ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಕಾಂಗ್ರೆಸ್ ಆಗ್ರಹ
ಮೈಸೂರು

ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಕಾಂಗ್ರೆಸ್ ಆಗ್ರಹ

October 5, 2021

ಮೈಸೂರು, ಅ.4(ಎಸ್‍ಬಿಡಿ)- ಉತ್ತರ ಪ್ರದೇಶದ ಲಿಖಿಂಪುರ್ ಖೇರಿಯಲ್ಲಿ 8 ಜನರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಕೂಡಲೇ ಸಚಿವ ಸ್ಥಾನ ದಿಂದ ಕೆಳಗಿಳಿಸಿ, ಜನರ ಸುರಕ್ಷತೆ ದೃಷ್ಟಿ ಯಿಂದ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರೊಂದಿಗೆ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ 8 ಮಂದಿ ಮೃತಪಟ್ಟಿರುವುದಾಗಿ ಬಿಜೆಪಿ ನಂಬಿ ಸಲು ಮುಂದಾಗಿದೆ. ಆದರೆ ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯ ಕರ್ತರು ಸೇರಿದಂತೆ ಎಲ್ಲಾ 8 ಮಂದಿಯೂ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿದ್ದರಿಂದಲೇ ಸಾವ ನ್ನಪ್ಪಿದ್ದಾರೆ ಎಂದು ಆರೋಪಿಸಿದರು.

ಘಟನಾ ಸ್ಥಳಕ್ಕೆ ತೆರಳುತ್ತಿದ್ದ ಪ್ರಿಯಾಂಕ ಅವರನ್ನು ಪುರುಷ ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದು ಕಾನೂನು ಬಾಹಿರವಾಗಿ ಗೃಹ ಬಂಧನದಲ್ಲಿ ಇಡಲಾಗಿದೆ. 8 ಜನ ಸಾವ ನ್ನಪ್ಪಿದ್ದ ಘಟನೆಯನ್ನು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದೇಶಾ ದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ. ಆಶಿಶ್ ಮಿಶ್ರಾನನ್ನು ಪ್ರಮುಖ ಆರೋಪಿ ಮಾಡಿ, ಬಂಧಿಸಬೇಕು. ಆತನ ತಂದೆಯನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಇಂತಹ ಕೃತ್ಯಗಳನ್ನು ಮುಂದುವರೆಸಬಹುದು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಯಾಗಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ: ಮತ್ತೋರ್ವ ವಕ್ತಾರರೂ ಆದ ವಕೀಲೆ ಮಂಜುಳಾ ಮಾನಸ ಮಾತನಾಡಿ, ದೇಶದಲ್ಲಿ ಬಿಜೆಪಿ ತಾಲಿಬಾನ್ ಸಂಸ್ಕøತಿ ಬಿತ್ತುತ್ತಿದೆ. ಸ್ಥಳೀಯ ವಾಗಿ ಯಾವುದೇ ರೀತಿಯ ಗಲಾಟೆ, ಗದ್ದಲ ಯಾರ ಭೇಟಿಯಿಂದ ಹೆಚ್ಚಾಗಬಹುದು, ಅಂತಹವರನ್ನು 151 ಆರ್‍ಪಿಸಿಯಡಿ ವಶಕ್ಕೆ ಪಡೆಯಬಹುದು. ಆದರೆ ಇಂತಹ ಸನ್ನಿ ವೇಶ ಇಲ್ಲದಿದ್ದರೂ ಪ್ರಿಯಾಂಕ ಅವರನ್ನು ವಶಕ್ಕೆ ಪಡೆದು, ಗೃಹ ಬಂಧನದಲ್ಲಿಡಲಾಗಿದೆ. ರಾಮನ ಹೆಸರೇಳಿಕೊಂಡು ರಾವಣ ಕೃತ್ಯ ಗಳನ್ನು ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಮಾನವೀಯ ಹೃದಯ ವುಳ್ಳವರೆಲ್ಲ ಉತ್ತರ ಪ್ರದೇಶದ ಘಟನೆಯನ್ನು ಖಂಡಿಸಬೇಕು. ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ಕೆಲಗಿಳಿಸಿ, ಅವರ ಪುತ್ರ ಆರೋಪಿ ಆಶಿಶ್‍ಗೆ ಕಾನೂನಿಡಿ ಶಿಕ್ಷೆಯಾಗಬೇಕು ಎಂದು ಹೇಳಿದರು.

ಮೌನ ಮುರಿಯಬೇಕು: ಮೋದಿ ಅವರು ಲೋಕಸಭೆ, ರಾಜ್ಯಸಭೆಯಲ್ಲಿ ಭಾಗವಹಿಸಿ, ಸರ್ಕಾರದ ಯೋಜನೆಗಳನ್ನು ಪ್ರಕಟಿಸ ಲಾಗದ ಅಸಮರ್ಥ ಪ್ರಧಾನಿ. ಮನುಷ್ಯರ ಸಾವಿನ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ತೂ ಕನಿಕರವಿಲ್ಲ. ಪ್ರಜಾಪ್ರಭುತ್ವ, ಕಾನೂನಿನ ಬಗ್ಗೆ ಗೌರವವಿಲ್ಲ. ಜನ ಮೌನ ಮುರಿದು ಪ್ರತಿಭಟಿಸದಿದ್ದರೆ ಇಂತಹ ನೂರಾರು ಘಟನೆ ನಡೆಯುತ್ತವೆ ಎಂದು ಮತ್ತೋರ್ವ ವಕ್ತಾರ ಹೆಚ್.ಎ.ವೆಂಕಟೇಶ್ ಅಭಿಪ್ರಾಯಿಸಿದರು. ಮುಖಂಡರಾದ ಹೆಡತಲೆ ಮಂಜುನಾಥ್, ಶಿವಪ್ರಸಾದ್, ಗಿರೀಶ್, ಶಿವಣ್ಣ, ಬಸವರಾಜ್, ಹೇಮಂತ್, ಮಾದೇವ್, ಜಮೀರ್, ಮಾಧ್ಯಮ ವಕ್ತಾರ ಮಹೇಶ್, ಡೊನಾಲ್ಡ್, ಪುಟ್ಟಸ್ವಾಮಿ, ಪ್ರವೀಣ್ ತೇಜ, ಸಿದ್ದರಾಜು, ಜೈರಾಮು, ಅಪ್ಪು, ತಿಮ್ಮರಾಜು, ಪುನೀತ್, ಹುಚ್ಚಪ್ಪ, ಶ್ರೀಧರ್‍ಗೌಡ ಗೋಷ್ಠಿಯಲ್ಲಿದ್ದರು.

Translate »