ಕಲಾಪದಲ್ಲಿ ಅಶ್ಲೀಲ ವಿಡಿಯೊ ನೋಡಿದ ಕಾಂಗ್ರೆಸ್ ಎಂಎಲ್‍ಸಿ; ಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಮೈಸೂರು

ಕಲಾಪದಲ್ಲಿ ಅಶ್ಲೀಲ ವಿಡಿಯೊ ನೋಡಿದ ಕಾಂಗ್ರೆಸ್ ಎಂಎಲ್‍ಸಿ; ಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ

January 30, 2021

ಬೆಂಗಳೂರು: ಈ ಹಿಂದೆ ಸದನದಲ್ಲಿ ಕೂತು ಬಿಜೆಪಿಯ ಮೂವರು ಶಾಸಕರು ಬ್ಲೂ ಫಿಲಂ ವೀಕ್ಷಣೆ ಮಾಡಿ ಇಡೀ ದೇಶಾ ದ್ಯಂತ ಕರ್ನಾಟಕದ ಮಾನ ಮರ್ಯಾದೆ ಯನ್ನು ತೆಗೆದಿದ್ದರು. ಇದು ರಾಜ್ಯದ ಪಾಲಿಗೆ ಕಪ್ಪು ಚುಕ್ಕೆಯಾಗೇ ಉಳಿಕೊಂಡಿದೆ. ಇದೀಗ ಮತ್ತೊಬ್ಬ ಜನಪ್ರತಿನಿಧಿ ಕಲಾಪದಲ್ಲಿ ಕುಳಿತು ಅಶ್ಲೀಲ ವಿಡಿಯೋ ನೋಡುವ ಮೂಲಕ ಸದನದ ಮಾನ ಹರಾಜು ಹಾಕಿದ ಘಟನೆ ಶುಕ್ರವಾರ ಸಂಭವಿಸಿದೆ.

ಇಂದು ವಿಧಾನಪರಿಷತ್ ಕಲಾಪ ನಡೆಯುತ್ತಿತ್ತು. ಕಾಂಗ್ರೆಸ್ ಎಂಎಲ್‍ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್‍ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಮಾತನಾಡಿದ ಪ್ರಕಾಶ್ ರಾಠೋಡ್, ಅಶ್ಲೀಲ ವಿಡಿಯೋ ನೋಡಿಲ್ಲ. ನೂರಾರು ಗ್ರೂಪ್‍ಗಳಲ್ಲಿ ಇದ್ದೇನೆ. ಸಾವಿರಾರು ವಿಡಿಯೋ ಇವೆ. ಸ್ಟೋರೇಜ್ ಫುಲ್ ಆಗಿತ್ತು. ಅದನ್ನು ಡಿಲೀಟ್ ಮಾಡ್ತಿದ್ದೆ ಅಷ್ಟೆ. ಅದು ಅಶ್ಲೀಲ ವಿಡಿಯೋನಾ ಅನ್ನೋದೂ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ಕೊಡಬೇಕಿತ್ತು. ಕ್ಲಾರಿಫಿಕೇಷನ್ ಮೇಲೆ ಉತ್ತರ ಕೊಡುವಾಗ ಮಾಹಿತಿ ನೋಡುತ್ತಿದ್ದೆ. ಆಗ ಮೊಬೈಲ್ ಓಪನ್ ಆಗಿದೆ. ನನ್ನ ಮೊಬೈಲ್ ಸ್ಟೋರೇಜ್ ಫುಲ್ ಆಗಿತ್ತು. ಹಾಗಾಗಿ ನಾನು ಯಾವುದನ್ನೂ ನೋಡದೆ ಬಂದಿರುವ ಮೆಸೇಜ್ ಮತ್ತು ವಿಡಿಯೋ ಡಿಲೀಟ್ ಮಾಡ್ತಿದ್ದೆ. ನನಗೆ ಯಾರೂ ಅಶ್ಲೀಲ ವಿಡಿಯೋ ಕಳಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Translate »