ಸೋಮವಾರಪೇಟೆ ಪಪಂ ಉಪಚುನಾವಣೆ: ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಕೊಡಗು

ಸೋಮವಾರಪೇಟೆ ಪಪಂ ಉಪಚುನಾವಣೆ: ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

August 24, 2021

ಸೋಮವಾರಪೇಟೆ, ಆ.23- ಇಲ್ಲಿನ ಪಟ್ಟಣ ಪಂಚಾಯಿತಿಯ ಎರಡು ಸ್ಥಾನಗಳಿಗೆ ಸೆ.3 ರಂದು ನಡೆಯಲಿರುವ ಉಪ ಚುನಾ ವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಪಟ್ಟಣದ ಕಕ್ಕೆಹೊಳೆ ಸಮೀಪ ವಿರುವ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದ ವಾರ್ಡ್ 1ರ ಅಭ್ಯರ್ಥಿ ಭುವನೇಶ್ವರ್, ವಾರ್ಡ್ 3ರ ಅಭ್ಯರ್ಥಿ ಸಂಧ್ಯಾ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಚುನಾವಣಾ ಉಸ್ತುವಾರಿ ವಹಿಸಿರುವ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್, ಪಪಂ ಪ್ರಭಾರ ಅಧ್ಯಕ್ಷ ಸಂಜೀವ, ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಪ್ರಮುಖ ರಾದ ಯಾಕೂಬ್ ಮತ್ತಿತರರಿದ್ದರು.

ಬಿಜೆಪಿ ಅಭ್ಯರ್ಥಿಗಳು: ಸೋಮವಾರ ಪೇಟೆ ಪಪಂ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ವಾರ್ಡ್ 1ರ ಬಸವೇಶ್ವರ ರಸ್ತೆಗೆ ಮೃತ್ಯುಂಜಯ ಹಾಗೂ ವಾರ್ಡ್ ನಂ.3ರ ವಲ್ಲಬಾಯಿರಸ್ತೆಗೆ ಮೋಹಿನಿ ಕಣದಲ್ಲಿದ್ದಾರೆ. ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಪಟ್ಟಣದ ವಿದ್ಯಾಗಣಪತಿ ದೇವಾ ಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತೆರಳಿ ಪಟ್ಟಣ ಪಂಚಾಯಿತಿಯಲ್ಲಿ ಚುನಾ ವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾ ಕಾನೂನು ಪ್ರಕೋ ಷ್ಠದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಕಾರ್ಯದರ್ಶಿ ಮೋಕ್ಷಿತ್, ಗೌತಮ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ನಗರ ಅಧ್ಯಕ್ಷ ಸೋಮೇಶ್ ಸೇರಿದಂತೆ ಮತ್ತಿತರರಿದ್ದರು.

 

ಜೆಡಿಎಸ್ ನಾಮಪತ್ರ: ವಾರ್ಡ್ 1ರಿಂದ ಗಿರೀಶ್ ಹಾಗೂ ವಾರ್ಡ್ 3ರಿಂದ ಪುಷ್ಪ ಜೆಡಿಎಸ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷೆ ರುಬೀನಾ, ತಾಲೂಕು ಅಧ್ಯಕ್ಷ ನಾಗರಾಜು, ನಗರಾಧ್ಯಕ್ಷ ಜಯಾ ನಂದ, ಪ್ರಮುಖರಾದ ಸುರೇಶ್, ಪರಮೇಶ್, ತ್ರಿಶೂಲ್ ಮತ್ತಿತರರಿದ್ದರು.

Translate »