ಅ.೭ರಿಂದ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ಕೊಡಗು

ಅ.೭ರಿಂದ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

October 4, 2021

ಮಡಿಕೇರಿ,ಅ.೩-ಅಕ್ಟೋಬರ್ ೭ರ ಕರಗ ಪೂಜೆಯಿಂದ ಅ.೧೭ರ ಕಾವೇರಿ ತೀರ್ಥೋದ್ಭವದವರೆಗೆ ಮಡಿಕೇರಿ ನಗರ ವ್ಯಾಪ್ತಿಯ ಪ್ರವಾಸಿತಾಣ ಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಮಡಿಕೇರಿಯ ರಾಜಾಸೀಟ್, ಜನರಲ್ ತಿಮ್ಮಯ್ಯ ಮ್ಯೂಸಿಯಂ, ಗದ್ದಿಗೆ, ಕೋಟೆ, ನೆಹರು ಮಂಟಪಗಳಿಗೆ ಅ.೭ರಿಂದ ೧೭ವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶ ನಿಷೇಧಿಸಿದ್ದಾರೆ. ಇನ್ನು ಕರಗ ಪೂಜೆಯಲ್ಲಿ ಪಾಲ್ಗೊಳ್ಳಲು ೨೫ ಮಂದಿಗೆ ಅವಕಾಶ ನೀಡಿದ್ದು, ಪ್ರತಿಯೊಬ್ಬರೂ ಕನಿಷ್ಠ ೧ ಡೋಸ್ ಲಸಿಕೆ ಹಾಗೂ ೭೨ ಗಂಟೆಗಳ ಮುಂಚಿನ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು. ಕರಗಗಳ ಜೊತೆ ಮನೆ ಮನೆಗೆ ತೆರಳುವವರು ಕೂಡ ಈ ನಿಯಮ ಅನುಸರಿ ಸುವಂತೆ ಸೂಚಿಸಲಾಗಿದೆ. ದೇವಾಲಯಗಳ ಒಳಗೆ ಧಾರ್ಮಿಕ ಪೂಜಾ ಕಾರ್ಯ ನಡೆಸಬಹುದು. ಮನರಂಜನಾ ಕಾರ್ಯ ಕ್ರಮಗಳಿಗೆ ಯಾವುದೇ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

Translate »