ಜೆಎಸ್‌ಎಸ್ ಕಾಲೇಜಿನಲ್ಲಿ ಸಂವಿಧಾನ ಕುರಿತ ‘ಸೂತ್ರಧಾರ’ ನಾಟಕ ಪ್ರದರ್ಶನ
ಮೈಸೂರು

ಜೆಎಸ್‌ಎಸ್ ಕಾಲೇಜಿನಲ್ಲಿ ಸಂವಿಧಾನ ಕುರಿತ ‘ಸೂತ್ರಧಾರ’ ನಾಟಕ ಪ್ರದರ್ಶನ

November 19, 2021

ಮೈಸೂರು, ನ. ೧೮- ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣ ಜ್ಯ ಮತ್ತು ವಿಜ್ಞಾನ ಕಾಲೇಜಿ ನಲ್ಲಿ ಮೈಸೂರಿನ ರಂಗಾಯಣದ ವತಿ ಯಿಂದ ವಿದ್ಯಾರ್ಥಿಗಳಿಗಾಗಿ ಎಸ್. ರಾಮ ನಾಥ್ ರಚಿಸಿರುವ ಸಂವಿಧಾನದ ಆಶಯ ಕುರಿತ ‘ಸೂತ್ರಧಾರ’ ನಾಟಕವನ್ನು ಪ್ರದರ್ಶಿಸಲಾಯಿತು.

ನಂತರ ನಡೆದ ಸಂವಾದದಲ್ಲಿ ಪಾಲ್ಗೊಂಡ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು, ಸಂವಿಧಾನದ ಆಶಯವನ್ನು ಜನತೆಗೆ ತಲುಪಿಸಬೇಕಾ ಗಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆ ಗಳನ್ನು ಹಮ್ಮಿಕೊಂಡಿವೆ. ಅಂತೆಯೇ ರಾಜ್ಯ ಸರ್ಕಾರದ ನಿರ್ದೇಶನದಂತೆ ‘ಸೂತ್ರ ಧಾರ’ ನಾಟಕವನ್ನು ರಂಗಾಯಣವು ಹಲವೆಡೆ ಪ್ರದರ್ಶಿಸುತ್ತಿದೆ. ಸಂವಿಧಾನದ ಆಶಯ ಮತ್ತು ಸಂವಿಧಾನದ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರರ ಕೊಡುಗೆಯನ್ನು ತಿಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸಮುಚ್ಚ ಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ, ‘ಜನತೆಯನ್ನು ತಲುಪುವಲ್ಲಿ ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮವಾಗಿ ರುವ ನಾಟಕ ಪ್ರಕಾರದಲ್ಲಿ ಸಂವಿಧಾನದ ಆಶಯಗಳನ್ನು ತಿಳಿಸುವ ಪ್ರಯತ್ನ ಶ್ಲಾಘ ನೀಯವಾದುದು. ‘ಸೂತ್ರಧಾರ’ ನಾಟಕ ಸಂವಿಧಾನದ ಆಶಯದ ಜೊತೆಗೆ ಸ್ವಾತಂತ್ರö್ಯಪೂರ್ವ ಮತ್ತು ಸ್ವಾತಂತ್ರö್ಯ ನಂತರದ ಭಾರತವನ್ನು ಚಿತ್ರಿಸುತ್ತದೆ. ಆ ಮೂಲಕ ನೋಡುಗರಲ್ಲಿ ದೇಶ ಮತ್ತು ಸಂವಿಧಾನದ ಬಗ್ಗೆ ಚಿಂತಕನಾತ್ಮವಾದ ಅರಿವು ಮೂಡಿಸುತ್ತದೆ. ಸರ್ವರೂ ಸಮಾನತೆಯಿಂದ ಬಾಳಬೇಕೆಂದು ಡಾ. ಅಂಬೇಡ್ಕರರ ಸಂವಿಧಾನದ ಆಶಯ ವಾಗಿದೆ. ನಾವುಗಳು ಆ ದಿಶೆಯಲ್ಲಿ ಸಮಾನತೆಯ ಸಮಾಜ ಕಟ್ಟಲು ಶ್ರಮಿಸ ಬೇಕು. ಆಗ ಮಾತ್ರ ಇಂತಹ ನಾಟಕಗಳ ಪ್ರದರ್ಶನ ಸಾರ್ಥಕವಾಗುತ್ತದೆ. ಸಂವಿಧಾನದ ಆಶಯವನ್ನು ಅಭಿನಯಿಸಿ ತೋರಿಸು ವುದು ಸುಲಭದ ಕಾರ್ಯವಲ್ಲ. ರಂಗಾ ಯಣದ ಕಲಾವಿದರು ಹಲವು ರಂಗ ತಂತ್ರಗಳೊAದಿಗೆ ಅತ್ಯಂತ ಯಶಸ್ವಿಯಾಗಿ ಅಭಿನಯಿಸಿದ್ದಾರೆ. ಈ ನಾಟಕ ಹೆಚ್ಚು ಪ್ರದರ್ಶನಗೊಳ್ಳಲಿ ಎಂದು ಆಶಿಸಿದರು. ನಾಟಕದ ರಚನೆಕಾರ ಎಸ್. ರಾಮನಾಥ್ ಮಾತನಾಡಿ, ‘ಭಾರತ ಸಂವಿಧಾನದ ಶ್ರೇಷ್ಠತೆಯನ್ನು ಇಂದಿನ ತಲೆಮಾರಿನವರಿಗೆ ತಲುಪಿಸುವುದು ಬಹಳ ಮುಖ್ಯ ಕೆಲಸವಾಗಿದೆ. ಇಂದು ಹಲವೆಡೆ ವಾಕ್ ಸ್ವಾತಂತ್ರö್ಯದ ನೆಪದಲ್ಲಿ ಏನೇನೋ ಮಾತುಗಳನ್ನಾಡುತ್ತಿದ್ದಾರೆ. ಸಂವಿಧಾನದ ಆಶÀಯಗಳ ಗ್ರಹಿಕೆ ಸರಿ ಯಾಗಿ ಆಗುತ್ತಿಲ್ಲ. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಹಿಂದಿನ ಉದ್ದೇಶವೇ ಅನೇಕರಿಗೆ ಗೊತ್ತಿಲ್ಲ. ಇವುಗಳನ್ನು ಸರಿ ಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ಸಾಧ್ಯ. ಇವುಗಳ ಅವಶ್ಯಕತೆಯನ್ನು ಗಂಭೀರವಾಗಿ ಗ್ರಹಿಸಿ ಇವುಗಳಿಗೆ ಬಾಬಾಸಾಹೇಬರು ಸಂವಿಧಾನದಲ್ಲಿ ಪ್ರಧಾನ ಸ್ಥಾನ ನೀಡಿ ದ್ದಾರೆ. ಈ ಹಿನ್ನೆಲೆಯಲ್ಲಿ ಸೂತ್ರಧಾರ ನಾಟಕ ರಚಿಸಲಾಗಿದೆ ಎಂದರು.

 

Translate »