ಪುರಭವನದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದ ಮುಂದುವರೆದ ಕಾಮಗಾರಿಗೆ ಟೆಂಡರ್
ಮೈಸೂರು

ಪುರಭವನದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದ ಮುಂದುವರೆದ ಕಾಮಗಾರಿಗೆ ಟೆಂಡರ್

October 4, 2021

ಒAದು ದಶಕವಾದರೂ ಪೂರ್ಣಗೊಳ್ಳದ ಬಹುಮಹಡಿ ಪಾರ್ಕಿಂಗ್ ಕಟ್ಟಡ ಕಾಮಗಾರಿ

ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷö್ಯದಿಂದ ಪಾಳುಕೊಂಪೆಯಾದ ಟೌನ್‌ಹಾಲ್ ಆವರಣ

ಪಾರ್ಕಿಂಗ್ ಸಮಸ್ಯೆಗೆ ಪರಿಹಾರದ ಮಾರ್ಗ ಇಂದಿಗೂ ಮರೀಚಿಕೆ ೪.೫೦ ಕೋಟಿ ರೂ. ವೆಚ್ಚದಲ್ಲಿ ಪೂರ್ಣ

ಮೈಸೂರು, ಅ.೩(ಎಂಟಿವೈ)- ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೈಸೂರಿನ ಪುರ ಭವನದ ಆವರಣದಲ್ಲಿ ಒಂದು ದಶಕದ ಹಿಂದೆ ಆರಂಭಿಸಲಾದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ ಪೂರ್ಣ ಗೊಳಿಸಲು ಮತ್ತೊಮ್ಮೆ ಟೆಂಡರ್ ಕರೆಯ ಲಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಕಾಮಗಾರಿ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ.
ದಿನದಿಂದ ದಿನಕ್ಕೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಆಕರ್ಷಿಸುತ್ತಿರುವ ಮೈಸೂರಿನಲ್ಲಿ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿ ಮಾರ್ಪ ಟ್ಟಿದೆ. ಈ ಹಿನ್ನೆಲೆಯಲ್ಲಿ ೨೦೧೧ರಲ್ಲಿ ಪುರಭವನದ ಆವರಣದಲ್ಲಿ ೧೮.೨೮ ಕೋಟಿ ರೂ. ವೆಚ್ಚದಲ್ಲಿ ಆರಂಭಿಸಿದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಕಾಮಗಾರಿ ೧೦ ವರ್ಷವಾದರೂ ಪೂರ್ಣಗೊಳಿ ಸಲು ಸಾಧ್ಯವಾಗಿಲ್ಲ. ಮೈಸೂರಿನ ಹೃದಯ ಭಾಗ, ಅದರಲ್ಲೂ ಅರಮನೆ

ಮುಂಭಾಗವಿರುವ ಪುರಭವನದ ಆವರಣ ಪಾಳುಬಿದ್ದ ಸ್ಥಿತಿಯಲ್ಲಿ ರುವ ಗುಂಡಿಯೊAದಿಗೆ ದುಸ್ಥಿತಿಯಲ್ಲಿಯೇ ಇದ್ದು ಮುಜುಗರ ವನ್ನುಂಟು ಮಾಡುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ೨ ವರ್ಷ ಗಳಿಂದ ಹೊರದೇಶ, ನೆರೆ ರಾಜ್ಯದಿಂದ ಬರುವ ಪ್ರವಾಸಿಗರ ಸಂಖ್ಯೆ ಕ್ಷೀಣ ಸಿದೆಯಾದರೂ ಮುಂಬರುವ ವರ್ಷಗಳಲ್ಲಿ ಸುಧಾ ರಣೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ವಾಹನ ನಿಲುಗಡೆಗೆ ಅವಕಾಶ ಮಾಡಿ ಕೊಡುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳು ಬರುತ್ತಿದೆ.

ಯೋಜನೆ ಹಿನ್ನೆಲೆ: ಪುರಭವನದ ಆವರಣದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಹೈದ್ರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಗೆ ೧೮.೨೮ ಕೋಟಿ ರೂ. ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿತ್ತು. ೨೦೧೧ರ ಏಪ್ರಿಲ್ ೨೯ರಂದು ಗುದ್ದಲಿಪೂಜೆ ನೆರ ವೇರಿಸಲಾಗಿತ್ತು. ನಿಯಮಾನುಸಾರ ಈ ಕಟ್ಟಡವನ್ನು ೨೦೧೨ರ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಕಟ್ಟಡ ಸಾಮಗ್ರಿ ಗಳ ಬೆಲೆ ಹೆಚ್ಚಳ ಸೇರಿದಂತೆ ಕೆಲವು ಕಾರಣಗಳನ್ನು ಮುಂದೊಡ್ಡಿ ೨೦೧೮ರಲ್ಲಿ ಗುತ್ತಿಗೆದಾರ ಛಾಬ್ರಿಯಾ ಅಡಿಷನಲ್ ಬಜೆಟ್ ನೀಡುವಂತೆ ಒತ್ತಾಯಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ಇದಕ್ಕೆ ನಗರ ಪಾಲಿಕೆ ತಿರಸ್ಕರಿಸಿತ್ತು. ಈ ನಡುವೆ ಹೈದ್ರಾಬಾದ್‌ಗೆ ಪಲಾಯನ ಮಾಡಿದ ಗುತ್ತಿಗೆದಾರ ಮೈಸೂರು ಪಾಲಿಕೆಗೆ ಚಳ್ಳೆಹಣ್ಣು ತಿನ್ನಿಸಿದ್ದ. ಇದ ರಿಂದ ಛಾಬ್ರಿಯಾ ಸಂಸ್ಥೆಯನ್ನು ನಗರ ಪಾಲಿಕೆ ಕಪ್ಪುಪಟ್ಟಿಗೆ ಸೇರಿಸಿತ್ತು.
ಏನಿದೆ ಕಟ್ಟಡದಲ್ಲಿ: ಸುಮಾರು ೬೦೦೦ ಚದರ ಅಡಿ ವಿಸ್ತೀರ್ಣ ದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗುತ್ತಿದೆ. ೩ ಅಂತಸ್ಥಿನಲ್ಲಿ ಪಿಲ್ಲರ್‌ಗಳನ್ನು ಬಳಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರಲ್ಲಿ ಸುಮಾರು ೭೦೦ ಕಾರು ಹಾಗೂ ೫೦೦ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ಕಟ್ಟಡದ ಮೇಲ್ಭಾಗದಲ್ಲಿ ಬಯಲು ರಂಗಮAದಿರ ನಿರ್ಮಿಸಲಾಗಿದೆ. ಬಯಲು ರಂಗಮAದಿರದ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದೆ. ಆದರೆ ಪಾರ್ಕಿಂಗ್ ಕಟ್ಟಡ ಮಾತ್ರ ಶೇ.೮೦ರಷ್ಟು ಪೂರ್ಣಗೊಂಡಿದ್ದು, ಶೇ.೨೦ರಷ್ಟು ಕಾಮಗಾರಿ ಬಾಕಿ ಇದೆ. ಅಲ್ಲದೆ, ದ್ವಿಚಕ್ರ ವಾಹನ ನಿಲುಗಡೆಗೆ ನಿರ್ಮಿಸಬೇಕಾದ ಕಟ್ಟಡದ ಕಾಮ ಗಾರಿಗೆ ಕೇವಲ ಪಿಲ್ಲರ್‌ಗಳನ್ನಷ್ಟೇ ಅಳವಡಿಸಲಾಗಿದ್ದು, ತಡೆಗೋಡೆ ಸೇರಿದಂತೆ ಯಾವುದೇ ಕೆಲಸ ಪೂರ್ಣಗೊಂಡಿಲ್ಲ. ಮಲ್ಟಿಲೆವೆಲ್ ಕಟ್ಟಡದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದಕ್ಕೆ ಹಾಗೂ ನಿಲುಗಡೆಯ ಸ್ಥಳದಿಂದ ವಾಪಸ್ಸು ಕೊಂಡೊಯ್ಯಲು ಎರಡು ಪ್ರತ್ಯೇಕ ರ‍್ಯಾಂಪ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೂ ಕಟ್ಟಡದ ಕಾಮ ಗಾರಿ ಪೂರ್ಣಗೊಳ್ಳದೆ ಇರುವುದರಿಂದ ಸೇವೆಗೆ ಅಲಭ್ಯವಾಗಿದೆ.

೧೦.೮೬ ಕೋಟಿ ರೂ ಪಡೆದಿದ್ದ ಗುತ್ತಿಗೆದಾರ: ಛಾಬ್ರಿಯಾ ಅಸೋಸಿಯೇಟ್ಸ್ಗೆ ಮೈಸೂರು ಪಾಲಿಕೆ ೧೦.೮೬ ಕೋಟಿ ರೂ ಪಾವತಿಸಿದೆ. ವಿವಿಧ ಹಂತದಲ್ಲಿ ಬಿಲ್ ಛಾಬ್ರಿಯಾ ಅಸೋಸಿಯೇಟ್ಸ್ಗೆ ಸಂದಾಯ ಮಾಡಲಾಗಿದೆ. ಆದರೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿರು ವುದರಿಂದ ಹೆಚ್ಚುವರಿ ಹಣ ನೀಡದೆ ಇದ್ದರೆ ಕಾಮಗಾರಿ ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದ ಗುತ್ತಿಗೆದಾರ ಪಲಾಯನ ಮಾಡಿರುವುದರಿಂದ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.

ಕಾಮಗಾರಿ ಪೂರ್ಣಗೊಳಿಸಲು ಕ್ರಮ: ೨೦೧೬ರ ಅಂತ್ಯದ ವೇಳೆಗೆ ಗುತ್ತಿಗೆದಾರ ಕೈಕೊಟ್ಟ ಹಿನ್ನೆಲೆಯಲ್ಲಿ ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ಪಾಲಿಕೆ ೨೦೧೭ರಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ಮೂಲಕ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಿತ್ತು. ಇದಕ್ಕಾಗಿ ಓರ್ವ ಸ್ಥಳೀಯ ಗುತ್ತಿಗೆದಾರನ ಮೂಲಕ ಕಾಮಗಾರಿ ಆರಂಭಿಸಿತ್ತು. ದ್ವಿಚಕ್ರ ವಾಹನ ಗಳ ನಿಲುಗಡೆಗಾಗಿ ನಿರ್ಮಿಸಬೇಕಾಗಿದ್ದ ಸ್ಥಳದಲ್ಲಿ ತೋಡಲಾಗಿದ್ದ ಗುಂಡಿಯಲ್ಲಿ ೨ ಪಿಲ್ಲರ್‌ಗಳನ್ನಷ್ಟೇ ಹೊಸದಾಗಿ ಹಾಕಲಾಗಿತ್ತು. ಆದರೆ ಛಾಬ್ರಿಯಾ ಅಸೋಸಿಯೇಟ್ಸ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದೆ. ಅಲ್ಲದೆ ನಮ್ಮ ಸಂಸ್ಥೆ ಹೊರತುಪಡಿಸಿ ಬೇರಾವ ಗುತ್ತಿಗೆದಾರ ರಿಂದ ಕಾಮಗಾರಿ ನಡೆಸದಂತೆ ಕೋರಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಕಾಮಗಾರಿಗೆ ತಡೆಯಾಜ್ಞೆ ನೀಡಿದೆ. ಇದರಿಂದ ಇದುವರೆಗೂ ತಡೆ ಯಾಜ್ಞೆ ತೆರವಾಗದಿರುವುದರಿಂದ ಕಾಮಗಾರಿಗೆ ನೆನೆಗುದಿಗೆ ಬಿದ್ದಿದೆ.

 

ಪುರಭವನದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದ ಉಳಿದ ಕಾಮಗಾರಿ ೪.೫೦ ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಟೆಂಡರ್‌ಗಾಗಿ ಅನುಮತಿ ನೀಡಲು ಜಿಲ್ಲಾಧಿ ಕಾರಿಗಳ ಕಚೇರಿಗೆ ರವಾನಿಸಲಾಗಿದೆ. ಸಾಧ್ಯವಾದಷ್ಟು ಬೇಗನೇ ಕಾಮಗಾರಿ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕಾಮಗಾರಿ ಪೂರ್ಣಗೊಳಿಸಿದ ನಂತರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. -ಲಕ್ಷಿö್ಮಕಾಂತರೆಡ್ಡಿ, ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ

 

Translate »