ಪ್ರವಾಸಿಗರ ಮೋಜಿನ ತಾಣವಾದ ಕೋಟೆಬೆಟ್ಟ
ಕೊಡಗು

ಪ್ರವಾಸಿಗರ ಮೋಜಿನ ತಾಣವಾದ ಕೋಟೆಬೆಟ್ಟ

August 24, 2021

ಮಡಿಕೇರಿ,ಆ.23-ಕಣ್ಣು ಹಾಯಿಸಿ ದಷ್ಟು ದೂರ ಕಾಣುವ ಹಚ್ಚ ಹಸಿರಿನ ಪರಿಸರ… ಬಾನೆತ್ತರದ ಕಲ್ಲಿನ ಬೃಹತ್ ಬೆಟ್ಟ.. ಬೆಟ್ಟ ತಪ್ಪಲಲ್ಲಿ ಅರಳಿರುವ ಕುರುಂಜಿ ಹೂವುಗಳು… ಬೆಟ್ಟದಲ್ಲಿ ಪಾಂಡವರ ಕಾಲದ ಈಶ್ವರ ದೇವಾ ಲಯ… ದೇವಾಲಯ ಸುತ್ತಮುತ್ತ ಮದ್ಯದ ಬಾಟಲಿಗಳ ರಾಶಿ..! ಇದು ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆ ಬೆಟ್ಟದಲ್ಲಿ ಕಂಡು ಬರುವ ದೃಶ್ಯಗಳು.

ಕೋಟೆಬೆಟ್ಟ ಪವಿತ್ರ ಕ್ಷೇತ್ರವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅದೊಂದು ಪ್ರವಾಸಿ ತಾಣವಾಗಿ, ಮೋಜುಮಸ್ತಿಯ ಕೇಂದ್ರವಾಗಿ ಪರಿವರ್ತನೆಯಾಗಿದೆ. ಕೋಟೆಬೆಟ್ಟದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದ್ದು, ಅಲ್ಲಿನ ಗ್ರಾಮಸ್ಥರನ್ನು ಹೌಹಾರುವಂತೆ ಮಾಡಿದೆ. ಪ್ರತಿ ದಿನ ನೂರಾರು ವಾಹನಗಳಲ್ಲಿ ಪ್ರವಾಸಿ ಗರು ಆಗಮಿಸಿ ಅಲ್ಲಿನ ಪವಿತ್ರ ಪರಿಸರ ಹಾಳುಗೆಡುವುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿ ಎನ್ನು ವಂತೆ ಕೋಟೆ ಬೆಟ್ಟದ ತಪ್ಪಲಲ್ಲಿರುವ ಶ್ರೀ ಬೊಟ್ಲಪ್ಪ(ಈಶ್ವರ) ದೇವಾಲಯದ ಸುತ್ತಮು ತ್ತಲು ಮದ್ಯ ಹಾಗೂ ನೀರಿನ ಪ್ಲಾಸ್ಟಿಕ್ ಬಾಟಲಿ ಗಳ ರಾಶಿಯೇ ಕಂಡು ಬರುತ್ತಿದೆ.
ಈ ಸ್ಥಳದಲ್ಲಿ ಪವಿತ್ರತೆ ಕಾಪಾಡುವಂತೆ, ಪಾದರಕ್ಷೆಗಳನ್ನು ಬಳಸದಂತೆ ಫಲಕ ಅಳವಡಿಸಿದ್ದರೂ ಪಾಲನೆಯಾಗುತ್ತಿಲ್ಲ. ಇನ್ನು ಆ ಗ್ರಾಮದ ಕಟ್ಟುಪಾಡುಗಳು ಕೂಡ ಪ್ರವಾಸಿಗರಿಂದ ಹಾಳಾಗುತ್ತಿದೆ. ಮಾತ್ರವಲ್ಲದೆ, ಪುಣ್ಯಕ್ಷೇತ್ರದ ಪಾವಿತ್ರ್ಯಕ್ಕೆ ಧ್ಕಕೆಯಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಈ ಬೆಟ್ಟದ ದೇವಾಲಯಯಲ್ಲಿ ದೇವರಿಗೆ ವಾರಕ್ಕೊಮ್ಮೆ ಪೂಜೆ ಸಲ್ಲಿಸಲಾಗುತ್ತಿದ್ದು, ಈ ಪದ್ಧತಿ ಅನಾದಿಕಾಲದಿಂದಲೂ ನಡೆದು ಕೊಂಡು ಬಂದಿದೆ. ಬೆಟ್ಟದ ಪಾದ ಹಾಗೂ ಮೇಲ್ಭಾಗ ಒಂದೊಂದು ಈಶ್ವರ ದೇವಾ ಲಯವಿದ್ದು, ಈ ಎರಡೂ ದೇವಾಲಯಗಳಿಗೆ ಸುರಂಗ ಮಾರ್ಗವಿದೆ ಎಂಬ ನಂಬಿಕೆ ಇದೆ.

ಇಲ್ಲಿಗೆ ಬರುವ ಪ್ರವಾಸಿಗರು ಮದ್ಯ, ಮಾಂಸ ಸೇವನೆ ಮಾಡುತ್ತಾ, ಮೋಜು ಮಸ್ತಿ ನಡೆಸುತ್ತಾರೆ. ಈ ಕೃತ್ಯಕ್ಕೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ, ಸೋಮವಾರಪೇಟೆ ಪೊಲೀಸರು ಹಾಗೂ ಸೋಮವಾರಪೇಟೆ ತಾಲೂಕು ಆಡಳಿತಕ್ಕೂ ಈ ಹಿಂದೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಟೆಬೆಟ್ಟ ಪವಿತ್ರ ಕ್ಷೇತ್ರ. ಇದು ಪ್ರವಾಸಿ ತಾಣ ಅಲ್ಲ. ಕೊಡಗಲ್ಲಿ ವೀಕೆಂಡ್ ಲಾಕ್‍ಡೌನ್ ಇದ್ದರೂ ಕೂಡ ಶನಿವಾರ, ಭಾನುವಾರ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ದೇವಾ ಲಯಕ್ಕೆ ಹೋಗುವ ಪ್ರವೇಶ ದ್ವಾರದಲ್ಲಿ ಗ್ರಿಲ್ ಹಾಕಿದ್ದರೂ ಕೂಡ ಅದನ್ನು ಹತ್ತಿ ಮೇಲ್ಭಾಗಕ್ಕೆ ತೆರಳಿ ಮೋಜು ಮಸ್ತಿ ಮಾಡು ತ್ತಿದ್ದಾರೆ. ಇಲ್ಲೊಂದು ಚೆಕ್‍ಪೋಸ್ಟ್ ವಾಹನ ಗಳನ್ನು ತಪಾಸಣೆ ನಡೆಸಿದ ಬಳಕವೇ ಒಳ ಬಿಡಲು ವ್ಯವಸ್ಥೆ ಮಾಡುವಂತೆ ಗ್ರಾಮಸ್ಥ ರಾದ ಎಂ.ಕೆ.ಲಿಂಗಪ್ಪ, ಪಾಸುರ ಪಾಂಡು ಮಾದಪ್ಪ, ಅಜಯ್ ನಾಣಯ್ಯ, ಸುಧಿ ಹಾಗೂ ಅಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಾಕ್ಸ್…

Translate »