ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ಅಭಿಯಾನ ಪೇ ಸಿಎಂ ಪೋಸ್ಟರ್ ವೈರಲ್
News

ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ಅಭಿಯಾನ ಪೇ ಸಿಎಂ ಪೋಸ್ಟರ್ ವೈರಲ್

September 22, 2022

ಬೆಂಗಳೂರು, ಸೆ.21(ಕೆಎಂಶಿ)-ಬಿಜೆಪಿ ಸರ್ಕಾರ ದಲ್ಲಿನ 40 ಪರ್ಸೆಂಟ್ ಕಮಿಷನ್ ಹಣವನ್ನು ಪೆಟಿಎಂ ಬದಲು ಪೆಸೀಎಂ ಆ್ಯಪ್‍ಗೆ ಪಾವತಿಸಿ ಎಂಬ ಭಿತ್ತಿಪತ್ರಗಳನ್ನು ವಿಧಾನಸೌಧದ ಹೃದಯ ಭಾಗದ ಸುತ್ತಲೂ ಅಂಟಿಸುವ ಮೂಲಕ ಸರ್ಕಾರದ ವಿರುದ್ಧ ದೊಡ್ಡ ಸಮರ ಸಾರಿದೆ.

ಪೇಸಿಎಂಗೆ ಹಣ ಪಾವತಿಸಿದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ತಲು ಪುತ್ತದೆ. ಈ ಆ್ಯಪ್‍ಗೆ ಹೋಗಿ ಎಂದು ಭಿತ್ತಿಪತ್ರಗಳಲ್ಲಿ ಮಾಹಿತಿ ನೀಡಿದೆ. ಇಂತಹ ಭಿತ್ತಿಪತ್ರಗಳನ್ನು ಮುಖ್ಯ ಮಂತ್ರಿಯವರ ಆರ್‍ಟಿ ನಗರದ ಖಾಸಗಿ ನಿವಾಸ, ರೇಸ್‍ಕೋರ್ಸ್‍ನ ಸರ್ಕಾರಿ ನಿವಾಸದ ಸುತ್ತಮುತ್ತಲೂ ಅಂಟಿಸಲಾಗಿದೆ. ಅಷ್ಟೇ ಅಲ್ಲ ಸಚಿವರುಗಳ ನಿವಾಸ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದಂತೆ ನಗರದ ಹೃದಯ ಭಾಗದ ಪ್ರಮುಖ ಗೋಡೆಗಳಲ್ಲಿ ಈ ಭಿತ್ತಿ ಪತ್ರಗಳು ರಾರಾಜಿಸುತ್ತಿವೆ. ತಮ್ಮ ಮನೆ ಬಳಿ ಇಂತಹ ಭಿತ್ತಿ ಪತ್ರ ಕಂಡ ಬೊಮ್ಮಾಯಿ ಅವರು ಇರಿಸು-ಮುರಿಸು ಗೊಂಡು ತಕ್ಷಣವೇ ಇವುಗಳನ್ನು ತೆಗೆಯುವಂತೆ ಸೂಚಿಸಿ ದ್ದಲ್ಲದೆ, ಪ್ರಸಕ್ತ ಸದನದಲ್ಲೇ ಕಾಂಗ್ರೆಸ್ ಆಡಳಿತದ ಭ್ರಷ್ಟಾ ಚಾರವನ್ನು ಎಳೆ ಎಳೆಯಾಗಿ
ಬಿಡಿಸಿಡಲು ತೀರ್ಮಾನಿಸಿದ್ದಾರೆ. ಈ ಘಟನೆಯ ನಂತರ ಬಿಜೆಪಿ ಶಾಸಕ ಪಿ. ರಾಜೀವ್ ಮೂಲಕ ಸಿದ್ದರಾಮಯ್ಯ ಆಡಳಿತದಲ್ಲಿ ನಡೆದಿರುವ ನೇಮಕಾತಿ ಮತ್ತು ಹಗರಣಗಳಿಗೆ ಸಂಬಂಧಿಸಿದಂತೆ ನಿಯಮ 69 ರಡಿ ಚರ್ಚಿಸಲು ಅವಕಾಶ ಮಾಡಿಕೊಡುವಂತೆ ವಿಧಾನಸಭಾಧ್ಯಕ್ಷರನ್ನು ಕೋರಿದ್ದಾರೆ.

 

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ 40 ಪರ್ಸೆಂಟ್ ಕಮಿಷನ್ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಂತೆ ಮುಖ್ಯ ಮಂತ್ರಿಯವರು ಇದಕ್ಕೆ ಅವಕಾಶ ಮಾಡಿಕೊಡಿ, ನಾವು ಮತ್ತು ಇತರ ಸದಸ್ಯರು ಈ ಚರ್ಚೆಯಲ್ಲಿ ಪಾಲ್ಗೊಂಡು ಭ್ರಷ್ಟಾಚಾರದ ಎಳೆಯನ್ನು ಹೊರಗೆ ತೆಗೆದಿಡೋಣ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು. ತೆಲಂಗಾಣದಲ್ಲಿ ನಲವತ್ತು ಪರ್ಸೆಂಟ್ ಕಮಿಷನ್ ಮುಖ್ಯಮಂತ್ರಿ ಎಂಬ ಬೋರ್ಡು, ಪೆÇೀಸ್ಟರುಗಳ ಧಾಳಿಯನ್ನು ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮುಂದುವರಿಸಿದ್ದು,ಪೇಸಿಎಂ ಆ್ಯಪ್ ಅನ್ನು ಅಭಿವೃದ್ಧಿಪಡಿ ಸುವ ಮೂಲಕ ಬಿಜೆಪಿ ಸರ್ಕಾರಕ್ಕೆ ಮುಜುಗರವುಂಟು ಮಾಡಿದೆ. ಈ ಪೇಸಿಎಂ ಆ್ಯಪ್‍ಗೆ ನೀಡಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸರ್ಕಾರದ ವಿರುದ್ಧದ ನಲವತ್ತು ಪರ್ಸೆಂಟ್ ಕಮಿಷನ್ನಿನ ಆರೋಪದ ಬಗ್ಗೆ, ಬಿಟ್ ಕಾಯಿನ್ ಹಗರಣದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಆ್ಯಪ್ ಅನ್ನು ಬಳಸಿದ್ದು, ಬಳಕೆ ಮಾಡಿದ ಕೂಡಲೇ ಸರ್ಕಾರದ ವಿರುದ್ಧ ಇಲ್ಲಿ ದೂರು ದಾಖಲಿಸ ಬಹುದು ಎಂದು ಹೇಳಲಾಗುತ್ತಿದೆ.

 

ಸರ್ಕಾರದ ವಿರುದ್ಧದ ಈ ಅಭಿಯಾನಕ್ಕೆ ತಮ್ಮೊಂದಿಗೆ ಕೈ ಜೋಡಿಸಲು ಪ್ರತಿಪಕ್ಷ ಕಾಂಗ್ರೆಸ್ ನೀಡಿರುವ ಕರೆಗೆ ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿ ರುವ ರೀತಿ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಬಿಜೆಪಿಗೆ ಭಾರೀ ಮುಜುಗರ ತಂದಿದೆ. ಆದರೆ ಭದ್ರತೆಗಳೆಲ್ಲದರ ನಡುವೆಯೂ ಮುಖ್ಯಮಂತ್ರಿಗಳ ನಿವಾಸದ ಬಳಿ ಇದನ್ನು ಅಂಟಿಸಿರುವ ಬೆಳವಣಿಗೆ ವ್ಯಾಪಕ ಕೋಲಾಹಲ ಸೃಷ್ಟಿಸಿದ್ದು, ಬಿಜೆಪಿ-ಕಾಂಗ್ರೆಸ್ ನಡುವಣ ಸಂಘರ್ಷಕ್ಕೆ ಮುನ್ನುಡಿ ಬರೆದಂತಿದೆ. ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಕಾರ್ಯ ಕ್ರಮದಲ್ಲಿ ಭಾಗಿಯಾಗಲು ಹೋದಾಗ, ಅವರು ಹೋಗುವ ದಾರಿಯ ಇಕ್ಕೆಲಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಲವತ್ತು ಪರ್ಸೆಂಟ್ ಸಿಎಂ ಎಂದು ಗುರುತಿಸುವ ಪೆÇೀಸ್ಟರುಗಳು, ಬೋರ್ಡುಗಳನ್ನು ಹಾಕಲಾಗಿತ್ತು. ಈ ಬೆಳವಣಿಗೆಯಿಂದ ಕ್ರುದ್ಧರಾಗಿದ್ದ ಸಿಎಂ ಬೊಮ್ಮಾಯಿ, ಈ ಬೆಳವಣಿಗೆ ರಾಜ್ಯ ರಾಜ್ಯಗಳ ನಡುವಣ ಸೌಹಾರ್ದತೆಗೆ ಧಕ್ಕೆ ತರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಕರ್ನಾಟಕದಲ್ಲಿ ಅದರ ಮುಂದುವರಿದ ಭಾಗವಾಗಿ ಪೇಸಿಎಂ ಆ್ಯಪ್ ಅನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ವಿಧ್ಯುಕ್ತವಾಗಿಯೇ ಆಡಳಿತಾರೂಢ ಬಿಜೆಪಿಗೆ ಸವಾಲೆಸೆದಿದೆ. ಈ ಬೆಳವಣಿಗೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭ್ರಷ್ಟಾಚಾರದ ಹಗರಣಕ್ಕೆ ಸಂಬಂಧಿಸಿದಂತೆ ಭಾರೀ ಸಂಘರ್ಷ ನಡೆಯುವ ಸೂಚನೆ ಎಂದು ಬಣ್ಣಿಸಲಾಗುತ್ತಿದ್ದು,ಈ ಸಂಘರ್ಷದ ಮೂಲಕ ಜನತಾ ನ್ಯಾಯಾಲಯಕ್ಕೆ ಹೋಗಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಿರ್ಧರಿಸಿರುವುದು ಸ್ಪಷ್ಟವಾಗಿದೆ.

Translate »