ಮೂರು ಗ್ರಾಮಗಳ ವ್ಯಾಪ್ತಿ ಜಂಟಿ ಅಭಿವೃದ್ಧಿಯಡಿ ಬಡಾವಣೆ ನಿರ್ಮಾಣ
ಮೈಸೂರು

ಮೂರು ಗ್ರಾಮಗಳ ವ್ಯಾಪ್ತಿ ಜಂಟಿ ಅಭಿವೃದ್ಧಿಯಡಿ ಬಡಾವಣೆ ನಿರ್ಮಾಣ

April 1, 2022

ಮೈಸೂರು: ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿರುವ ಸುಮಾರು 80,000 ಫಲಾನು ಭವಿಗಳಿಗೆ ನಿವೇಶನ ಕಲ್ಪಿಸಲು ಮೈಸೂರು ಹೊರವಲಯದ 3 ಗ್ರಾಮಗಳ ವ್ಯಾಪ್ತಿಯಲ್ಲಿ ಜಂಟಿ ಅಭಿವೃದ್ಧಿಯಡಿ ಬಡಾವಣೆ ನಿರ್ಮಿಸಲು ಮುಡಾ ಮುಂದಾಗಿದೆ. ಭೂ ಮಾಲೀಕರ ಸಹ ಭಾಗಿತ್ವದೊಂದಿಗೆ 50:50ರ ಅನುಪಾತದಲ್ಲಿ ಜಂಟಿ ಅಭಿವೃದ್ಧಿ ಯೋಜನೆಗೆ ಚಿಂತನೆ ನಡೆಸಲಾಗಿದ್ದು, ಕಾರ್ಯ ಸಾಧ್ಯತಾ ವರದಿ, ಡಿಪಿಆರ್ ಹಾಗೂ ಮೂಲ ಸೌಲಭ್ಯ
ಕಲ್ಪಿಸುವುದಕ್ಕಾಗಿ ಬಜೆಟ್‍ನಲ್ಲಿ 6000 ಲಕ್ಷ ರೂ.ಗಳನ್ನು ಮೀಸಲಿ ರಿಸಿದೆ. ಮೈಸೂರು ತಾಲೂಕು ಉದ್ಬೂರು-ದಾರಿಪುರ, ಬೊಮ್ಮೇನ ಹಳ್ಳಿ ಮತ್ತು ವಾಜಮಂಗಲ ಬಳಿ 437 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಿ 7,676 ನಿವೇಶನ ರಚಿಸಲು 26,200 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಗುಂಪು ಮನೆ ಯೋಜನೆ: ಮುಡಾದಿಂದ ಅಭಿವೃದ್ಧಿಗೊಂಡಿ ರುವ ವಿಜಯನಗರ, ದಟ್ಟಗಳ್ಳಿ ಯಲ್ಲಿ ಗುಂಪು ವಸತಿ ಯೋಜನೆ ಗಾಗಿ ಕಾಯ್ದಿರಿಸಿರುವ ಜಾಗಗಳಲ್ಲಿ 952 ಮನೆ ನಿರ್ಮಿಸಲು ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 29,800 ಲಕ್ಷ ರೂ. ವೆಚ್ಚವಾಗ ಬಹುದೆಂದು ಅಂದಾಜಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಮನೆ ಹಂಚಿಕೆ ಮೂಲಕ ಸಂದಾಯವಾಗಬಹುದಾದ 55,000 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಿ ಪ್ರಾಧಿಕಾರವು ಪ್ರಸಕ್ತ ಸಾಲಿನಲ್ಲಿ ಒಟ್ಟು 10,000 ಲಕ್ಷ ರೂ.ಗಳನ್ನು ಇದಕ್ಕಾಗಿ ಮೀಸಲಿರಿಸಲಾಗಿದೆ.

ರಸ್ತೆಗಳ ಅಭಿವೃದ್ಧಿ: ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ನ್ಯೂ ಕಾಂತರಾಜ ಅರಸ್ ರಸ್ತೆ, ಅಕ್ಕಮಹಾದೇವಿ ರಸ್ತೆ ಹಾಗೂ ಆರ್‍ಟಿ ನಗರದ ಪ್ರಮುಖ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಆಯ-ವ್ಯಯ ದಲ್ಲಿ ಅನುದಾನ ಮೀಸಲಿರಿ ಸಿದೆ. 20 ಮೀ. ಅಗಲದ ನ್ಯೂ ಕಾಂತರಾಜ ಅರಸ್ ರಸ್ತೆಯು ರಿಂಗ್ ರಸ್ತೆಯಿಂದ ಬಡಗಲ ಹುಂಡಿ, ಕೆಹೆಚ್‍ಬಿ ಕಾಲೋನಿ, ಬೆಮೆಲ್, ರೈಲ್ವೆ, ನ್ಯಾಯಾಂಗ ಬಡಾವಣೆಗಳ ಮೂಲಕ ಮರಟಿ ಕ್ಯಾತನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೋಗಾದಿ ರಸ್ತೆಗೆ ಸಮಾನಾಂತರ ರಸ್ತೆಯಾಗಿದೆ. ಪ್ರಸ್ತುತ ರಿಂಗ್ ರಸ್ತೆಯಿಂದ ಕ್ರೈಸ್ಟ್ ಪಬ್ಲಿಕ್ ಶಾಲೆವರೆಗೆ ಸುಮಾರು 1,020 ಮೀ.

ಅಭಿವೃದ್ಧಿಪಡಿಸಬೇಕಾಗಿದ್ದು, ಆ ಪೈಕಿ 600 ಮೀ. ಅಭಿವೃದ್ಧಿಗೆ ಮಾತ್ರ ಜಾಗ ಲಭ್ಯವಿದೆ. ಉಳಿದ 24 ಮೀ. ರಸ್ತೆಗೆ ಅಗತ್ಯವಾದ ಜಾಗವನ್ನು ವಶಪಡಿಸಿಕೊಳ್ಳಲು ಮುಡಾ ಮುಂದಾಗಿದೆ. ಅದಕ್ಕಾಗಿ ಟೌನ್ ಪ್ಲಾನಿಂಗ್ ಸ್ಕೀಂ ಮೂಲಕ ಯೋಜನೆಯನ್ನು ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಲು ಆಯ-ವ್ಯಯದಲ್ಲಿ ಪ್ರಸ್ತಾಪಿಸ ಲಾಗಿದೆ. ಇದೇ ರೀತಿ ವಿದ್ಯಾರಣ್ಯಪುರಂನಿಂದ ಮಂಡಕಳ್ಳಿ ಗ್ರಾಮ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ ಅಕ್ಕಮಹಾದೇವಿ ರಸ್ತೆಯು ಹಾಲಿ 18 ಮೀ. ಅಗಲವಿದ್ದು, ಇದರ ವಿಸ್ತರಣೆಗೆ 500 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ ಹಾಗೂ 30 ಮೀ. ಅಗಲವಿರುವ ಆರ್‍ಟಿ ನಗರ ಮುಖ್ಯ ರಸ್ತೆಯನ್ನು ರಿಂಗ್ ರಸ್ತೆಯಿಂದ ಮೂಗನಹುಂಡಿ, ಕೆ.ಸಾಲುಂಡಿ, ನಂಜರಾಜಯ್ಯನಹುಂಡಿ ಮತ್ತು ರಾಮನಹುಂಡಿ ಗ್ರಾಮಗಳವರೆಗೆ ಅಭಿವೃದ್ಧಿಪಡಿಸುವ ಅಗತ್ಯವಿದ್ದು, ಅದಕ್ಕಾಗಿ ಆಯ-ವ್ಯಯದಲ್ಲಿ ಅನುದಾನ ಮೀಸಲಿರಿಸಲಾಗಿದೆ.

ಯುಆರ್‍ಹೆಚ್ ಯೋಜನೆ: ಮೈಸೂರು ನಗರದಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚು ಮಂದಿ ವಲಸೆ ಕಾರ್ಮಿಕರು ಹಾಗೂ ಅಸಂಘ ಟಿತ ಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದ ಅವರಿಗೆ ಕೇಂದ್ರದ ಅನುದಾನದಡಿ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಬೆಲವತ್ತ ಗ್ರಾಮದ ಬಳಿ ಯುಆರ್ ಹೆಚ್‍ಎಸ್ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ 500ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಅದೇ ರೀತಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿರುವ ಬಡಾವಣೆಗಳ ಖಾಲಿ ಜಾಗದಲ್ಲಿ ವಿಶೇಷ ಗುಂಪು ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು 500 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಎಲ್‍ಇಡಿ ಬಲ್ಬ್ ಅಳವಡಿಕೆ: ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ವಸಂತನಗರ, ಲಾಲ್‍ಬಹದ್ದೂರ್ ಶಾಸ್ತ್ರಿ ನಗರ, ಶಾಂತವೇರಿ ಗೋಪಾಲ ಗೌಡನಗರ, ವಿಜಯನಗರ 4ನೇ ಹಂತ ಬಡಾ ವಣೆಗಳಲ್ಲಿ ಎಲ್‍ಇಡಿ ಬಲ್ಬ್ ಅಳವಡಿ ಸಲು ಸ್ಥಳೀಯ ಗ್ರಾಮ ಪಂಚಾಯ್ತಿಗಳ ಸಹಭಾಗಿತ್ವದಲ್ಲಿ ಉದ್ದೇಶಿ ಸಲಾಗಿದ್ದು, ಅದಕ್ಕಾಗಿ 5 ಕೋಟಿ ರೂ.ಗಳ ಪ್ರೀಮಿಯಂ ಅನ್ನು ಕಾಯ್ದಿರಿಸಲಾಗಿದೆ. ಕಪಿಲಾ ನದಿಗೆ ಒಳಚರಂಡಿ ನೀರು ಹರಿದು ಹೋಗುತ್ತಿರುವುದನ್ನು ತಪ್ಪಿ ಸಲು ನಂಜನಗೂಡು ಪಟ್ಟಣ ವ್ಯಾಪ್ತಿ ಯಲ್ಲಿ ಯುಜಿಡಿ ಟ್ರಂಕ್ ಲೈನ್ ಮತ್ತು ಒಳಚರಂಡಿ ನೀರಿನ ಸಾಗಾಣಿಕೆ ಪೈಪ್ ಗಳನ್ನು ಅಳವಡಿಸಿ ಎಸ್‍ಟಿಪಿ ನಿರ್ಮಿಸಲು 11.50 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ.

ವಸತಿ ಸಮುಚ್ಛಯ ನಿರ್ಮಾಣ: ಮುಡಾದಿಂದ ಸ್ವಾಧೀನಪಡಿಸಿ ಕೊಂಡಿರುವ ವಿಜಯಶ್ರೀಪುರ ವ್ಯಾಪ್ತಿಯ 16 ಎಕರೆ ಹಾಗೂ ಲಲಿತಾದ್ರಿಪುರ ಗ್ರಾಮದ 26 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಸಂಕೀರ್ಣ ಮತ್ತು ವಸತಿ ಸಮುಚ್ಛಯಗಳನ್ನು ನಿರ್ಮಿಸಲುದ್ದೇಶಿಸಲಾಗಿದ್ದು, ಈ ಸಂಬಂಧ ಡಿಪಿಆರ್ ತಯಾರಿಸಲು 1 ಕೋಟಿ ಮೀಸಲಿರಿಸಲಾಗಿದೆ.

ಟಾಸ್ಕ್‍ಫೋರ್ಸ್ ರಚನೆ: ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದಲ್ಲಿ ವಿಶೇಷ ಟಾಸ್ಕ್‍ಫೋರ್ಸ್ ವಿಭಾಗವನ್ನು ತೆರೆಯಲು ಉದ್ದೇಶಿಸಲಾಗಿದ್ದು, ಡಿವೈಎಸ್‍ಪಿ ದರ್ಜೆ ಅಧಿಕಾರಿಯ ನೇತೃತ್ವ ದಲ್ಲಿ ಇಬ್ಬರು ಪೊಲೀಸ್ ಇನ್ಸ್‍ಪೆಕ್ಟರ್‍ಗಳು, ಇಬ್ಬರು ಸಬ್ ಇನ್ಸ್‍ಪೆಕ್ಟರ್‍ಗಳು, ನಾಲ್ವರು ಹೆಡ್ ಕಾನ್‍ಸ್ಟೇಬಲ್‍ಗಳು ಹಾಗೂ 10 ಮಂದಿ ಕಾನ್‍ಸ್ಟೇಬಲ್‍ಗಳನ್ನೊಳಗೊಂಡ ಟಾಸ್ಕ್‍ಫೋರ್ಸ್ ರಚಿಸಲು 50 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ ಹಾಗೂ ಪ್ರಾಧಿಕಾರದ ಆಸ್ತಿಯನ್ನು ಅನ್ಯರು ಕಬಳಿಸುತ್ತಿರುವುದನ್ನು ತಡೆ ಯಲು ವಿಶೇಷ ತಂಡ ರಚಿಸಲು ಉದ್ದೇಶಿಸಲಾಗಿದೆ.

Translate »