ನಾಳೆ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ನೇತ್ರದಾನ, ರಕ್ತದಾನ ಶಿಬಿರ, ಗೀತ ಗಾಯನ
ಮೈಸೂರು

ನಾಳೆ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ನೇತ್ರದಾನ, ರಕ್ತದಾನ ಶಿಬಿರ, ಗೀತ ಗಾಯನ

November 19, 2021

ಮೈಸೂರು,ನ.18(ಪಿಎಂ)-ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕøತಿಕ ವೃತ್ತಿ ಕಲಾವಿದರ ಸಮಿತಿಯ ವತಿಯಿಂದ ಕನ್ನಡ ಚಲನಚಿತ್ರದ ಖ್ಯಾತ ನಾಯಕ ನಟ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ನ.20 ರಂದು ನೇತ್ರದಾನ, ರಕ್ತದಾನ ಶಿಬಿರ ಮತ್ತು ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಪುಟ್ಟಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಬೆಳಗ್ಗೆ 9.30ರಿಂದ ಕಲಾಮಂದಿರದ ಆವರಣದಲ್ಲಿ ಶಿಬಿರ ಆರಂಭಗೊಳ್ಳಲಿದೆ. ನೇತ್ರದಾನ ಮತ್ತು ರಕ್ತದಾನ ಮಾಡಲಿಚ್ಛಿಸುವವರು ನೋಂದಾಯಿಸಿಕೊಳ್ಳಲು ಮೊ.ಸಂ. 9845078545 ಅಥವಾ 96205 13145 ಸಂಪರ್ಕಿಸಬಹುದು ಎಂದರು.

ಸಂಜೆ 5ಕ್ಕೆ ಕಲಾಮಂದಿರ ಸಭಾಂಗಣದಲ್ಲಿ `ಅಪ್ಪು ಆರಾಧನೆ’ ಶೀರ್ಷಿಕೆಯಡಿ ಗೀತಗಾಯನ ನಡೆಯಲಿದೆ. ಸಂಜೆ 6ಕ್ಕೆ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸ್ಮರಿಸಲಾಗುವುದು. ಕಾರ್ಯಕ್ರಮದಲ್ಲಿ ನಟ ಮಂಡ್ಯ ರಮೇಶ್, ಶ್ರೀ ವಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಮೊದಲಾದವರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಸಮಿತಿ ಸಹ ಕಾರ್ಯದರ್ಶಿ ಬಿ.ಶ್ರೀಕಂಠರಾವ್, ನಿರ್ದೇಶಕರಾದ ಎಂ.ವಿ.ನಂದಕುಮಾರ್, ಆರ್.ಶಿವಕುಮಾರ್, ಸದಸ್ಯ ಪ್ರಕಾಶ್ ಗೋಷ್ಠಿಯಲ್ಲಿದ್ದರು.

Translate »