ಬರೀ 18 ತಿಂಗಳಲ್ಲೇ ಬಡಾವಣೆ ನಿರ್ಮಾಣ
ಮೈಸೂರು

ಬರೀ 18 ತಿಂಗಳಲ್ಲೇ ಬಡಾವಣೆ ನಿರ್ಮಾಣ

November 13, 2020

ಮೈಸೂರು, ನ.12 (ಆರ್‍ಕೆಬಿ)- ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ಭೂ ಮಾಲೀ ಕರ ಜಂಟಿ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿ ಯೋಜನೆ ಕಾರ್ಯಗತಗೊಳಿಸಲು ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.

ಮುಡಾ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜಂಟಿ ಸಹಭಾಗಿತ್ವ ದಲ್ಲಿ ಬಡಾವಣೆ ಅಭಿವೃದ್ಧಿ ಯೋಜನೆಯ ವಿವರ ಗಳನ್ನು ನೀಡಿದರು. ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಯೋಜನೆಗಳನ್ನು ಸಂಬಂಧ ಪಟ್ಟ ಎಲ್ಲಾ ಭೂ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡ 18 ತಿಂಗಳೊಳಗೆ ಪೂರ್ಣಗೊಳಿಸ ಲಾಗುವುದು. ಪರಸ್ಪರ ಒಪ್ಪಿಗೆ ಪತ್ರ ನೀಡಿ ಒಪ್ಪಂದದ ಕರಾರಿಗೆ ಒಳಪಡುವ ಭೂ ಮಾಲೀಕರಿಗೆ ಮುಂಗಡ ವಾಗಿ ಪ್ರತಿ ಎಕರೆಗೆ 10 ಲಕ್ಷ ರೂ. ನೀಡಲಾಗುವುದು ಎಂದರು. ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿಪಡಿ ಸಲು ಅಧಿಸೂಚಿಸಿದ ಜಮೀನುಗಳಿಗೆ ಪರಿಹಾರವಾಗಿ, ಯೋಜಿತ ಬಡಾವಣೆ ರಚಿಸಿದ ಬಾಬ್ತು ಲಭ್ಯವಾಗುವ ಒಟ್ಟು ನಿವೇಶನದಲ್ಲಿ ಶೇ.50:50 ಅನುಪಾತದಲ್ಲಿ ಕರ್ನಾ ಟಕ ನಗರಾಭಿವೃದ್ಧಿ ಪ್ರಾಧಿಕಾರ (ಸ್ವಇಚ್ಛೆಯಿಂದ ಭೂಮಿ ನೀಡಿದವರು ಪರಿಹಾರವಾಗಿ ನಿವೇಶನ ನೀಡುವುದು) ನಿಯಮ-2009 ಹಾಗೂ 2015ರ ತಿದ್ದುಪಡಿ ನಿಯಮ ಗಳನ್ವಯ ನಿವೇಶನದ ರೂಪದಲ್ಲಿ ಸಂಬಂಧಪಟ್ಟ ಭೂ ಮಾಲೀಕರಿಗೆ ನಿವೇಶನ ನೀಡಲಾಗುವುದು. ಉದ್ದೇಶಿತ ಯೋಜನೆಯ ಪ್ರಕಾರ ಲಭ್ಯವಾಗುವ ವಸತಿ ವಲಯದ ಶೇ.50:50 ಅನುಪಾತದಡಿ ಪ್ರತಿ ಎಕರೆಗೆ 30ಘಿ40 ಅಳತೆಯ ಅಂದಾಜು 9 ನಿವೇಶನಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಪ್ರತಿ ಅಡಿಗೆ ಮೂಲ ದರ ನಿಗದಿ ಮಾಡಿದ ನಂತರ ನೀಡಲಾಗುವ ಅಭಿವೃದ್ಧಿಪಡಿಸಿದ ಒಟ್ಟು ವಿಸ್ತೀರ್ಣದಲ್ಲಿ ರೂ.10 ಲಕ್ಷ ಮೌಲ್ಯದ ನಿವೇಶನವನ್ನು ಪ್ರಾಧಿಕಾರಕ್ಕೆ ಬಿಟ್ಟು ಕೊಡಬಹುದು. ಅಥವಾ ನಿವೇಶನಕ್ಕೆ ಪ್ರಾಧಿಕಾರವು ನಿಗದಿಪಡಿಸಿರುವ ಮೌಲ್ಯದ ಎದುರಾಗಿ 10 ಲಕ್ಷ ರೂ. ಹಣವನ್ನು ಪ್ರಾಧಿಕಾರಕ್ಕೆ ಪಾವತಿಸಿ ಭೂ ಮಾಲೀಕರ ಪಾಲಿಗೆ ಲಭ್ಯವಾಗುವ ನಿವೇಶನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು. ಒಂದಕ್ಕಿಂದ ಹೆಚ್ಚು ಮಂದಿ ವ್ಯಕ್ತಿಗಳು ಭೂ ಮಾಲೀಕತ್ವವನ್ನು ಹೊಂದಿದ್ದಲ್ಲಿ, ಅವರುಗಳ ಹಂಚಿಕೆ ಮಾಡುವಂತಹ ನಿವೇಶನ ಗಳ ಮೇಲೆ ಜಂಟಿಯಾಗಿ ಅನುಪಾತಿಕ ಆಧಾರದ ಮೇಲೆ ಹಕ್ಕನ್ನು ನೀಡಲಾಗುವುದು ಎಂದರು. ಭೂ ಮಾಲೀಕರಿಗೆ ಮೂಲೆ ಅಥವಾ ವಾಣಿಜ್ಯ ನಿವೇಶನಗಳನ್ನು ಹಂಚಿಕೆ ಮಾಡುವುದಿಲ್ಲ. ಹೀಗೆ ಪಡೆದವರು ಅವರ ನಿವೇಶನಗಳನ್ನು ಇತರರಿಗೆ ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಭೂ ಮಾಲೀಕರ ಪಾಲಿನನ್ವಯ ನಿವೇಶನ ಹಂಚಿಕೆಯು 50ಘಿ80, 40ಘಿ60 ಮತ್ತು 30ಘಿ40 ಅಡಿ ಅನ್ವಯ ನೀಡಲಾಗುವುದು. ಮೂಲೆ ನಿವೇಶನ ಮತ್ತು 20ಘಿ30 ಅಡಿ ಅಳತೆಯ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದರು.

700 ಎಕರೆ ಭೂಮಿ ಬಂದಿದೆ: ಈಗಾಗಲೇ ಉದ್ಬೂರು, ಕೆಲ್ಲಹಳ್ಳಿ, ತಳೂರು, ದೊಡ್ಡಕಾಟೂರು, ದಾರೀಪುರ, ಮುಳ್ಳೂರು ಮತ್ತು ಬೊಮ್ಮನಹಳ್ಳಿ ಅಕ್ಕಪಕ್ಕದ ಗ್ರಾಮಗಳು, ಕಮರಳ್ಳಿ, ಸೀಗೆಹಳ್ಳಿ ಇನ್ನಿತರೆ ಕಡೆಗÀಳಲ್ಲಿ ರೈತರೊಂದಿಗೆ ನೇರ ಸಂಪರ್ಕ ಮತ್ತು ಸಂವಾದ ನಡೆಸಿದ್ದು, ಬಹುತೇಕ ರೈತರು ಪ್ರಾಧಿಕಾರದೊಂದಿಗೆ ಜಂಟಿ ಸಹಭಾಗಿತ್ವದಡಿ ಭೂಮಿ ನೀಡಲು ನಿರ್ಧರಿಸಿದ್ದಾರೆ. ಭೂಮಿಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದ ಸಾಕಷ್ಟು ರೈತರು ಸಹ ಈಗ ನಮ್ಮೊಂದಿಗೆ ಒಡಂಬಡಿಕೆಗೆ ಬರುತ್ತಿದ್ದಾರೆ. ಈಗಾಗಲೇ 700 ಎಕರೆಯಷ್ಟು ಭೂಮಿ ಬಂದಿದೆ. ಅವುಗಳನ್ನು ಗುಂಪುಗೂಡಿಸುವ ಕೆಲಸ ನಡೆದಿದೆ ಎಂದರು. ಐದು ವರ್ಷದಿಂದ ಸರ್ಕಾರ ನೋಟಿಫಿಕೇಷನ್ ಅಡಿಯಲ್ಲಿ ಆಗುತ್ತಿತ್ತು. ಈಗ ನಾವು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡು ಭೂಮಿ ಪಡೆಯುವ ಪ್ರಯತ್ನ ನಡೆಸಿದ್ದೇವೆ. ಇದರಲ್ಲಿ ಯಶಸ್ವಿಯೂ ಆಗುತ್ತಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಇದ್ದರು.

 

 

Translate »