ಇಂದು ರಕ್ಷಾಬಂಧನ: ಕೊರೊನಾ ಭೀತಿಯಿಂದ ರಾಖಿ ಮಾರಾಟ ಕುಸಿತ
ಮೈಸೂರು

ಇಂದು ರಕ್ಷಾಬಂಧನ: ಕೊರೊನಾ ಭೀತಿಯಿಂದ ರಾಖಿ ಮಾರಾಟ ಕುಸಿತ

August 3, 2020

ಮೈಸೂರು, ಆ.2(ಆರ್‍ಕೆಬಿ)- ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ಪವಿತ್ರ `ರಕ್ಷಾ ಬಂಧನ’ (ರಾಖಿ ಹಬ್ಬ)ವನ್ನು ಈ ಬಾರಿ ಆ.3ರ ಸೋಮವಾರ ಆಚರಿಸಲಾಗು ತ್ತಿದೆ. ಅಣ್ಣ-ತಂಗಿಯರ ಸಂಬಂಧ ಬೆಸೆಯುವ, ಬಲಪಡಿಸುವ ಹಬ್ಬಕ್ಕೆ ರಾಖಿ ಮಾರಾಟ ಬಲು ಜೋರಾಗಿರುತ್ತಿತ್ತು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ರಾಖಿ ಮಾರಾಟದಲ್ಲಿ ಭಾರೀ ಕುಸಿತವಾಗಿದೆ. ಅಂಗಡಿಗಳಲ್ಲಿ ವಿವಿಧ ಮಾದರಿಯ, ಬಣ್ಣ ಬಣ್ಣದ ರಾಶಿ ರಾಶಿ ರಾಖಿಗಳಿದ್ದರೂ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ.

Translate »