ಮೈಸೂರು-ಬನ್ನೂರು ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಸರ್ವಿಸ್ ರಸ್ತೆ ಅಗಲೀಕರಣಕ್ಕೆ ಮರ ಕಡಿಯಲು ಭಾರೀ ವಿರೋಧ
ಮೈಸೂರು

ಮೈಸೂರು-ಬನ್ನೂರು ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಸರ್ವಿಸ್ ರಸ್ತೆ ಅಗಲೀಕರಣಕ್ಕೆ ಮರ ಕಡಿಯಲು ಭಾರೀ ವಿರೋಧ

October 31, 2021

ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಗದ್ದಲ

  • ಯಾವುದೇ ಕಾರಣಕ್ಕೂ ಮರ ಕಡಿಯಬೇಡಿ
  • ಬದಲಿ ಎಷ್ಟು ಸಸಿ ಬೆಳೆಸಿದ್ದೀರಿ
  • ಸಭೆಯಲ್ಲಿ ವಾಗ್ವಾದ

ಮೈಸೂರು, ಅ.೩೦ (ಎಂಟಿವೈ)-ಮೈಸೂರು-ಬನ್ನೂರು ರಿಂಗ್ ರಸ್ತೆ ಜಂಕ್ಷನ್‌ನಿAದ ನಂಜನಗೂಡು ರಿಂಗ್ ರೋಡ್ ಜಂಕ್ಷನ್‌ವರೆಗೆ ಸರ್ವಿಸ್ ರಸ್ತೆ ಅಗಲೀ ಕರಣಕ್ಕಾಗಿ ಮರಗಳ ತೆರವಿಗಾಗಿ ಸಾರ್ವ ಜನಿಕರ ಅಭಿಪ್ರಾಯ ಸಂಗ್ರಹಿಸಲು ಶನಿ ವಾರ ಅರಣ್ಯ ಇಲಾಖೆ ಕರೆದಿದ್ದ ಸಭೆಯಲ್ಲಿ ಗದ್ದಲ ಉಂಟಾಗಿ, ಮರಗಳ ಹನನ ಹಾಗೂ ತೆರವಿಗೆ ತೀವ್ರ ವಿರೋಧ ವ್ಯಕ್ತವಾಯಿತು.

ಮೈಸೂರಿನ ಎಪಿಎಂಸಿ ಸಮೀಪ ರಿಂಗ್ ರಸ್ತೆ ಬಳಿ ಇಂದು ಬೆಳಗ್ಗೆ ಕರೆದಿದ್ದ ಸಾರ್ವ ಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಪರಿಸರ ಪ್ರೇಮಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ನಾಗರಿಕರು ಪಾಲ್ಗೊಂಡು ಸರ್ವಿಸ್ ರಸ್ತೆಗಾಗಿ ಮರಗಳ ಹನನ ಅಥವಾ ತೆರವು ಸರಿಯಲ್ಲ. ಯಾವುದೇ ಕಾರ ಣಕ್ಕೂ ಮರಗಳ ಹನನ ಮಾಡಬಾರದು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಸಭೆ ಆರಂಭದಲ್ಲಿ ವೃಕ್ಷಾಧಿಕಾರಿ ರಂಗ ಸ್ವಾಮಿ ಮಾತನಾಡಿ, ಮೈಸೂರು-ಬನ್ನೂರು ರಸ್ತೆಯ ಜಂಕ್ಷನ್‌ನ ದೇವೇಗೌಡ ವೃತ್ತದಿಂದ ನಂಜನಗೂಡು ರಸ್ತೆಯ ಜಂಕ್ಷನ್ (ಎಪಿ ಎಂಸಿ)ವರೆಗೂ ೯ ಕಿ.ಮೀವರೆಗೂ ರಿಂಗ್ ರಸ್ತೆಯ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆಯನ್ನು ಅಗಲೀಕರಣ ಮಾಡಲು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಉದ್ದೇ ಶಿಸಿದೆ. ಈ ಹಿಂದೆ ೫ ಮೀಟರ್ ಅಗಲವಿದ್ದ ರಸ್ತೆಯನ್ನು ಈಗ ೭ ಮೀಟರ್‌ಗೆ ವಿಸ್ತರಿ ಸಲಾಗುತ್ತಿದೆ ಎಂದರು.

ಎರಡು ಬದಿಯಲ್ಲೂ ೨ ಮೀಟರ್ ವಿಸ್ತರಿಸಲಾಗುತ್ತಿದೆ. ೯ ಕಿ.ಮೀ. ವ್ಯಾಪ್ತಿ ಯಲ್ಲಿ ಎಡ ಬದಿಯಲ್ಲಿ ೩೦೭ ಹಾಗೂ ಬಲ ಬದಿಯಲ್ಲಿ ೨೩೦ ಮರ ಸೇರಿದಂತೆ ಒಟ್ಟು ೫೩೭ ಮರಗಳನ್ನು ತೆರವುಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರ ಕೋರಿದೆ. ಆ ಸ್ಥಳ ದಲ್ಲಿ ಆಲ, ಅರಳಿ, ಬಸರಿ, ಗೋಣ , ಬೀಟೆ, ಹೊನ್ನೆ ಹಾಗೂ ಬೇವಿನ ಮರ ಗಳಿವೆ. ಅವುಗಳಲ್ಲಿ ಆಲ, ಅರಳಿ, ಬಸರಿ ಮರವನ್ನು ಮಾತ್ರ ಬೇರೆಡೆ ಸ್ಥಳಾಂತರಿಸಿ, ನೆಡಲಾಗುತ್ತದೆ. ಉಳಿದ ಮರಗಳಾದ ಗೋಣ , ಬೀಟೆ, ಹೊನ್ನೆ ಹಾಗೂ ಬೇವಿನ ಮರವನ್ನು ಬೇರೆಡೆ ಸ್ಥಳಾಂತರಿಸಿದರೂ ಅವುಗಳು ಬೆಳೆಯುವುದಿಲ್ಲ. ಈ ಹಿನ್ನೆಲೆ ಯಲ್ಲಿ ರಿಂಗ್ ರಸ್ತೆಯ ಸರ್ವಿಸ್ ರಸ್ತೆ ಅಗಲೀಕರಣ ಮಾಡಲು ಇಲ್ಲಿನ ಮರ ಗಳನ್ನು ತೆರವುಗೊಳಿಸುವ ಅಗತ್ಯವಿದೆ. ಸ್ಥಳಾಂತರಿಸಬಹುದಾದ ಮರಗಳನ್ನು ಗುರುತಿಸಿ, ಚಾಮುಂಡಿಬೆಟ್ಟದ ತಪ್ಪಲಿನ ದೈವಿವನ, ಚಾಮುಂಡಿಬೆಟ್ಟದ ರಸ್ತೆ ಹಾಗೂ ಟ್ರೀ ಪಾರ್ಕ್ನಲ್ಲಿ ನೆಡಲಾಗುತ್ತದೆ ಎಂದು ವಿವರಿಸಿದರು. ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಎಇ ರಮೇಶ್ ಮಾತನಾಡಿ, ಸಹಕಾರ ಕೋರಿದರು.

ಪರಿಸರ ಪ್ರೇಮಿಗಳ ಆಕ್ಷೇಪ: ಒಂದೆಡೆ ಅಧಿಕಾರಿಗಳು ಮರಗಳ ತೆರವಿಗಾಗಿ ಮನ ವೊಲಿಸುವ ಪ್ರಯತ್ನ ಮಾಡುತ್ತಿದ್ದರೆ, ಮತ್ತೊಂದೆಡೆ ಪರಿಸರ ಹೋರಾಟ ಗಾರರು ಮರ ಹನನ ಹಾಗೂ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಪದೇ ಪದೆ ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳ ನಡುವೆ ವಾಗ್ವಾದ ನಡೆಯುತ್ತಿತ್ತು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಯಿತು. ಈ ವೇಳೆ ಸ್ಥಳೀಯ ಸಂಸ್ಥೆ, ಜಿಲ್ಲಾಡಳಿತದ ಅಧಿಕಾರಿ ಗಳಿಗೆ ದೂರದೃಷ್ಟಿ ಇಲ್ಲದಿರುವುದೇ ಮರ ಗಳ ಹನನ ನಿರಂತರವಾಗಿ ನಡೆಯಲು ಕಾರಣ. ಅಭಿವೃದ್ಧಿ ಹೆಸರಲ್ಲಿ ಮರಗಳ ತೆರವು ಹಾಗೂ ಹನನ ಮಾಡಲಾಗುತ್ತಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಎಷ್ಟು ಮರ ಬೆಳೆಸಲು ಕ್ರಮ ಕೈಗೊಂಡಿದ್ದೀರಿ ಎಂಬ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಆಗ್ರಹಿಸಿದರು.
ಪರಿಸರವಾದಿಗಳಾದ ಟೀಮ್ ಮೈಸೂ ರಿನ ಹಿರಿಯಣ್ಣ, ಆನಂದ್, ಪರಿಸರ ಹೋರಾಟಗಾರ್ತಿ ಭಾನು ಮೋಹನ್, ಪರಿಸರ ಬಳಗದ ಪರಶುರಾಮೇಗೌಡ, ಪರಿಸರ ಹೋರಾಟಗಾರ್ತಿ ತನುಜಾ ಹಾಗೂ ಇನ್ನಿತರರು ಮಾತನಾಡಿ, ನಿಯಮಾನು ಸಾರ ಯಾವುದೇ ಮರ ಕಡಿಯಬೇಕಾ ದರೆ ಅದಕ್ಕೆ ನಾಲ್ಕು ಪಟ್ಟು ಗಿಡ ಬೆಳೆಸಬೇಕಾ ಗಿದೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ತಿರುಚಿ ಮರಗಳ ಹನನ ಮಾಡಿದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಆರ್‌ಎಫ್‌ಓ ಪ್ರಶಾಂತ್ ಕುಮಾರ್, ಡಿಆರ್‌ಎಫ್ ಸತೀಶ್, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಇರ್ಫಾನ್, ಜಯಸ್ವಾಮಿ, ಪರಿಸರವಾದಿ ಗಳಾದ ಮನು, ದರ್ಶನ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

 

ಸಭೆಯಲ್ಲಿ ಇದ್ದದ್ದು ೩೦ ಮಂದಿ, ಅಭಿಪ್ರಾಯ ವ್ಯಕ್ತವಾಗಿದ್ದು ಮಾತ್ರ ೪೬!!!

ಮೈಸೂರು, ಅ.೩೦(ಎಂಟಿವೈ)- ರಿಂಗ್ ರಸ್ತೆಯ ಸರ್ವಿಸ್ ರಸ್ತೆ ಅಗಲೀಕರಣಕ್ಕಾಗಿ ೫೩೭ ಮರ ಹನನ, ಸ್ಥಳಾಂತರಕ್ಕಾಗಿ ಒಪ್ಪಿಗೆ ಪಡೆಯಲು ಅರಣ್ಯ ಇಲಾಖೆ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ೩೦ ಮಂದಿ ಹಾಜರಾಗಿ ಹಾಜರಾತಿಗೆ ಸಹಿ ಹಾಕಿದ್ದರು. ಆದರೆ ಅಭಿ ಪ್ರಾಯ ಸಂಗ್ರಹಣೆ ಮಾಡಿದಾಗ ೪೬ ಮಂದಿ ಅಭಿಪ್ರಾಯ ಪತ್ರ ಸಲ್ಲಿಸಿದ್ದರು ಇದು ಅಚ್ಚರಿ ಮೂಡಿಸಿತು.

ಸಭೆಯಲ್ಲಿ ಅಭಿಪ್ರಾಯ ಮಂಡಿಸುವಾಗ ಅಲ್ಲಿದ್ದವರೆಲ್ಲಾ ಮರ ಹನನ ಹಾಗೂ ಸ್ಥಳಾಂತರಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ನಿಗದಿತ ಅರ್ಜಿ ನಮೂನೆಯಲ್ಲಿ ಮರಗಳ ಹನನ, ತೆರವಿಗೆ ವಿರೋಧಿಸುವವರು ಹಾಗೂ ಯಾವ ಕಾರಣಕ್ಕೆ ವಿರೋಧಿಸುತ್ತಿರುವ ಬಗ್ಗೆ ಲಿಖಿತ ರೂಪದಲ್ಲಿ ಅಹ ವಾಲು ಸಭೆಯಲ್ಲಿ ಸಲ್ಲಿಸಲು ಎಲ್ಲರಿಗೂ ಅರಣ್ಯ ಇಲಾಖೆ ಸಿಬ್ಬಂದಿ ಅರ್ಜಿ ನಮೂನೆ ವಿತರಿಸಿದ್ದರು. ನಿಗದಿತ ಅರ್ಜಿ ಯನ್ನು ಭರ್ತಿ ಮಾಡಿದ ನಂತರ ವಾಪಸ್ಸು ಪಡೆಯಲಾಯಿತು. ಈ ವೇಳೆ ಸಲ್ಲಿಕೆಯಾದ ಅರ್ಜಿಯನ್ನು ವಿಂಗಡಿಸಿ ಪರ ಎಷ್ಟು? ವಿರೋಧ ಎಷ್ಟು ಎಂದು ಸಭೆಯಲ್ಲಿದ್ದವರ ಮುಂದೆ ಅಂಕಿ ಅಂಶ ಮಂಡಿಸಿದಾಗ ಪರಿಸರವಾದಿಗಳು ಬೆಚ್ಚಿದ್ದರು.
ಸಭೆಯಲ್ಲಿ ಸಲ್ಲಿಕೆಯಾದ ಅಭಿಪ್ರಾಯದಂತೆ ಮರ ಕಡಿ ಯಲು ಒಪ್ಪಿಗೆ ಸೂಚಿಸಿ ೨೪ ಮಂದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ೨೨ ಮಂದಿ ಮಾತ್ರ ವಿರೋಧ ವ್ಯಕ್ತಪಡಿಸಿ ದ್ದಾರೆ ಎಂದು ಅರಣ್ಯ ಸಿಬ್ಬಂದಿ ಪ್ರಕಟಿಸುತ್ತಿದ್ದಂತೆ ಅಲ್ಲಿ ದ್ದವರು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಭಾಗವಹಿಸಿದ್ದವರು ೩೦ ಮಂದಿ. ಆದರೆ ಪರ ವಾಗಿ ೨೪, ವಿರೋಧಿಸಿ ೨೨ ಮಂದಿ ಪತ್ರ ಸಲ್ಲಿಕೆಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಒಪ್ಪಿಗೆ ಸೂಚಿಸಿದವರು ಯಾವ ಕಾರಣಕ್ಕೆ ಸೂಚಿಸಿದ್ದೀರಾ? ನೀವು ಆಕ್ಸಿಜû಼ನ್ ಸೇವಿಸುತ್ತೀರೋ ಅಥವಾ ಅಂಗಡಿಯಲ್ಲಿ ಸಿಗುವ ವಸ್ತುವನ್ನು ಸೇವಿಸುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು. ಆದರೆ ಯಾರೊಬ್ಬರೂ ನಾವು ಸಮ್ಮತಿ ನೀಡಿದ್ದೇವೆ ಎಂದು ಹೇಳಲಿಲ್ಲ.

ಒಪ್ಪಿಗೆ ನೀಡಿದ್ದ ಪತ್ರ ಹರಿದರು: ಸಭೆಯಲ್ಲಿ ಮರ ಕಡಿತ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪ್ರಕಟಿಸುತ್ತಿದ್ದಂತೆ ಆಕ್ರೋಶಗೊಂಡ ಪರಿಸರ ಬಳಗದ ಪರಶುರಾಮೇಗೌಡ ಎಂಬುವರು, ಅಧಿಕಾರಿಗಳಿಂದ ಒಪ್ಪಿಗೆ ಸೂಚಿಸಿದ್ದರು ಎನ್ನಲಾದ ಪತ್ರಗಳನ್ನು ಪಡೆದರು. ಆ ಪತ್ರಗಳನ್ನು ಹಿಡಿದು ಯಾರ ಒತ್ತಡಕ್ಕೆ ಮಣ ದು ಒಪ್ಪಿಗೆ ಪತ್ರ ಬರೆದು ಕೊಟ್ಟಿದ್ದೀರೋ? ಅಥವಾ ತಿಳಿಯದೇ ಸಮ್ಮತಿ ಕಾಲಂಗೆ ಟಿಕ್ ಮಾಡಿದ್ದೀರೋ ಎಂದು ಪ್ರಶ್ನಿಸಿದರು. ಆದರೂ ಅಲ್ಲಿದ್ದ ಯಾರೊ ಬ್ಬರೂ ತಾವು ಒಪ್ಪಿಗೆ ನೀಡಿದ್ದೇವೆ ಎನ್ನಲಿಲ್ಲ. ಅಲ್ಲದೆ ನಮಗೆ ಮರ ಬೇಕು ಎನ್ನುತ್ತಿದ್ದರು. ಇದರಿಂದ ಕೋಪಗೊಂಡ ಪರಶುರಾಮೇ ಗೌಡರು ಮರ ಕಡಿತಕ್ಕೆ ಒಪ್ಪಿಗೆ ನೀಡಿದ್ದರು ಎನ್ನಲಾದ ೨೪ ಪತ್ರ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ೪ ವರ್ಷಗಳ ಹಿಂದೆ ತಾನೇ ನೆಟ್ಟು ಬೆಳೆಸಿದ್ದ ೫೩೭ ಮರಗಳನ್ನು ಅರಣ್ಯ ಇಲಾಖೆ ತಾನೇ ಕಡಿಯಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ.

Translate »