ಕಾಯಕ ಸಮಾಜಗಳ ಮುಖಂಡರಿಂದ ಸಿಎಂಗೆ ಅಭಿನಂದನೆ
ಮೈಸೂರು

ಕಾಯಕ ಸಮಾಜಗಳ ಮುಖಂಡರಿಂದ ಸಿಎಂಗೆ ಅಭಿನಂದನೆ

May 8, 2020

ಮೈಸೂರು,ಮೇ7-ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗದವ ರಿಗೆ 1610 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ರಾಜ್ಯ ಬಿಜೆಪಿ ಸಹ ವಕ್ತಾರ ರಘು ಕೌಟಿಲ್ಯ ನೇತೃತ್ವದ ಕಾಯಕ ಸಮಾಜದ ಮುಖಂ ಡರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಘು ಕೌಟಿಲ್ಯ, ಯಡಿಯೂರಪ್ಪ ನವರು ರೈತಪರ, ಬಡವರ ಪರ, ಶ್ರಮಿಕ ವರ್ಗಗಳ ಪರ ಸದಾಕಾಲ ಸ್ಪಂದಿಸುವ ಜನಪರ ನಾಯಕರಾಗಿರುವ ಕಾರಣದಿಂ ದಾಗಿ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾಗಿ ರುವ ಮಡಿವಾಳ, ಸವಿತಾ, ನೇಕಾರ ಸಮಾಜ ಗಳು, ಆಟೋ, ಟ್ಯಾಕ್ಸಿ ಚಾಲಕರಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ನೆರವಿಗೆ ನಿಂತಿ ದ್ದಾರೆ ಎಂದರು. ಕೊರೊನಾ ಸಂಕಷ್ಟದ ಸಮಯದಲ್ಲೂ ಅತ್ಯಂತ ಎಚ್ಚರಿಕೆಯಿಂದ ಆರ್ಥಿಕ ಸ್ಥಿತಿಯ ಸಮತೋಲನ ಕಾಯ್ದು ಕೊಂಡು ದೇಶದ ಯಾವುದೇ ರಾಜ್ಯದಲ್ಲೂ ಕಂಡು ಕೇಳರಿಯದಂತೆ 1610 ಕೋಟಿ ರೂ. ವಿಶೇಷ ಪ್ಯಾಕೇಜ್ ನೆರವಿನ ಧೀಮಂ ತಿಕೆ ಪ್ರದರ್ಶಿಸಿದ್ದಾರೆ ಎಂದರು.

Translate »