ಮೈಸೂರು, ನ.12(ಪಿಎಂ)- ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ ರಾದ ಮೈಸೂರು ಮೂಲದ ನಾಲ್ವರು ಮಹನೀಯರನ್ನು ಕರ್ನಾಟಕ ರಾಜ್ಯ ಹಿಂದು ಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕರ್ನಾಟಕ ಘಟಕದ ಜಂಟಿ ಆಶ್ರಯದಲ್ಲಿ ಗುರುವಾರ ಸನ್ಮಾನಿಸಲಾಯಿತು.
ಮೈಸೂರಿನ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ದಂಡಿ ಯಾತ್ರೆ ಸ್ಮಾರಕದ ಆವರಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ. ಪುಟ್ಟಸಿದ್ದಯ್ಯ, ಡಾ.ಎ.ಎಸ್.ಚಂದ್ರಶೇಖರ್, ಎನ್.ಎಸ್.ಜನಾರ್ಧನಮೂರ್ತಿ, ಸಿ.ಮಹೇ ಶ್ವರನ್ ಅವರನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಪಿ.ಮಹೇಶ್ ಚಂದ್ರಗುರು ಸನ್ಮಾನಿಸಿದರು.
ಇದಕ್ಕೂ ಮುನ್ನ ಉದ್ಯಾನವನದ ದಂಡಿ ಯಾತ್ರೆ ಸ್ಮಾರಕದ ಗಾಂಧಿ ಪ್ರತಿಮೆಗೆ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಪ್ರೊ. ಬಿ.ಪಿ.ಮಹೇಶ್ ಚಂದ್ರಗುರು, ಶಸ್ತ್ರರಹಿತ ಹೋರಾಟದಿಂದಲೇ ಗಾಂಧಿ ದೇಶವನ್ನು ದಾಸ್ಯದಿಂದ ಬಿಡುಗಡೆ ಮಾಡಿದರು. ಜಗ ತ್ತಿನ ಇತಿಹಾಸದಲ್ಲಿ ರಕ್ತಪಾತವಿಲ್ಲದೆ ಯಾವು ದಾದರೂ ಒಂದು ದೇಶಕ್ಕೆ ಸ್ವಾತಂತ್ರ್ಯ ಲಭಿ ಸಿದ್ದರೆ ಅದು ಭಾರತಕ್ಕೆ ಮಾತ್ರ. ಅದರಲ್ಲೂ ಗಾಂಧಿ ನೇತೃತ್ವದಲ್ಲಿ ಎಂಬುದನ್ನು ನಾವು ಮರೆಯಬಾರದು. `ಗಾಂಧಿಯ ಲೇಖನ ಶಕ್ತಿ ಹಾಗೂ ಇಚ್ಛಾಸಕ್ತಿ ಬ್ರಿಟಿಷರ ಬಂದೂಕು ಶಕ್ತಿಯನ್ನು ಸೋಲಿಸಿತು’ ಎಂದು ಬ್ರಿಟಿಷ್ ಪ್ರಧಾನಿಯಾಗಿದ್ದ ವಿನ್‍ಸ್ಟನ್ ಚರ್ಚಿಲ್ ಹೇಳಿರುವುದು ಗಾಂಧಿಯ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ ಎಂದು ಸ್ಮರಿಸಿದರು.
2007ರಲ್ಲಿ ವಿಶ್ವಸಂಸ್ಥೆ ಗಾಂಧಿಯವರ ಜನ್ಮಶತಾಬ್ಧಿಯನ್ನು `ವಿಶ್ವ ಅಹಿಂಸಾ ದಿನ’ವಾಗಿ ಆಚರಿಸಿತು. ಆದರೆ ಇಂದಿಗೂ ಭಯೋತ್ಪಾದನೆ, ಕೋಮುವಾದ ಜೀವಂತ ವಾಗಿ ಸಮಾಜ ಸ್ವಾಸ್ಥ್ಯ ಕೆಡಿಸುತ್ತಿವೆ. ದೇಶ ದಲ್ಲಿ ಶಾಂತಿ, ಸಾಮರಸ್ಯ ಹಾಗೂ ಡಾ. ಅಂಬೇಡ್ಕರ್ ಬರೆದ ಸಂವಿಧಾನ ಉಳಿಸಿ ಕೊಳ್ಳಬೇಕಾದರೆ ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಚಿಂತನೆಗಳಡಿಯಲ್ಲಿ ಭಾರತ ಮುನ್ನಡೆಯಬೇಕು. ಇದರ ಹೊರತು ವಿನಾಶದ ಸಂಕೇತವಾದ ಗೋಡ್ಸೆ ಚಿಂತನೆ ಭಾರತಕ್ಕೆ ಬೇಕಿಲ್ಲ ಎಂದು ಪ್ರತಿಪಾದಿಸಿದರು.
ಇಂದು ನಮ್ಮ ಸಂವಿಧಾನಾತ್ಮಕ ಮೌಲ್ಯ ಗಳಿಗೆ ಅಪಾಯ ಬಂದಿದೆ. ಭಾರತೀಯ ಪ್ರಜಾಪ್ರಭುತ್ವ ಬಹುದೊಡ್ಡ ಗಂಡಾಂತರಕ್ಕೆ ಒಳಗಾಗಿದೆ. ಮಾರುಕಟ್ಟೆ ಶಕ್ತಿ ಹಾಗೂ ಕೋಮುವಾದಿಗಳಿಂದ ಸಂವಿಧಾನ ಹಾಗೂ ದೇಶದ ಸ್ವಾತಂತ್ರ್ಯ ಉಳಿಸಿ ರಾಷ್ಟ್ರ ಕಟ್ಟಿ, ಶಾಂತಿ ನೆಲೆಸಲು ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮೈಸೂರಿನ ಈ ಸುಬ್ಬರಾಯನಕೆರೆ ಹಾಗೂ ರಾಮಸ್ವಾಮಿ ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಯಲ್ಲಿ ಶ್ರೇಷ್ಠ ಇತಿಹಾಸವಿದೆ. ಆದರೆ ಇತ್ತೀಚೆಗೆ ಕಿಡಿಗೇಡಿಗಳು ಇಲ್ಲಿನ ಗಾಂಧಿ ಪ್ರತಿಮೆ ವಿರೂಪಗೊಳಿಸಿದ್ದರು. ಇದು ಖಂಡನೀಯ ಎಂದು ಕಿಡಿಕಾರಿದರು.
ರಾಜ್ಯೋತ್ಸವ ಪುರಸ್ಕøತರ ಸನ್ಮಾನದ ವೇಳೆ ಪ್ರೊ.ಮಹೇಶ್ ಚಂದ್ರಗುರು ಹಾಗೂ ಲಕ್ಷ್ಮೀಪುರಂ ಠಾಣೆ ಇನ್ಸ್‍ಪೆಕ್ಟರ್ ಆರ್. ವೆಂಕಟೇಶ್ ಅವರನ್ನೂ ಸನ್ಮಾನಿಸಲಾ ಯಿತು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಮುಖಂಡ ರಾದ ಮೈಸೂರು ಬಸವಣ್ಣ, ದೀಪಕ್ ಪುಟ್ಟಸ್ವಾಮಿ ಮತ್ತಿತರರು ಹಾಜರಿದ್ದರು.