ಬೆಂಗಳೂರು,ಸೆ.21(ಕೆಎಂಶಿ)-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ರಾಮ ಲಿಂಗ ಕನ್ಸ್‍ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡುವ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದಿರುವ ಸಹಕಾರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಬೇಲ್ ಪಡೆಯುವ ಅಗತ್ಯವಿಲ್ಲ ಎಂದಿ ದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾ ಯುಕ್ತ ಪೆÇಲೀಸರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ವಿಜ ಯೇಂದ್ರ, ಸಚಿವ ಸೋಮಶೇಖರ್ ಸೇರಿ ದಂತೆ ಆರು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಎಫ್‍ಐಆರ್ ದಾಖಲಿಸಿದ ನಂತರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಸೋಮಶೇಖರ್ ಅವರನ್ನು ಕರೆಸಿಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ನಿರೀಕ್ಷಣಾ ಜಾಮೀನು ಪಡೆಯುವಂತೆ ಸಲಹೆ ನೀಡಿದರು.
ಸಲಹೆಯನ್ನು ಸೌಮ್ಯವಾಗಿ ತಳ್ಳಿ ಹಾಕಿದ ಸಚಿವರು ಈ ಹಗರಣಕ್ಕೂ, ನನಗೂ ಸಂಬಂಧ ವಿಲ್ಲ. ನಾನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಕ್ಷನಾಗಿದ್ದುದೇ ಸ್ವಲ್ಪ ಕಾಲ. ಇದಲ್ಲದೆ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ ನಂತರ ಅಧಿಕಾರಿಗಳು ಐದು ದಿನಗಳ ಹಿಂದಿನ ದಿನಾಂಕವನ್ನು ನಮೂದಿಸಿ ವರ್ಕ್ ಆರ್ಡರ್ ನೀಡಿದ ದಾಖಲೆ ಸೃಷ್ಟಿಸಿದ್ದಾರೆ. ಇದರಲ್ಲಿ ಅಂದಿನ ಬಿಡಿಎ ಆಯುಕ್ತರು ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರು ಇದಕ್ಕೆ ಕಾರಣರಾಗಿದ್ದು, ಈ ವ್ಯವಹಾರದಲ್ಲಿ ನನ್ನ ಯಾವ ಪಾತ್ರವೂ ಇಲ್ಲ ಎಂದು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಲೋಕಾಯುಕ್ತದ ಮುಂದೆ ಈ ಕುರಿತ ಎಲ್ಲ ವಿಚಾರಣೆ ಸಂದರ್ಭದಲ್ಲಿ ದಾಖಲೆಗಳನ್ನು ನೀಡುತ್ತೇನೆ ಎಂದ ಸೋಮಶೇಖರ್, ಇದರಲ್ಲಿ ನನ್ನ ಯಾವ ಪಾತ್ರವೂ ಇಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದರು. ಅಧಿಕಾರಿಗಳು ಮತ್ತು ರಾಜಕಾರಣಿಗಳು ಷಡ್ಯಂತ್ರ ಮಾಡಿ ನನ್ನನ್ನು ಈ ಹಗರಣದಲ್ಲಿ ಸಿಲುಕಿಸಿದ್ದಾರೆ. ಆದರೆ ಈ ವಿಷಯದಲ್ಲಿ ನಾನು ಕಳಂಕ ರಹಿತ ಎಂದರಲ್ಲದೆ,ಈ ಕುರಿತ ಹಲವು ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದರಿಂದ ನಿಮ್ಮ ಮುಂದೆ ಮುಕ್ತವಾಗಿ ಹೇಳಲು ನನಗೆ ಸಾಧ್ಯವಾಗಿದೆ ಎಂದರು.