ಅಯೋಧ್ಯೆ,ಅ.10- ಅಯೋಧ್ಯೆಯ ರಾಮ ದೇವಾಲಯ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ದೇವಾ ಲಯದ ಶಿಲಾನ್ಯಾಸ ಕಾರ್ಯವು ನಡೆ ದಿದ್ದು, ಈಗ ದೇವಾಲಯಕ್ಕೆ ಅದ್ಭುತ ಕಲಾಕೃತಿಗಳನ್ನೊಳಗೊಂಡ ಕಂಬ ವನ್ನು ಸ್ಥಾಪಿಸುವ ಕೆಲಸ ನಡೆಯು ತ್ತಿದ್ದು, ಇದಕ್ಕಾಗಿ ಕೆತ್ತಿದ ಕಲ್ಲಿನ ಕಂಬ ಗಳನ್ನು ಅಯೋಧ್ಯೆಯ ರಾಮಮಂ ದಿರಕ್ಕೆ ಸ್ಥಳಾಂತರಿಸುವ ಕೆಲಸ ಶುಕ್ರ ವಾರದಿಂದ ಪ್ರಾರಂಭವಾಯಿತು. ಕಲ್ಲುಗಳನ್ನು ಕಾರ್ಯಾಗಾರದಿಂದ ದೇವಾಲಯದ ಆವರಣಕ್ಕೆ ಸ್ಥಳಾಂ ತರಿಸಲಾಗುತ್ತಿದ್ದು, ದೇವಾಲಯದ ಆವರಣವನ್ನು ಪ್ರವೇಶಿಸುವ ಮುನ್ನ ಈ ಕಂಬಗಳಿಗೆ ಮೊದಲು ಅರ್ಚ ಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು (ಎಡಿಎ) ಸೆಪ್ಟೆಂ ಬರ್‍ನಲ್ಲಿ ರಾಮ ದೇವಾಲಯದ ವಿನ್ಯಾಸ ವನ್ನು ಅನುಮೋದಿಸಿದ್ದು, ಆರು ತಿಂಗ ಳೊಳಗೆ ಮಂದಿರವನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದೆ.