ಕಾಂಗ್ರೆಸ್ ಅಭ್ಯರ್ಥಿ ಮಾದಂಡ ತಿಮ್ಮಯ್ಯ ನಾಮಪತ್ರ ಸಲ್ಲಿಕೆ
ಕೊಡಗು

ಕಾಂಗ್ರೆಸ್ ಅಭ್ಯರ್ಥಿ ಮಾದಂಡ ತಿಮ್ಮಯ್ಯ ನಾಮಪತ್ರ ಸಲ್ಲಿಕೆ

August 24, 2021

ವಿರಾಜಪೇಟೆ,ಆ.23-ವಿರಾಜಪೇಟೆ ಪಟ್ಟಣ ಪಂಚಾಯಿತಿ 13ನೇ ವಾರ್ಡ್‍ಗೆ ಸೆ.3ರಂದು ನಡೆಯುವ ಉಪಚುನಾ ವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂತಾ ರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ನಾಮಪತ್ರ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ಬಳಿಕ ಮಾತ ನಾಡಿದ ಅವರು, ನನಗೆ ಸಮಾಜ ಸೇವೆ ಮಾಡಲು ಕಾಂಗ್ರೆಸ್ ಅವಕಾಶ ನೀಡಿದೆ. ಈ ಚುನಾವಣೆಯಲ್ಲಿ ಜಯ ಗಳಿಸುವ ಭರವಸೆ ಇದ್ದು, ಪಕ್ಷದಲ್ಲಿ ಒಗ್ಗಟ್ಟಿನಿಂದ ಜನರ ಸೇವೆ ಮಾಡುವುದಾಗಿ ತಿಳಿಸಿದರು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯ ಗಳನ್ನು ಅಸ್ತ್ರವಾಗಿಟ್ಟುಕೊಂಡು ಚುನಾ ವಣೆಗೆ ಮುಂದಾಗಿದ್ದು, ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣಾಧಿಕಾರಿ ಉಪ ತಹಸೀ ಲ್ದಾರ್ ಪ್ರದೀಪ್‍ಕುಮಾರ್ ನಾಮ ಪತ್ರ ಸ್ವೀಕರಿಸಿದರು. ಇದಕ್ಕೂ ಮೊದಲು ಅಭ್ಯರ್ಥಿ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಪೂವಯ್ಯ, ಸಿ.ಪಿ.ಕಾವೇರಪ್ಪ, ಕರುಣ್ ಕಾಳಯ್ಯ, ಕಿಸಾನ್ ಘಟಕದ ಗೋಪಾಲ ಕೃಷ್ಣ, ವಕೀಲ ನರೇಂದ್ರ ಕಾಮತ್, ಸಿ.ಎ.ನಾಸೀರ್, ಎಜಾಜ್ ಅಹಮ್ಮದ್, ಪಕ್ಷದ ನಗರ ಅಧ್ಯಕ್ಷ ಜಿ.ಜಿ.ಮೋಹನ್, ಪಪಂ ಸದಸ್ಯರಾದ ಡಿ.ಪಿ.ರಾಜೇಶ್, ಸಿ.ಕೆ. ಪೃಥ್ವಿನಾಥ್, ರಜನಿಕಾಂತ್, ಅಗಸ್ಟೀನ್ ಬೆನ್ನಿ ಸೇರಿದಂತೆ ಪಕ್ಷದ ಕಾರ್ಯಕರ್ತರಿ ದ್ದರು. ಈ ಹಿಂದೆ ಪಟ್ಟಣ ಪಂಚಾಯಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಹರ್ಷವರ್ಧನ್ ನಿಧನ ರಾದ ಹಿನ್ನೆಲೆ ತೆರವಾದ ಸ್ಥಾನಕ್ಕೆ ಸೆ.3 ರಂದು ಉಪಚುನಾವಣೆ ನಡೆಯಲಿದೆ.

Translate »