ಇಂದು ಕಂದಾಯ ಸಚಿವ ಆರ್.ಅಶೋಕ್‌ರಿಂದ ಕೋವಿಡ್‌ನಿಂದ ಮೃತಪಟ್ಟವರ ಸಾಮೂಹಿಕ ತಿಥಿ ಕಾರ್ಯ ಶ್ರೀರಂಗಪಟ್ಟಣದಲ್ಲಿ ಸಕಲ ಸಿದ್ಧತೆ
ಮೈಸೂರು

ಇಂದು ಕಂದಾಯ ಸಚಿವ ಆರ್.ಅಶೋಕ್‌ರಿಂದ ಕೋವಿಡ್‌ನಿಂದ ಮೃತಪಟ್ಟವರ ಸಾಮೂಹಿಕ ತಿಥಿ ಕಾರ್ಯ ಶ್ರೀರಂಗಪಟ್ಟಣದಲ್ಲಿ ಸಕಲ ಸಿದ್ಧತೆ

October 4, 2021

ಪ್ರಾರಂಭದಲ್ಲಿ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಮತ್ತು ದ್ವಾರಸ ನಾರಾಯಣರ ೧೨ ಕಳಸ ಪೂಜೆ, ಪ್ರಾಯಶ್ಚಿತ ತಿಲ ಹೋಮ ಗಳು ಸೇರಿ ಪಂಚ ಗವ್ಯ ಪೂಜೆ ಮಾಡಿ ವಿಷ್ಣು ಪಾದದ ರೂಪದಲ್ಲಿ ನಾಲ್ಕೂವರೆ ಅಡಿ ಉದ್ದದ ವಿಷ್ಣು ಪಾದವನ್ನಿಟ್ಟು ಪೂಜೆ ಸಲ್ಲಿಸ ಲಾಗುತ್ತದೆ. ದಶಪಿಂಡ ಪ್ರದಾನ ವಿಧಾನಗಳು ನಂತರ ೧೧ನೇ ದಿನದ ರುದ್ರ ಪಾರಾಯಣ, ದಶದಾನ ಕಾರ್ಯಗಳನ್ನು ನಡೆಸಲಾಗುತ್ತದೆ.

ಶ್ರೀರಂಗಪಟ್ಟಣ, ಅ.೩(ವಿನಯ್ ಕಾರೇಕುರ)- ಕೊರೊನಾ ೨ನೇ ಅಲೆ ವೇಳೆ ಮೃತಪಟ್ಟ ೧,೨೦೦ ಅನಾಥ ಹೆಣಗಳ ಅಂತ್ಯಸAಸ್ಕಾರ ಮಾಡಿ ಕಂದಾಯ ಇಲಾಖೆ ಮೂಲಕ ಸಾಮೂ ಹಿಕ ಅಸ್ಥಿ ವಿಸರ್ಜನೆಯನ್ನೂ ಮಾಡಿದ್ದ ಸಚಿವ ಆರ್.ಅಶೋಕ್, ಇದೀಗ ಆ ೧,೨೦೦ ಮೃತರ ಆತ್ಮಕ್ಕೆ ಮುಕ್ತಿ ದೊರ ಕಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಸಾಮೂಹಿಕ ತಿಥಿ ಕಾರ್ಯಕ್ಕೆ ಮುಂದಾಗಿದ್ದು,

ಸೋಮವಾರ (ಅ.೪) ಸಾಮೂಹಿಕ ತಿಥಿ ಕಾರ್ಯ ನಡೆಯಲಿದೆ. ಕೊರೊನಾ ಎರಡನೆಯ ಅಲೆ ಸಂದರ್ಭದಲ್ಲಿ ರಾಜ್ಯದಲ್ಲಿ ಮೃತಪಟ್ಟಿದ್ದ ೧,೨೦೦ ಅನಾಥ ಹೆಣಗಳ ಚಿತಾಭಸ್ಮಕ್ಕೆ ಕಂದಾಯ ಸಚಿವ ಆರ್. ಅಶೋಕ್, ತಮ್ಮ ಇಲಾಖೆಯ ಮೂಲಕ ಕಳೆದ ಒಂದೂವರೆ ತಿಂಗಳ ಹಿಂದೆ ಮಂಡ್ಯದ ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪದ ಕಾವೇರಿ ನದಿ ತಟದಲ್ಲಿ ಸಾಮೂಹಿಕ ಅಸ್ಥಿ ವಿಸರ್ಜನೆ ಮಾಡಿಸಿದ್ದರು.

ಇದೀಗ ಆ ೧,೨೦೦ ಆತ್ಮಗಳಿಗೆ ಸದ್ಗತಿ ಪ್ರಾಪ್ತಿಗಾಗಿ ಪಿತೃಪಕ್ಷದ ಆಚರಣೆ ಸಂದರ್ಭದಲ್ಲಿ ಪಿಂಡ ಪ್ರಧಾನಕ್ಕೆ ಸಿದ್ದತೆ ಮಾಡಿದ್ದು, ಸೋಮವಾರ (ಅ.೪) ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದ ಗಂಜಾಮ್ ನಲ್ಲಿರೋ ಘೋಸಾಯ್ ಘಾಟ್ ಸಮೀಪದ ಕಾವೇರಿ ನದಿ ತಟದಲ್ಲಿ ಸಾಮೂಹಿಕ ಪಿಂಡ ತರ್ಪಣ ನಡೆಯಲಿದೆ. ಸರ್ಕಾರದ ಪರವಾಗಿ ಕಂದಾಯ ಸಚಿವ ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹಾಗೂ ಸರ್ಕಾರದ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಡಿಸಿ ಸೇರಿದಂತೆ ಇತರ ರಾಜ್ಯ ಮಟ್ಟದ ಅಧಿಕಾರಿಗಳು ಈ ಸಾಮೂಹಿಕ ತಿಥಿ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ.

ಇನ್ನು ಸಾಮೂಹಿಕ ಅಸ್ಥಿ ವಿಸರ್ಜನೆ ಕಾರ್ಯ ನಡೆಸಿಕೊಟ್ಟ ಶ್ರೀರಂಗಪಟ್ಟಣದ ವೈದಿಕ ಕ್ರಿಯಾ ಕರ್ಮದ ಪುರೋಹಿತ ಡಾ.ಭಾನು ಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಸೋಮವಾರ ಪಿಂಡ ಪ್ರಧಾನ ಪೂಜಾ ಕೈಂಕರ್ಯದ ವಿಧಿ ವಿಧಾನಗಳು ನಡೆಯಲಿದ್ದು, ಇದಕ್ಕಾಗಿ ಇದೀಗ ಘೋಸಾಯಿ ಘಾಟ್‌ನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಸ್ಥಳದಲ್ಲಿ ಸಕಲ ಸಿದ್ದತೆ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಅಶ್ವಥಿ, ತಹಶೀಲ್ದಾರ್ ಶ್ವೇತಾ, ಡಾ.ಭಾನು ಪ್ರಕಾಶ್ ಶರ್ಮಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನು ಸ್ಥಳದಲ್ಲಿ ಸಾಮೂಹಿಕ ಪೂಜೆಗಾಗಿ ಶಾಮಿಯಾನ ಸೇರಿದಂತೆ ಪೂಜೆಗೆ ಬೇಕಾದ ಸಿದ್ಧತೆಗಳು ನಡೆದಿದ್ದು, ಸ್ಥಳಕ್ಕೆ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ. ಇನ್ನು ಸೋಮವಾರ ಬೆಳಿಗ್ಗೆ ೮ ಗಂಟೆಯಿAದ ಪೂಜೆಯ ವಿಧಿ ವಿಧಾನಗಳು ಆರಂಭವಾಗ ಲಿದ್ದು, ಸ್ಥಳದಲ್ಲಿ ಮೋಕ್ಷ ನಾರಾಯಣ ಬಲಿ ಸೇರಿದಂತೆ ಹಲವು ಅಪರ ಕರ್ಮ ಮಾಡ ಲಾಗುತ್ತದೆ. ಪ್ರಾರಂಭದಲ್ಲಿ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಮತ್ತು ದ್ವಾರಸ ನಾರಾಯಣರ ೧೨ ಕಳಸ ಪೂಜೆ, ಪ್ರಾಯಶ್ಚಿತ ತಿಲ ಹೋಮಗಳು ಸೇರಿ ಪಂಚ ಗವ್ಯ ಪೂಜೆ ಮಾಡಿ ವಿಷ್ಣು ಪಾದದ ರೂಪದಲ್ಲಿ ನಾಲ್ಕುವರೆ ಅಡಿ ಉದ್ದದ ವಿಷ್ಣುವಿನ ಪಾದವನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ದಶಪಿಂಡ ಪ್ರದಾನ ವಿಧಾನಗಳು ನಂತರ ೧೧ನೇ ದಿನದ ರುದ್ರ ಪಾರಾಯಣ, ದಶದಾನ ಕಾರ್ಯಗಳ ನಡೆಸಲಾಗುತ್ತದೆ ಎಂದು ವೈದಿಕ ಪುರೋಹಿತ ಡಾ. ಭಾನುಪ್ರಕಾಶ್ ಶರ್ಮಾ ಸೋಮವಾರದ ಪೂಜಾ ವಿಧಿ ವಿಧಾನಗಳನ್ನು ತಿಳಿಸಿದ್ದಾರೆ.

Translate »