ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಿಲ್ಲಿಸುವುದಾಗಿ ಪಿತೂರಿಗಾರರಿಂದ ಬೆದರಿಕೆ
ಮೈಸೂರು

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಿಲ್ಲಿಸುವುದಾಗಿ ಪಿತೂರಿಗಾರರಿಂದ ಬೆದರಿಕೆ

December 13, 2021

ಮೈಸೂರು,ಡಿ.12-ಪ್ರಸಕ್ತ ವರ್ಷ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗುವ ವೇಳೆ ಪಿತೂರಿದಾರರು ಅತಿಥಿಗಳ ಬಗ್ಗೆ ಕ್ಯಾತೆ ತೆಗೆದು ಗಲಾಟೆ ಆರಂಭಿಸಿದ್ದಾರೆ. ಆರಂಭದಲ್ಲಿ ಏನೋ ಹೇಳಿ, ನಂತರ ಮತ್ತೇನೋ ವಿಚಾರಗಳನ್ನು ತರುತ್ತಿದ್ದಾರೆ. ಕಲಾಮಂದಿರದ ಆವರಣ ವನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೇ ರಂಗಾ ಯಣದಲ್ಲಿ ಗಲಾಟೆ ಮಾಡುವುದಾಗಿಯೂ ಬಹುರೂಪಿ ನಾಟಕೋತ್ಸವವನ್ನು ನಿಲ್ಲಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಮೈಸೂರು ರಂಗಾಯಣ ನಿರ್ದೇ ಶಕ ಅಡ್ಡಂಡ ಸಿ.ಕಾರ್ಯಪ್ಪ ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 2020ರ ಜನವರಿ 1ರಂದು ನಾನು ರಂಗಾಯಣ ನಿರ್ದೇ ಶಕನಾಗಿ ಕಾರ್ಯಾರಂಭ ಮಾಡಿದ ದಿನದಿಂದಲೂ ನಾನು ಟಿಪ್ಪು ಸುಲ್ತಾನರ ವಿರೋಧಿ ಎಂಬ ನೆಪವೊಡ್ಡಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪಿತೂರಿಗಾರರ ಗುಂಪು ರಂಗಾಯಣದ ಮುಂದೆ ಪ್ರತಿಭಟನೆ ಮಾಡಿ ಹಾಗೂ ಪತ್ರಿಕಾ ಹೇಳಿಕೆಗಳನ್ನು ನೀಡುವ ಮೂಲಕ ಕಿರು ಕುಳ ಕೊಟ್ಟಿದ್ದರು. ಅವರ ಉದ್ದೇಶ ನಾನು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದೇ ಆಗಿತ್ತು. ಆದರೆ ಅದನ್ನು ಲೆಕ್ಕಿಸದೇ ಕರ್ತವ್ಯ ಮುಂದು ವರೆಸಿದೆ ಎಂದು ಅವರು ಹೇಳಿದ್ದಾರೆ.

ಪ್ರಸಕ್ತ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ `ಪದ್ಮಶ್ರೀ’ ಪುರಸ್ಕøತರಾದ ಮಾತಾ ಮಂಜಮ್ಮ, ತುಳಸಿಗೌಡ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ವಕೀಲರೂ ಆದ ಚಿತ್ರತಾರೆ ಮಾಳವಿಕ ಅವಿನಾಶ್, ನಾ.ಡಿಸೋಜ, ಹೆಚ್.ಎಸ್. ವೆಂಕಟೇಶ್ ಮೂರ್ತಿ, ಚಕ್ರವರ್ತಿ ಸೂಲಿಬೆಲೆ, ವಿಜಯಲಕ್ಷ್ಮಿ ಬಾಳೆಕುಂದ್ರಿ, ಅ.ಶ್ರೀ.ಆನಂದ, ಸುರೇಶ್ ಹೆಬ್ಳೀಕರ್, ಟಿ.ಎಸ್. ನಾಗಾಭರಣ ಅವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಅತಿಥಿಗಳ ಈ ಪಟ್ಟಿಯನ್ನು ಪಿತೂರಿದಾರರು ನೋಡಲಿ, ನಾನು ಕೇವಲ ಸಂಘ ಪರಿವಾರದವರನ್ನು ಮಾತ್ರ ಅತಿಥಿಗಳಾಗಿ ಆಹ್ವಾನಿ ಸಿದ್ದೇನೆಯೇ? ಇಲ್ಲಿ ಕೋಮುವಾದವಿದೆಯೇ? ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ನನ್ನ ಅವಧಿಯಲ್ಲಿ `ಪರ್ವ’, `ಮೂಕನ ಮಕ್ಕಳು’, `ಸೀತಾ ಸ್ವಯಂವರ’, `ಕೊಡೋದಿಲ್ಲ-ಬಿಡೋದಿಲ್ಲ’, `ಸೂತ್ರಧಾರ’, `ಮ್ಯಾಕ್‍ಬೆತ್’, `ಕದಡಿದ ನೀರು’, `ತಾಮ್ರಪತ್ರ’, `ಚಿತ್ರಪಟ’, `ಚಂದ್ರಗಿರಿಯ ತೀರದಲ್ಲಿ’ ಮುಂತಾದ ನಾಟಕಗಳಲ್ಲದೇ `ಅರಿವು’ ಮತ್ತು `ಮೂಡಲಿ ಬೆಳಕು’ ಎಂಬ ಬೀದಿ ನಾಟಕಗಳನ್ನು ಸಿದ್ಧ ಪಡಿಸಿ ಪ್ರದರ್ಶಿಸಲಾಗಿದೆ. ಅದು ಈಗಲೂ ಪ್ರದರ್ಶನಗೊಳ್ಳು ತ್ತಿದೆ. `ಚಂದ್ರಗಿರಿಯ ತೀರದಲ್ಲಿ’ ನಾಟಕವು ಮುಸ್ಲಿಂ ಮಹಿಳೆ ಯಾದ ಸಾಹಿತಿ ಸಾರಾ ಅಬೂಬಕರ್ ಬರೆದ ಕಾದಂಬರಿ ಆಧರಿಸಿದ ನಾಟಕವಾಗಿದೆ. `ಸೂತ್ರಧಾರ’ ನಾಟಕವು ಪರಿ ಶಿಷ್ಟರಿಗಾಗಿ ರೂಪಿಸಲಾದ ನಾಟಕವಾಗಿದ್ದು, ಇಲ್ಲಿ ಕೋಮು ವಾದವಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

`ಪರ್ವ’ ನಾಟಕವನ್ನು ಆರಂಭಿಸಿದಾಗಲೂ ಇದೇ ಪಿತೂರಿ ಗಾರರ ಗುಂಪು ಗಲಾಟೆ ಮಾಡಿತ್ತು. ಸರ್ಕಾರದಿಂದ ಅನು ದಾನ ಬರುವ ಮುನ್ನವೇ ದುಂದುವೆಚ್ಚ ಮಾಡಲಾಗಿದೆ ಎಂದು ಅಬ್ಬರಿಸಿತ್ತು. ನಂತರ `ಪರ್ವ’ವನ್ನು ವಿರೋಧಿಸಿದ್ದವರಲ್ಲೇ ಕೆಲವರು ತಂತ್ರಜ್ಞರು ಎಂದು ಹೇಳಿಕೊಂಡು ಕೆಲಸ ಮಾಡಿ ಹಣ ಪಡೆದು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ರಂಗಾಯಣದಲ್ಲಿ ಯಾವುದೇ ರೀತಿಯ ಗೊಂದಲ ಗಳು ಅಥವಾ ಸಮಸ್ಯೆಗಳಿಲ್ಲ. ನಮ್ಮ ಕಲಾವಿದರಿಗೆ ಯಾವುದೇ ರೀತಿಯ ಸಮಸ್ಯೆಯೂ ಇಲ್ಲ. `ನಮಗೆ ಯಾವುದೇ ತೊಂದರೆಯಾಗಿಲ್ಲ. ನಮ್ಮನ್ನು ದಾಳವಾಗಿ ಬಳಸಿಕೊಳ್ಳ ಬೇಡಿ’ ಎಂದು ರಂಗಾಯಣ ಕಲಾವಿದರು ಪತ್ರಿಕಾ ಹೇಳಿಕೆ ನೀಡಿದ್ದರೂ ಕೂಡ ಪಿತೂರಿಗಾರರು ನಮ್ಮ ಕಲಾವಿದರಿಗೆ ನಿರಂತರವಾಗಿ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ನಿರ್ದೇ ಶಕರ ವಿರುದ್ಧ ಧ್ವನಿ ಎತ್ತಿ, ಕಾರ್ಯಕ್ರಮಗಳನ್ನು ಬಹಿಷ್ಕರಿಸಿ, ನಾಟಕ ಪ್ರದರ್ಶನಗಳನ್ನು ನಿಲ್ಲಿಸಿ, ನಿಮಗೆ ತೊಂದರೆ ಯಾಗಿದೆ ಎಂದು ಹೇಳಿಕೆ ನೀಡಿ ಎಂದೆಲ್ಲಾ ಒತ್ತಡ ಹೇರುತ್ತಿದ್ದಾರೆ ಎಂದು ಕಾರ್ಯಪ್ಪ ಆರೋಪಿಸಿದ್ದಾರೆ.

Translate »