ಕೊರೊನಾ ನೆಪದಲ್ಲಿ ಅಭಿವೃದ್ಧಿ ಸ್ಥಗಿತ: ಈಗ ಸರ್ಕಾರದಿಂದ ಬರೀ ಲೂಟಿ… ಲೂಟಿ…
ಮೈಸೂರು

ಕೊರೊನಾ ನೆಪದಲ್ಲಿ ಅಭಿವೃದ್ಧಿ ಸ್ಥಗಿತ: ಈಗ ಸರ್ಕಾರದಿಂದ ಬರೀ ಲೂಟಿ… ಲೂಟಿ…

November 13, 2020

ಹುಣಸೂರು,ನ.12(ಹೆಚ್‍ಎಸ್‍ಎಂ)-ರಾಜ್ಯ ಸರ್ಕಾರ ಕೊರೊನಾ ನೆಪ ದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತ ಗೊಳಿಸಿ, ಬರೀ ಲೂಟಿ ಯಲ್ಲಿ ನಿರತವಾಗಿದೆ. ಇದರ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಮನವಿ ಮಾಡಿದರೆ, ದಪ್ಪ ಚರ್ಮದ ಈ ಕಿವುಡು ಸರ್ಕಾರ ಸತ್ತಂತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು. ಖಾಸಗಿ ಕಾರ್ಯಕ್ರಮಕ್ಕಾಗಿ ಗುರುವಾರ ಹುಣಸೂರಿಗೆ ಆಗಮಿಸಿದ್ದ ಅವರು, ಪ್ರವಾಸಿ ಮಂದಿರ ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅಧಿವೇಶನ ಕರೆಯುವ ಬಗ್ಗೆ ಸಾಕಷ್ಟು ಬಾರಿ ಪತ್ರ ಬರೆದರೂ, ಬಹಿರಂಗ ಹೇಳಿಕೆ ನೀಡಿದರೂ, ಈ ಸರ್ಕಾರ ಸ್ಪಂದಿಸು ತ್ತಿಲ್ಲ. ಇದರ ವಿರುದ್ಧ ಪ್ರತಿಭಟನೆ ಮಾಡಲು ಮುಂದಾ ದರೆ ಕೇಸ್ ಹಾಕುವ ಮೂಲಕ ಅದನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಕಳೆದ ವರ್ಷ ಅತಿವೃಷ್ಟಿ ಯಿಂದ ಲಕ್ಷಾಂತರ ಕುಟುಂಬಗಳು ಸೂರು ಕಳೆದು ಕೊಂಡಿವೆ. ಅಪಾರ ಪ್ರಮಾಣದ
ಬೆಳೆ ನಷ್ಟವಾಗಿದೆ. ಬಹುತೇಕರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ವರ್ಷವೂ ಸಹ ಅದೇ ಪರಿಸ್ಥಿತಿ ಇದ್ದರೂ, ಸರ್ಕಾರ ಪರಿಹಾರ ನೀಡುವ ಗೋಜಿಗೇ ಹೋಗಿಲ್ಲ. ಅಲ್ಲದೇ ಕೇಂದ್ರ ಸರ್ಕಾರವೂ ಕೂಡ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು. ಕಳೆದ ಬಾರಿ ಆಂಧ್ರದಲ್ಲಿ ತಂಬಾಕು ಬೆಲೆ ಕುಸಿದಾಗ ಅಲ್ಲಿನ ಸರ್ಕಾರ ನೇರವಾಗಿ ತಂಬಾಕು ಖರೀದಿಸಿ ಬೆಳೆಗಾರರ ಸಹಾಯಕ್ಕೆ ನಿಂತಂತೆ ನಮ್ಮ ರಾಜ್ಯದಲ್ಲಿಯೂ ತಂಬಾಕು ಖರೀದಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ ಅವರು, ಈ ವಿಚಾರದಲ್ಲಿ ಇಲ್ಲಿನ ಸಂಸದರು ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದರು. ಈ ಸರ್ಕಾರ ಅವ್ಯವಹಾರದಲ್ಲಿ ಮುಳುಗಿದ್ದು, ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಹಣದ ಆಮಿಷವೊಡ್ಡಿ ಆಪರೇಷನ್ ಕಮಲ ನಡೆಸಿ ಚುನಾವಣೆ ಗೆಲ್ಲುವುದರಲ್ಲಿ ಬಿಜೆಪಿಯವರು ಸಿದ್ಧಹಸ್ತರೇ ಹೊರತು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಅವರಿಗಿಲ್ಲ. ನನ್ನ ಅವಧಿಯಲ್ಲಿ ಬಡವರಿಗೆ ಅನುಕೂಲವಾಗುವಂತೆ ಸ್ಥಾಪಿಸಿದ ಇಂದಿರಾ ಕ್ಯಾಂಟೀನ್ ಮುಚ್ಚಲು ಈ ಸರ್ಕಾರ ಹವಣಿಸುತ್ತಿದೆ. ವಿದ್ಯಾಸಿರಿ, ಶಾದಿಭಾಗ್ಯ ಮತ್ತಿತರ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Translate »