಜಾರಿಯಾದ ಬಳಿಕ ಸಕ್ಕರೆ ಕಾರ್ಖಾನೆ ಗಳು ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ತೊರಿಸಿ ರೈತನಿಗೆ ಕಡಿಮೆ ದರ ಪಾವತಿ ಸುವ ತಂತ್ರಗಾರಿಕೆ ಅನುಸರಿಸುತ್ತಿವೆ. ಈ ಸಂಬಂಧ ಅ.15ರಂದು ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಚರ್ಚೆಯಾಯಿತು. ಈ ವೇಳೆ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸುವುದಾಗಿ ಹಾಗೂ 10 ದಿನಗಳೊಳಗೆ ಎಸ್‍ಎಪಿ ದರ ನಿಗದಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ನಂಜನಗೂಡು ತಾಲೂಕಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಯಲ್ಲಿ ಟನ್ ಕಬ್ಬಿಗೆ ಕಳೆದ ವರ್ಷಕ್ಕಿಂತ 25 ರೂ. ಕಡಿಮೆ ಕೊಡಲಾಗುತ್ತಿದೆ. ಅಲ್ಲದೆ, 16-17 ತಿಂಗಳು ಕಳೆದರೂ ಕಾರ್ಖಾನೆ ವ್ಯಾಪ್ತಿಯ ಕಬ್ಬು ಕಟಾವು ಮಾಡದೇ ಹೊರ ಜಿಲ್ಲೆಯಿಂದ ಕಬ್ಬು ತರಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇ ಕೆಂದು ಜಿಲ್ಲಾಧಿಕಾರಿಗಳಿಗೆ ಅ.19ರಂದೇ ಮನವಿ ಸಲ್ಲಿಸಿದ್ದರೂ ಪ್ರಯೋಜನ ವಾಗಿಲ್ಲ ಎಂದು ದೂರಿದರು. ಭತ್ತ ಖರೀದಿ ಕೇಂದ್ರದಲ್ಲಿ ಎಕರೆಗೆ 17 ಕ್ವಿಂಟಾಲ್ ಮಾತ್ರ ಖರೀದಿ ಮಾಡಲಾಗುವುದು ಎಂಬ ಸರ್ಕಾರದ ಮಾನದಂಡ ಸರಿಯಲ್ಲ. ಕನಿಷ್ಠ 100 ಕ್ವಿಂಟಾಲ್ ಖರೀದಿ ಮಾಡ ಬೇಕು. ಅಲ್ಲದೆ, ಕನಿಷ್ಠ ಬೆಂಬಲ ಬೆಲೆಯೊಂ ದಿಗೆ 200 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು. ಉತ್ತರ ಕರ್ನಾಟಕ, ಹೈದರಾ ಬಾದ್ ಕರ್ನಾಟಕದ ಪ್ರವಾಹ ಪರಿಸ್ಥಿತಿ ಹಿನ್ನೆಲೆ ಯಲ್ಲಿ ಹಾನಿಗೀಡಾಗಿರುವ ಬೆಳೆಗಳಿಗೆ ವೈಜ್ಞಾ ನಿಕ ರೀತಿಯಲ್ಲಿ ಪರಿಹಾರ ಕೊಡಬೇಕು. ಪ್ರವಾಹಕ್ಕೆ ಸಿಲುಕಿದ ಗ್ರಾಮಗಳ ಹಾಗೂ ಗ್ರಾಮಸ್ಥರ ಅಭಿವೃದ್ಧಿಗಾಗಿ ಉದ್ಯಮಿಗಳಿಗೆ ಗ್ರಾಮಗಳನ್ನು ದತ್ತು ನೀಡುವ ಯೋಜನೆ ಜಾರಿಗೊಳಿಸಬೇಕು. ದತ್ತು ಪಡೆದ ಉದ್ಯಮಿ ಗಳಿಗೆ ಆದಾಯ ತೆರಿಗೆಯಲ್ಲಿ ಶೇ.100ರಷ್ಟು ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ದರು. ಸಂಘದ ರಾಜ್ಯ ಸಂಘಟನಾ ಕಾರ್ಯ ದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಮುಖಂಡರಾದ ಸಿದ್ದೇಶ್, ಹಾಡ್ಯ ರವಿ, ವೆಂಕಟೇಶ್, ರವೀಂದ್ರ, ಪ್ರಸಾದ್ ನಾಯಕ್, ರಾಮೇಗೌಡ, ಕೆರೆಹುಂಡಿ ರಾಜಣ್ಣ, ಬರಡನಪುರ ನಾಗರಾಜ್, ಪರಶಿವಮೂರ್ತಿ, ಅಂಬಳೆ ಮಂಜುನಾಥ್, ಗೌರಿಶಂಕರ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.