ಆಧ್ಯಾತ್ಮಿಕತೆ, ನೈತಿಕ ಮೌಲ್ಯಗಳಿಂದ ಹೊಸ ಜೀವನ: ಸ್ವಾಮಿ ಮುಕ್ತಿದಾನಂದಜೀ ಅಭಿಮತ
ಮೈಸೂರು

ಆಧ್ಯಾತ್ಮಿಕತೆ, ನೈತಿಕ ಮೌಲ್ಯಗಳಿಂದ ಹೊಸ ಜೀವನ: ಸ್ವಾಮಿ ಮುಕ್ತಿದಾನಂದಜೀ ಅಭಿಮತ

December 15, 2021

ಮೈಸೂರು,ಡಿ.14(ಆರ್‍ಕೆಬಿ)- ಆಧ್ಯಾತ್ಮಿ ಕತೆ ಮತ್ತು ನೈತಿಕ ಮೌಲ್ಯಗಳು ಜೀವನಕ್ಕೆ ಹೊಸ ರೂಪ ನೀಡಲಿದೆ. ವೃತ್ತಿಪರರು ತಮ್ಮ ಕರ್ತವ್ಯಗಳನ್ನು ವೃತ್ತಿಪರವಾಗಿ ನಿರ್ವಹಿಸಲು ಮಾನಸಿಕ ಶಕ್ತಿಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಯೋಗ, ಧ್ಯಾನ, ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳು ಶಿಕ್ಷ ಣದ ಭಾಗವಾಗಿದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ತಿಳಿಸಿದರು.

ಮೈಸೂರಿನ ರಾಮಕೃಷ್ಣ ಆಶ್ರಮದ ಆವ ರಣದಲ್ಲಿರುವ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (ರಿಂಸೆ) ಸಭಾಂ ಗಣದಲ್ಲಿ ಸುಯೋಗ್ ನರ್ಸಿಂಗ್ ಕಾಲೇ ಜಿನ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿಗಳಿ ಗಾಗಿ ಆಯೋಜಿಸಿದ್ದ ಆಧ್ಯಾತ್ಮಿಕ ಮತ್ತು ನೈತಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು `ಪರಿಣಾಮಕಾರಿ ಜೀವನಕ್ಕಾಗಿ ಕೆಲಸದ ಸಂಸ್ಕೃತಿಯಾಗಿರುವ ಕರ್ಮಯೋಗ’ ವಿಷಯ ಕುರಿತು ಮಾತನಾಡಿದರು.

ಉತ್ತಮ ಕೆಲಸದ ಸಂಸ್ಕೃತಿ ಮತ್ತು ನಡ ವಳಿಕೆಯು ಉತ್ತಮ ಜೀವನದ ದೃಷ್ಟಿಕೋನ ಹೊಂದಿದೆ. ಅಲ್ಲದೆ ಅದಕ್ಕೆ ಹೊಸ ಉದ್ದೇಶ ವನ್ನು ನೀಡುತ್ತದೆ. ಮೂಲಭೂತ ನೈತಿಕ ಮೌಲ್ಯಗಳಿಲ್ಲದೆ, ನೈತಿಕ ಕೆಲಸದ ಸ್ಥಳ ಸಂಸ್ಕೃತಿ ಯನ್ನು ರಚಿಸುವುದು ಅಸಾಧ್ಯ ಎಂದರು.

ಅರ್ಥಪೂರ್ಣ ಜೀವನ ನಿರ್ವಹಿಸುವು ದನ್ನು ಅರಿತುಕೊಳ್ಳಬೇಕು. ಸ್ವಾಮಿ ವಿವೇ ಕಾನಂದರ ಪ್ರಕಾರ, ಜೀವನದಲ್ಲಿ ಅನೈತಿಕತೆ, ದುಷ್ಟತನ ಮತ್ತು ಸಂಕಟಗಳಿಗೆ ದೌರ್ಬ ಲ್ಯವು ಮುಖ್ಯ ಕಾರಣವಾಗಿದೆ ಮತ್ತು ದೌರ್ಬಲ್ಯಕ್ಕೆ ಕಾರಣ ಒಬ್ಬನ ನಿಜವಾದ ಸ್ವಭಾವದ ‘ಆತ್ಮ’ನ ಬಗ್ಗೆ ಅಜ್ಞಾನ. `ಆತ್ಮ’ನ ಜ್ಞಾನವು ನಮ್ಮ ದೌರ್ಬಲ್ಯವನ್ನು ಹೋಗ ಲಾಡಿಸಲು ಮತ್ತು ಸದ್ಗುಣಶೀಲ ಜೀವನ ವನ್ನು ನಡೆಸಲು ನಮಗೆ ಅಪಾರ ಶಕ್ತಿ ಯನ್ನು ನೀಡುತ್ತದೆ ಎಂದು ಹೇಳಿದರು.

ನಾವು ಮಾಡುವ ಎಲ್ಲಾ ಕಾರ್ಯಗಳನ್ನು ಪೂಜೆಯಂತೆ ಮಾಡಬೇಕು. ಕಾರ್ಯಗಳ ಫಲವನ್ನು ಭಗವಂತನಿಗೆ ಅರ್ಪಿಸಬೇಕು. ಯಾವುದೇ ಕೆಲಸವನ್ನು ನೈತಿಕ ಮೌಲ್ಯ ಗಳೊಂದಿಗೆ ಮಾಡಿದಾಗ ಮಾತ್ರ ಅದು ಆಧ್ಯಾತ್ಮಿಕವಾಗಿ ಮನಸ್ಸು ಶುದ್ಧಿಯಾಗು ತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಆಧ್ಯಾತ್ಮಿಕ ಶಿಸ್ತು ಅಥವಾ ಯೋಗದಿಂದ ಮಾನಸಿಕವಾಗಿ ಹೆಚ್ಚು ನೆಮ್ಮದಿ ಸಿಗುತ್ತದೆ. ರಿಂಸೆ ಸಂಸ್ಥೆಯ ಮುಖ್ಯ ಉದ್ದೇಶವೂ ತನ್ನಲ್ಲಿ ನಂಬಿಕೆಯನ್ನು ಹುಟ್ಟುಹಾಕುವುದು ಮತ್ತು ಜೀವನ ಮತ್ತು ಜೀವ ನೀಡುವ ಶಕ್ತಿಯನ್ನು ನೀಡುವುದು. ಆಧ್ಯಾತ್ಮಿಕ, ನೈತಿಕ ಮತ್ತು ಶಾಶ್ವತ ಮೌಲ್ಯಗಳ ವ್ಯಕ್ತಿತ್ವ ಅಭಿ ವೃದ್ಧಿ ಮತ್ತು ಮಾನವ ಶ್ರೇಷ್ಠತೆಯೊಂದಿಗೆ ಉನ್ನತ ವ್ಯಕ್ತಿಗಳನ್ನು ರೂಪಿಸುವುದಾಗಿದೆ ಎಂದು ಹೇಳಿದರು.

ವಿದ್ವಾನ್ ಕೆ.ಪಿ.ಪ್ರದ್ಯುಮ್ನ ಅವರು `ಭಾರ ತೀಯ ಸಂಸ್ಕೃತಿ’ ಕುರಿತು ಪವರ್ ಪಾಯಿಂಟ್ ಕಾರ್ಯಕ್ರಮ ನೀಡಿದರು. ಅವರು ವಿವಿಧ ಯುಗಗಳ ಮೂಲಕ ಭಾರ ತೀಯ ಸಂಸ್ಕøತಿಯ ವಿಕಾಸವನ್ನು ವಿವರಿ ಸಿದರು. `ಆಧ್ಯಾತ್ಮಿಕತೆ ದೈಹಿಕ ಮತ್ತು ಮಾನ ಸಿಕ ಆರೋಗ್ಯಕ್ಕೆ ಆಧ್ಯಾತ್ಮಿಕತೆ ಪ್ರಮುಖ ಅಂಶ’ ವಿಷಯ ಕುರಿತು ಸುಯೋಗ್ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್.ಪಿ. ಯೋಗಣ್ಣ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇ ಗೌಡ, ರಾಮಕೃಷ್ಣ ನೈತಿಕ ಮತ್ತು ಆಧ್ಯಾ ತ್ಮಿಕ ಶಿಕ್ಷಣ ಸಂಸ್ಥೆ (ರಿಂಸೆ) ಕರೆಸ್ಪಾಂಡೆಂಟ್ ಸ್ವಾಮಿ ಶಿವಕಂಠಾನಂದ, ಸುಯೋಗ್ ವಿಜ್ಞಾನ ಆರೋಗ್ಯ ಸಂಸ್ಥೆಯ ಪ್ರಾಂಶುಪಾಲ ಡಾ.ಹೆಚ್.ಆರ್.ಪುನೀತ್, ಸುಯೋಗ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಆರ್.ಅಮಿತಾ ಇನ್ನಿತರರು ಉಪಸ್ಥಿತರಿದ್ದರು.

Translate »