ಬೊಂಬೆ ಹೇಳುತೈತೆ… ಮತ್ತೆ ಹೇಳುತೈತೆ… ನೀನೇ ರಾಜಕುಮಾರ…
ಮೈಸೂರು

ಬೊಂಬೆ ಹೇಳುತೈತೆ… ಮತ್ತೆ ಹೇಳುತೈತೆ… ನೀನೇ ರಾಜಕುಮಾರ…

October 31, 2021

ಗೀತೆ ಮೂಲಕ ಪುನೀತ್‌ರಾಜ್‌ಕುಮಾರ್‌ಗೆ ಭಾವಪೂರ್ಣ ಗೀತನಮನ ಸಲ್ಲಿಸಿದ ಶಕ್ತಿಧಾಮದ ಬಾಲಕಿಯರು ಇಲ್ಲಿಯೇ ಶಾಲೆ ತೆರೆಯಬೇಕೆಂದಿದ್ದರು

ಮೈಸೂರು,ಅ.೩೦(ಪಿಎA)-ಬೊAಬೆ ಹೇಳುತೈತೆ… ಮತ್ತೆ ಹೇಳುತೈತೆ… ನೀನೇ ರಾಜಕುಮಾರ… ಗೀತೆಯನ್ನು ದುಃಖಿತರಾಗಿ ಹಾಡುವ ಮೂಲಕ ಶಕ್ತಿಧಾಮದ ಬಾಲಕಿಯರು ತಮ್ಮ ಪ್ರೀತಿಯ ಅಣ್ಣನ ಅಗಲಿಕೆಯ ನೋವನ್ನು ವ್ಯಕ್ತಪಡಿಸಿದರು.

ನಿರಾಶ್ರಿತ ಮಹಿಳೆಯರು ಮತ್ತು ಬಾಲಕಿಯರಿಗೆ ಆಶ್ರಯ ಕಲ್ಪಿಸುವ ಸದುದ್ದೇಶದಿಂದ ಡಾ.ರಾಜ್ ಕುಮಾರ್ ಅವರ ಆಶಯದಂತೆ ಸ್ಥಾಪಿತವಾದ ಮೈಸೂರಿನ ಶಕ್ತಿಧಾಮ (ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರ) ಸಂಸ್ಥೆಗೆ ಅಪ್ಪು ಎಂದೇ ಅಭಿಮಾನದಿಂದ ಕರೆಯುವ ಪುನೀತ್‌ರಾಜ್ ಕುಮಾರ್ ಒತ್ತಾಸೆಯಾಗಿದ್ದವರು.

ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಶಕ್ತಿಧಾಮಕ್ಕೆ ತಪ್ಪದೇ ಬರುತ್ತಿದ್ದ ಅಪ್ಪು, ಹೆಣ್ಣು ಮಕ್ಕಳೊಂದಿಗೆ ಬೆರೆತು, ಗಾಯನದ ಮೂಲಕ ರಂಜಿಸುತ್ತಿದ್ದರು. ಆ ಕ್ಷಣಗಳನ್ನು ನೆನೆದು ಇಲ್ಲಿನ ಹೆಣ್ಣು ಮಕ್ಕಳು ಇಂದು ಭಾವುಕತೆಯೊಂದಿಗೆ ದುಃಖಿತರಾಗಿ ಬೊಂಬೆ ಹೇಳುತೈತೆ… ಗೀತೆ ಮೂಲಕ ಗಾನ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಪುನೀತ್‌ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದೇ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡಿದ ಶಕ್ತಿಧಾಮದ ಕಾರ್ಯ ನಿರ್ವಾಹಕ ಧರ್ಮದರ್ಶಿ ಜಿ.ಎಸ್.ಜಯದೇವ, ಶಿಕ್ಷಣದಲ್ಲಿ ಅತೀವ ನಂಬಿಕೆ ಹೊಂದಿದ್ದ ಪುನೀತ್ ರಾಜ್‌ಕುಮಾರ್, ಶಕ್ತಿಧಾಮದ ಹೆಣ್ಣು ಮಕ್ಕಳಿಗೆ ಸಂಸ್ಥೆಯಲ್ಲೇ ಶಿಕ್ಷಣ ನೀಡುವಂತಾಗಬೇಕೆAಬ ಆಕಾಂಕ್ಷೆ ಹೊಂದಿದ್ದರು. ಅದರಂತೆ ಶಾಲೆ ಆರಂಭಕ್ಕೆ ಪೂರ್ವ ಸಿದ್ಧತೆಯೂ ನಡೆದಿದೆ. ಅವರು ನಮ್ಮನ್ನು ಅಗಲಿರುವುದು ಅತೀವ ನೋವು ತಂದಿದೆ ಎಂದು ಸಂತಾಪ ಸೂಚಿಸಿದರು. ಮಕ್ಕಳು ಶಿಕ್ಷಣದ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳಬಹುದು ಎಂಬುದರಲ್ಲಿ ಪುನೀತ್ ನಂಬಿಕೆ ಹೊಂದಿದ್ದರು. ಹಾಗಾಗಿ ಶಕ್ತಿಧಾಮದ ಮೂರು ಎಕರೆ ಜಾಗದಲ್ಲಿ ಶಾಲೆ ನಿರ್ಮಾಣಕ್ಕೆ ಪೂರ್ವ ತಯಾರಿಗೆ ಚಾಲನೆ ನೀಡಿದ್ದರು. ಶಿವರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್ ಅವರು ಅಮೆರಿಕಗೆ ಹೋಗಿ ಅಲ್ಲಿನ ಅಭಿಮಾನಿಗಳಿಂದ ಹಣ ಸಂಗ್ರಹಿಸಿ ಈ ಶಾಲೆ ಕನಸು, ನನಸು ಮಾಡಬೇಕು ಎನ್ನುವ ನಿರ್ಧಾರ ಕೈಗೊಂಡಿದ್ದರು ಎಂದು ತಿಳಿಸಿದರು.

ಸದ್ಯಕ್ಕೆ ಶಾಲೆಗಾಗಿ ಹೊಸ ಕಟ್ಟಡದ ನಿರ್ಮಾಣ ಕ್ಕಾಗಿ ಕಾಯದೇ, ಇರುವ ಕಟ್ಟಡದಲ್ಲಿ ಶಾಲೆ ಪ್ರಾರಂಭಿ ಸುವ ಉದ್ದೇಶ ಹೊಂದಲಾಗಿದೆ. ಶಾಲೆ ಪ್ರಾರಂಭಕ್ಕೆ ಎಲ್ಲಾ ಮೂಲಭೂತಸೌಲಭ್ಯ ಸಂಸ್ಥೆಯಲ್ಲಿದೆ. ದುರದೃಷ್ಟವಶಾತ್ ಒಂದು ಶಾಲೆಯನ್ನು ನೇರ ಮಾರ್ಗದಲ್ಲಿ ತೆರೆಯಲು ಕಾನೂನಿನ ಅನೇಕ ಅಡೆತಡೆಗಳು ಅಡ್ಡಿ ಬರುತ್ತಿವೆ. ಹೀಗೆ ಯಾವುದೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೂ ಗುರಿ ಮುಟ್ಟುವು ದರೊಳಗೆ ಸಾಕಾಗುವ ಸನ್ನಿವೇಶವಿದೆ. ಆದರೆ ಕಾನೂನು ಮೀರಿ ಮಾಡುವವರಿಗೆ ಯಾವುದೇ ಅಡ್ಡಿಗಳು ಬಾರದೇನೋ ಎಂಬ ಭಾವನೆ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಏನೇ ಅಡೆತಡೆ ಎದುರಾ ದರು ನಾವು ಎದೆಗುಂದಿಲ್ಲ. ಶಾಲೆ ಪ್ರಾರಂಭಕ್ಕೆ ಮುಂದಾಗಿದ್ದೇವೆ. ಪುನೀತ್, ಶಿವರಾಜ್‌ಕುಮಾರ್, ಸಂಸ್ಥೆ ಉಪಾಧ್ಯಕ್ಷ ಕೆಂಪಯ್ಯ ಸೇರಿದಂತೆ ನಾವೆಲ್ಲರೂ ಶಿಕ್ಷಣವನ್ನು ಕೇಂದ್ರವಾಗಿ ಇಟ್ಟುಕೊಂಡು ಮಕ್ಕಳ ಶ್ರೇಯೋಭಿವೃದ್ಧಿ ಸಾಧಿಸಬೇಕು ಎಂಬ ಹಿನ್ನೆಲೆಯಲ್ಲಿ ಶಾಲೆ ಆರಂಭಕ್ಕೆ ಮುಂದಾಗಿದ್ದೇವೆ ಎಂದರು.

ತಳಸಮುದಾಯದ ಬಡ ಹೆಣ್ಣು ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಸಮಾಜ ಒಪ್ಪಿತವಲ್ಲದ ವೃತ್ತಿ ಯಲ್ಲಿ ತೊಡಗಿದವರ ಮಕ್ಕಳನ್ನು ಇಲ್ಲಿ ಕರೆತಂದು ಆಶ್ರಯ ನೀಡಲಾಗಿದೆ. ಇಂತಹ ಅವಕಾಶ ವಂಚಿತ ಮಕ್ಕಳು ತಮ್ಮ ಭವಿಷ್ಯ ತಾವೇ ಕಟ್ಟಿಕೊಳ್ಳಲು ತಾವೇ ನಿರ್ಧರಿಸುವ ಶಕ್ತಿ ಅವರಲ್ಲಿ ಬರಬೇಕು. ಅದಕ್ಕೆ ಶಿಕ್ಷಣವೇ ಮಾರ್ಗ. ಹಾಗಾಗಿ ಶಿಕ್ಷಣದ ಮೂಲಕ ಶಕ್ತಿ ತುಂಬು ವುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಕೋವಿಡ್ ಇಲ್ಲವಾಗಿದ್ದರೆ ಇಷ್ಟೊತ್ತಿಗೆ ಹಣ ಹೊಂದಿಸಿ, ಶಾಲೆ ಪ್ರಾರಂಭ ಮಾಡುತ್ತಿದ್ದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ, ಶಾಲೆಗಾಗಿ ೮ ಕೋಟಿ ರೂ. ಮಂಜೂರು ಮಾಡುವು ದಾಗಿ ಭರವಸೆ ನೀಡಿದ್ದರು. ಅದರಂತೆ ನಂತರದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದಾಗ ೨ ಕೋಟಿ ಬಿಡುಗಡೆಗೆ ಕ್ರಮ ವಹಿಸಿದ್ದರು. ಆದರೆ ಹಣ ಮಾತ್ರ ಬಿಡುಗಡೆ ಆಗಲಿಲ್ಲ. ಹಾಗಾಗಿ ನಮ್ಮ ಶಾಲೆ ಆರಂಭಿಸುವ ಯೋಜನೆ ವಿಳಂಬ ಆಗಿದೆ ಎಂದರು. ಶಕ್ತಿಧಾಮದ ಖಜಾಂಚಿ ಎಂ.ಎನ್. ಸುಮನ ಮತ್ತಿತರರು ಹಾಜರಿದ್ದರು.

ಶಕ್ತಿಧಾಮಕ್ಕೆ ಒತ್ತಾಸೆಯಾಗಿದ್ದರು ಅಪ್ಪು…..
ಪುನೀತ್‌ರಾಜ್‌ಕುಮಾರ್ ಶಕ್ತಿಧಾಮದ ಎಲ್ಲಾ ಬೆಳವಣ ಗೆಗೆ ಒತ್ತಾಸೆಯಾಗಿ ನಿಂತಿದ್ದರು ಎಂದು ಶಕ್ತಿಧಾಮದ ಕಾರ್ಯನಿರ್ವಾಹಕ ಧರ್ಮದರ್ಶಿ ಜಿ.ಎಸ್.ಜಯದೇವ ಸ್ಮರಿಸಿದರು. ಶಕ್ತಿಧಾಮ ಸಂಸ್ಥೆ ಆರಂಭದಿAದಲೂ ಪುನೀತ್ ರಾಜ್‌ಕುಮಾರ್ ಸಂಸ್ಥೆಯೊAದಿಗೆ ಉತ್ತಮ ಒಡನಾಟ ಹೊಂದಿದ್ದರು. ಸಂಸ್ಥೆ ೧೯೯೮ರಲ್ಲಿ ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷರಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್ ಸಂಸ್ಥೆಗೆ ಭೇಟಿ ನೀಡಿದಾಗಲೆಲ್ಲಾ ಪುನೀತ್ ಸಹ ಬರುತ್ತಿದ್ದರು ಎಂದರು. ಮೈಸೂರಿಗೆ ಬರುವ ಎಲ್ಲಾ ಸಂದರ್ಭದಲ್ಲಿ ಶಕ್ತಿಧಾಮಕ್ಕೆ ಪುನೀತ್ ಭೇಟಿ ನೀಡುತ್ತಿದ್ದರು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ತಾವು ಪಡೆದು ಸಂಭಾವನೆಯನ್ನು ಶಕ್ತಿಧಾಮಕ್ಕೆ ಧಾರೆ ಎರೆದಿದ್ದಾರೆ. ಇಲ್ಲಿನ ಮಕ್ಕಳನ್ನು ಕಂಡರೆ ಅವರಿಗೆ ಬಹಳ ಪ್ರೀತಿ. ಬಂದಾಗಲೆಲ್ಲಾ ಇಲ್ಲಿನ ಮಕ್ಕಳಿಗೆ ಬಟ್ಟೆ, ಸಿಹಿ ತರುತ್ತಿದ್ದರು. ಅವರ ಶಿಕ್ಷಣಕ್ಕೆ ಒತ್ತಾಸೆಯಾಗಿದ್ದರು ಎಂದು ಹೇಳಿದರು. ರಾಜ್‌ಕುಮಾರ್ ಮತ್ತು ಅವರ ಕುಟುಂಬ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಎಂಬ ಮಹಾಶಕ್ತಿಗಳು ಸೇರಿ ಇಂತಹ ಅದ್ಭುತವಾದ ಸಂಸ್ಥೆ ಹುಟ್ಟಲು ಸಾಧ್ಯವಾಯಿತು ಎಂದರು.

ಪಾರ್ವತಮ್ಮರ ಹುಟ್ಟುಹಬ್ಬದಂದು ಶಕ್ತಿಧಾಮದಲ್ಲಿ ಸಿಹಿ ಹಂಚುತ್ತಿದ್ದರು

ಪಾರ್ವತಮ್ಮ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಪುನೀತ್ ಮತ್ತು ಅವರ ಪತ್ನಿ ಅಶ್ವಿನಿ ಶಕ್ತಿಧಾಮಕ್ಕೆ ಬರುತ್ತಿದ್ದರು. ಇಲ್ಲಿನ ಎಲ್ಲಾ ಮಕ್ಕಳಿಗೂ ಬಟ್ಟೆ ಹಾಗೂ ಸಿಹಿ ತರುತ್ತಿದ್ದರು. ಅವರ ಅಕಾಲಿಕ ಅಗಲಿಕೆ ಅತೀವ ದುಃಖ ಉಂಟು ಮಾಡಿದೆ ಎಂದು ಶಕ್ತಿಧಾಮದ ಖಜಾಂಚಿ ಎಂ.ಎನ್.ಸುಮನ ಭಾವುಕರಾದರು. ಬೀದಿಬದಿ ಮಹಿಳೆಯರಿಗೆ ಪುನರ್‌ವಸತಿ ಕಲ್ಪಿಸುವುದು ಸಂಸ್ಥೆ ಮೂಲ ಉದ್ದೇಶವಾಗಿತ್ತು. ನಂತರ ೨೦೧೫ರಿಂದ ಅವಕಾಶ ವಂಚಿತ ಹೆಣ್ಣು ಮಕ್ಕಳಿಗೂ (ಬಾಲಕಿಯರು) ಆಶ್ರಯ ನೀಡಲಾಗುತ್ತಿದೆ. ಪ್ರಸ್ತುತ ೧೫೦ ಮಕ್ಕಳಿದ್ದಾರೆ. ಡಾ.ರಾಜ್‌ಕುಮಾರ್ ಅವರ ಮೂವರು ಮಕ್ಕಳು ಜೊತೆಯಾಗಿ ಕುಟುಂಬ ಸಮೇತ ಈ ಶಕ್ತಿಧಾಮಕ್ಕೆ ಒತ್ತಾಸೆಯಾಗಿದ್ದಾರೆ ಎಂದರು.

ಕುಗ್ಗಿದ ಕನ್ನಡದ ಶಕ್ತಿ
ರಾಜಕುಮಾರನ ರಾಜಕುಮಾರ ರಾಜವಂಶದ
ರಾಜ ಪ್ರತಿನಿಧಿಯ ಸಾವು ನ್ಯಾಯವೇ?
ಬರಿದಾದ ಕನ್ನಡ ಚಿತ್ರರಂಗಕ್ಕೆ ಇನ್ಯಾರು ದಿಕ್ಕು…?
ಕನ್ನಡ ರಾಜ್ಯ ರಮಾ ರಮಣ ಅಣ್ಣಾವ್ರು ಕಟ್ಟಿದ
ಕನ್ನಡ ಕೋಟೆ ಕಾಯುವವರಾರು?
ಅಪ್ಪು ನಿನಗಾಗಿ ಅಲ್ಲದಿದ್ದರೂ ಕನ್ನಡ ಸಂಸ್ಕೃತಿಯ ಶ್ರೀಮಂತಿಕೆ ಘನತೆ, ಗೌರವ ಉಳಿಸಲಾದರೂ
ಇನ್ನಷ್ಟು ವರುಷ ಬದುಕಲೇಬೇಕಿತ್ತು
ಮರಳಿ ಬಂದು ಬಿಡು ಕಂದ
ಪ್ರೀತಿಯ ಓ ನಮ್ಮ ರಾಜಕುಮಾರ
-ರಘು ಕೌಟಿಲ್ಯ

ಇಲ್ಲಿಗೆ ಭೇಟಿ ನೀಡಿದಾಗ ನಮ್ಮ ಕಷ್ಟ ಗಳನ್ನು ಆಲಿಸುತ್ತಿದ್ದರು. ಗಾಯನದ ಮೂಲಕ ರಂಜಿಸುತ್ತಿದ್ದರು. ಎಲ್ಲರಿಗೂ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರು ಸಿನಿಮಾಗೆ ಕರೆದುಕೊಂಡು ಹೋಗುವವರೆಗೆ ನಾನು ಚಿತ್ರಮಂದಿರವನ್ನೇ ನೋಡಿರಲಿಲ್ಲ. ಅವರು ಇಂದು ನಮ್ಮನ್ನು ಅಗಲಿದ್ದಾರೆ ಎಂದೇ ಅನ್ನಿಸುತ್ತಿಲ್ಲ.
– ಶ್ಯಾಮಲ

ತಮ್ಮ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ನಮಗೆಲ್ಲಾ ಬಟ್ಟೆ ಮತ್ತು ಸಿಹಿ ತರುತ್ತಿದ್ದರು. ನಮ್ಮನ್ನು ತಮ್ಮ ಸಹೋ ದರಿಯಂತೆ ಕಾಣುತ್ತಿದ್ದ ಅಪ್ಪು ಅಣ್ಣ ಇಲ್ಲ ಎಂದು ಹೇಳಲಾಗುತ್ತಿಲ್ಲ. – ಸುಷ್ಮಾ

ಅವರು ನಡೆಸಿಕೊಡುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಶಕ್ತಿ ಧಾಮದಲ್ಲಿ ಯಾರಾದರೂ ಆಯ್ಕೆಯಾಗಿ ಅವರ ಮುಂದೆ ಕುಳಿತುಕೊಳ್ಳಬೇಕೆಂಬ ಆಸೆ ಇತ್ತು. ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದೆವು. ಅವರಿಲ್ಲವೆಂದು ಹೇಳಲೂ ಆಗುತ್ತಿಲ್ಲ. – ಸ್ನೇಹ

ಶಕ್ತಿಧಾಮದ ಅವಕಾಶ ವಂಚಿತ ಹೆಣ್ಣು ಮಕ್ಕಳಿಗಾಗಿ ಶಾಲೆ ನಿರ್ಮಿಸಬೇಕೆಂಬುದು ಪುನೀತ್‌ರಾಜ್‌ಕುಮಾರ್ ಕನಸು. ಇದನ್ನು ಗೌರವಿಸಿ, ಕನ್ನಡ ನಾಡಿನ ಸಹೃದಯಿಗಳು ಸಹಕಾರ ನೀಡುವ ಭರವಸೆ ಇದೆ. ಅವರ ಈ ಕನಸು ಪರಹಿತದ ಸದು ದ್ದೇಶದ ಕನಸು. ಅದನ್ನು ನಾವೆಲ್ಲರೂ ನನಸು ಮಾಡ ಬೇಕಿದೆ. ಪುನೀತ್ ಅಗಲಿಕೆಯ ದುಃಖ ಅಷ್ಟು ಸುಲಭ ವಾಗಿ ಶಮನ ಆಗುವುದಿಲ್ಲ. ಇಲ್ಲಿನ ಮಕ್ಕಳು ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದರು. ಅವರು ಒಬ್ಬ ಖ್ಯಾತ ನಟ ಎಂಬ ಭಾವನೆಗಿಂತ ನಮ್ಮ ಮನೆಯವರೇ ಎಂಬ ಭಾವನೆ ನಮ್ಮದು. -ಜಿ.ಎಸ್.ಜಯದೇವ

Translate »