ರೈಲ್ವೆ ಖಾಸಗೀಕರಣ ಯತ್ನ ಖಂಡಿಸಿ ಎಐಯುಟಿಯುಸಿ ಪ್ರತಿಭಟನೆ
ಮೈಸೂರು

ರೈಲ್ವೆ ಖಾಸಗೀಕರಣ ಯತ್ನ ಖಂಡಿಸಿ ಎಐಯುಟಿಯುಸಿ ಪ್ರತಿಭಟನೆ

August 3, 2020

ಮೈಸೂರು, ಆ.2(ಪಿಎಂ)- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ರೈಲ್ವೆಯನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸÀಲು ಹೊರಟಿದೆ ಎಂದು ಅಸಮಾ ಧಾನ ವ್ಯಕ್ತಪಡಿಸಿರುವ `ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್’ (ಎಐಯುಟಿ ಯುಸಿ) ಮೈಸೂರು ಜಿಲ್ಲಾ ಸಮಿತಿ ಭಾನುವಾರ ಮೈಸೂರು ಕೇಂದ್ರ ರೈಲು ನಿಲ್ದಾಣದ ಮುಖ್ಯ ದ್ವಾರ ದೆದುರು ಪ್ರತಿಭಟನೆ ನಡೆ ಸಿತು. ಯಾವುದೇ ವಿಧ ದಲ್ಲೂ ರೈಲ್ವೆಯನ್ನು ಖಾಸಗೀಕರಣಗೊಳಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

109 ಮಾರ್ಗಗಳಲ್ಲಿ 151 ಖಾಸಗಿ ರೈಲುಗಳು ಸಂಚರಿ ಸಲು ಅವಕಾಶ ನೀಡುವ ಪ್ರಸ್ತಾಪವನ್ನು ತಕ್ಷಣ ಕೈಬಿಡ ಬೇಕು. ರೈಲ್ವೆ ಕಾರ್ಯಾಗಾರಗಳು, ನಿಲ್ದಾಣಗಳೂ ಸೇರಿ ದಂತೆ ರೈಲ್ವೆ ಸ್ವತ್ತುಗಳನ್ನು ಖಾಸಗಿಯವರಿಗೆ ವಹಿಸುವ ಉದ್ದೇಶದಿಂದ ಹಿಂದೆ ಸರಿಯಬೇಕು. ಏಳು ರೈಲ್ವೆ ಉತ್ಪಾದನಾ ಘಟಕಗಳ ಕಾರ್ಪೊರೇಟೀಕರಣ ನಿರ್ಧಾರ ಹಿಂಪಡೆಯಬೇಕು. ಸಿಬ್ಬಂದಿ ಕಡಿತಗೊಳಿಸದೇ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ ಮಾತನಾಡಿ, ಇಂದು ದೇಶಾದ್ಯಂತ ಇರುವ ಸಾರ್ವ ಜನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಒಂದೊಂದಾಗಿ ಮಾರಾಟ ಮಾಡುತ್ತಿದೆ. ಲಾಭದಲ್ಲಿರುವ ಸಂಸ್ಥೆಗಳನ್ನು ದುರ್ಬಲಗೊಳಿಸಿ ಮಾರುತ್ತಿದೆ. ರೈಲ್ವೆಯನ್ನೂ ಕಾರ್ಪೊ ರೇಟ್ ಕಂಪನಿಗಳಿಗೆ ಹಂತಹಂತವಾಗಿ ಮಾರಾಟ ಮಾಡಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ಹರಡಲು ಆರಂಭವಾದಾಗ ಪ್ರಧಾನಿಗಳು ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಂದರ್ಭ ಎಂದಿದ್ದರು. ಇವರು ಕಾರ್ಪೊ ರೇಟ್ ಕಂಪನಿಗಳ ಪರ ದಿಟ್ಟ ನಿರ್ಧಾರ ತೆಗೆದುಕೊಳ್ಳು ತ್ತಿದ್ದಾರೆ ಎಂಬುದು ಸೂಕ್ಷ್ಮವಾಗಿ ಅವಲೋಕಿಸಿದರೆ ಅರ್ಥವಾಗುತ್ತದೆ. ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ನಮ್ಮ ಸಂಘಟನೆ ಇಂದು ದೇಶಾದ್ಯಂತ ಪ್ರತಿ ಭಟನೆ ಮಾಡುತ್ತಿದೆ ಎಂದರು. ಸಂಘಟನೆಯ ಜಿಲ್ಲಾಧ್ಯಕ್ಷ ವಿ.ಯಶೋಧರ್, ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »