ಮೈಸೂರು, ಜು.15(ಎಂಟಿವೈ)- ಮೈಸೂರಲ್ಲಿ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, ಬುಧವಾರ ಮಂಡಿಮೊಹಲ್ಲಾದ 76 ವರ್ಷದ ವೈದ್ಯ, ಯಾದವಗಿರಿಯ 14 ವರ್ಷದ ಬಾಲಕ, ಮಹಿಳೆ ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಅಲ್ಲದೆ ಹೊಸದಾಗಿ 99 ಮಂದಿ ಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1190ಕ್ಕೆ ಏರಿಕೆಯಾಗುವ ಮೂಲಕ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.
ಕಳೆದ ಎರಡು ದಿನದಿಂದ 100ಕ್ಕಿಂತ ಹೆಚ್ಚು ಹೊಸ ದಾಗಿ ಸೋಂಕಿತರು ಪತ್ತೆಯಾಗುತ್ತಲಿದ್ದು, ಇಂದು 99 ಹೊಸ ಪ್ರಕರಣ ಪತ್ತೆಯಾಗಿದೆ. ಅವರಲ್ಲಿ 26 ಮಂದಿಗೆ ಇತರೆ ಸೋಂಕಿತರ ಸಂಪರ್ಕದಿಂದ ಜಾಡ್ಯ ವ್ಯಾಪಿಸಿ ದ್ದರೆ, 29 ಮಂದಿಗೆ ಐಎಲ್‍ಐ ಪ್ರಕರಣವಾಗಿದೆ. 36 ಮಂದಿ ಟ್ರಾವೆಲ್ ಹಿಸ್ಟರಿ ಹೊಂದಿದ್ದು, 8 ಮಂದಿ ಲಕ್ಷಣ ರಹಿತರಾಗಿದ್ದಾರೆ. ಬುಧವಾರ 5 ಮಂದಿ ಸೋಂಕಿತರು ಗುಣ ಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ದ್ದಾರೆ. ಆ ಮೂಲಕ ಗುಣಮುಖರಾದವರ ಸಂಖ್ಯೆ 503 ಆಗಿದೆ. ಪ್ರಸ್ತುತ 640 ಸಕ್ರಿಯ ಪ್ರಕರಣಗಳಿದ್ದು, ಅವು ಗಳಲ್ಲಿ 254 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 65 ಮಂದಿ ಐಸೋಲೇಟೆಡ್ ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್‍ನಲ್ಲಿ, 49 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 53 ಮಂದಿ ಖಾಸಗಿ ಆಸ್ಪತ್ರೆ, 219 ಮಂದಿ ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ವಾರಂಟೇನ್‍ನಲ್ಲಿ 2100 ಮಂದಿ: ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಮೈಸೂರಿಗೆ ವಾಪಸ್ಸಾಗಿರುವ 2100 ಮಂದಿ 14 ದಿನಗಳ ಹೋಂ ಕ್ವಾರಂಟೇನ್‍ನಲ್ಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇದುವರೆಗೂ 16485 ಮಂದಿ ಮೇಲೆ ನಿಗಾ ಇಡಲಾಗಿತ್ತು. ಅವರಲ್ಲಿ 13745 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಇದುವರೆಗೆ 29420 ಮಂದಿ ಕಫ, ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ 28171 ಮಂದಿಯ ಸ್ಯಾಂಪಲ್ ನೆಗೆಟಿವ್ ಬಂದಿದೆ. ಇಂದು ಸೋಂಕಿತರು ಪತ್ತೆಯಾದ ಮೈಸೂರಿನ ಸಾತಗಳ್ಳಿ ಎ ಝೋನ್, ಸುಭಾಷ್‍ನಗರ 3ನೇ ಕ್ರಾಸ್, ರಾಜೀವ್‍ನಗರ 2ನೇ ಹಂತ, ಸರಸ್ವತಿಪುರಂ ಎ ಬ್ಲಾಕ್, ಶಾಂತಿನಗರ 12ನೇ ಕ್ರಾಸ್, ರಾಮಾನುಜ ರಸ್ತೆ ಈಸ್ಟ್ ಕ್ರಾಸ್, ಬಸವೇಶ್ವರನಗರ 1ನೇ ಹಂತ 2ನೇ ಕ್ರಾಸ್, ಕುಂಬಾರಕೊಪ್ಪಲು 1ನೇ ಕ್ರಾಸ್, ಎನ್.ಆರ್. ಮೊಹಲ್ಲಾ ಸತ್ತಾರ್‍ನಗರ ಎಜೆ ಬ್ಲಾಕ್, ಜನತಾನಗರ 10ನೇ ಕ್ರಾಸ್, ಉದಯಗಿರಿ ಕೆಹೆಚ್‍ಬಿ ಕಾಲೋನಿ ಇಡಬ್ಲ್ಯೂಎಸ್, ಅಶೋಕ ರಸ್ತೆ 22ನೇ ಡಿ ಕ್ರಾಸ್, ಕೈಲಾಸಪುರಂ 4ನೇ ಕ್ರಾಸ್, ಬನ್ನಿಮಂಟಪ ಸಿವಿ ರಸ್ತೆ 2ನೇ ಕ್ರಾಸ್, ತಿಲಕ್‍ನಗರ 3ನೇ ಕ್ರಾಸ್, ಮೇಟಗಳ್ಳಿಯ ಲೋಕ ನಾಯಕನಗರ ಈಸ್ಟ್ ಕ್ರಾಸ್, ಕರುಣಾಪುರ 15ನೇ ಕ್ರಾಸ್, ಸರಸ್ವತಿಪುರಂ 8ನೇ ಮುಖ್ಯರಸ್ತೆ, ಶಿಕ್ಷಕರ ಬಡಾವಣೆ ರಾಮಕೃಷ್ಣ ಪರಮಹಂಸ ಬ್ಲಾಕ್, ದಟ್ಟಗಳ್ಳಿ ಜೆ ಬ್ಲಾಕ್, ರಾಜೀವ್‍ನಗರ 2ನೇ ಹಂತ 6ನೇ ಕ್ರಾಸ್, ಗೋಕುಲಂ ಇಎಸ್‍ಐ ಕ್ವಾರ್ಟರ್ಸ್ ಬಿ-3ನೇ ಬ್ಲಾಕ್, ಹೆಬ್ಬಾಳ್ 2ನೇ ಹಂತ 2ನೇ ಕ್ರಾಸ್, ಶಿವರಾಂಪೇಟೆ 2ನೇ ಕ್ರಾಸ್, ಶಕ್ತಿನಗರ 15ನೇ ಮುಖ್ಯರಸ್ತೆ 6ನೇ ಎ ಕ್ರಾಸ್, ಮಂಡಿಮೊಹಲ್ಲಾ ಕಾಮಾಟಗೇರಿ, ಹೆಬ್ಬಾಳ್ ಕಾವೇರಿ ಸರ್ಕಲ್ ಹತ್ತಿರ, ರಾಘವೇಂದ್ರ ಬಡಾವಣೆ 2ನೇ ಕ್ರಾಸ್, ಹೆಬ್ಬಾಳ್ 3ನೇ ಹಂತ ಸುಬ್ರ ಹ್ಮಣ್ಯನಗರ 10ನೇ ಕ್ರಾಸ್, ಶಾಂತಿನಗರ 14ನೇ ಕ್ರಾಸ್, ಜೆಪಿ ನಗರ 14ನೇ ಮುಖ್ಯರಸ್ತೆ ಡಿ ಬ್ಲಾಕ್, ಸರಸ್ವತಿಪುರಂ 5ನೇ ಮುಖ್ಯರಸ್ತೆ 2ನೇ ಕ್ರಾಸ್, ಶಾಂತಿನಗರ ಈಸ್ಟ್ ಮೇನ್ ರೋಡ್ 3ನೇ ಕ್ರಾಸ್, ಗೋಕುಲಂ 2ನೇ ಹಂತ 2ನೇ ಕ್ರಾಸ್, ಸರಸ್ವತಿಪುರಂ 4ನೇ ಮುಖ್ಯರಸ್ತೆ 3ನೇ ಕ್ರಾಸ್, ಜೆಸಿ ನಗರ 2ನೇ ಮುಖ್ಯರಸ್ತೆ 2ನೇ ಕ್ರಾಸ್, ಗಾಂಧಿನಗರ ದುರ್ಗಾಂಬ ದೇವಸ್ಥಾನದ ಹತ್ತಿರ, ವಜ್ರೇಶ್ವರಿನಗರ 8ನೇ ಮುಖ್ಯರಸ್ತೆ 5ನೇ ಕ್ರಾಸ್, ಗಾಂಧಿನಗರ 11ನೇ ಕ್ರಾಸ್, ಹೆಬ್ಬಾಳ್ 2ನೇ ಹಂತ 4ನೇ ಕ್ರಾಸ್, ಮಂಡಿಮೊಹಲ್ಲಾ ದೊಡ್ಡ ವಕ್ಕಲ ಗೇರಿ 4ನೇ ಕ್ರಾಸ್, ಹೆಬ್ಬಾಳ್ 3ನೇ ಹಂತ ಸುಬ್ರಹ್ಮಣ್ಯನಗರ ಇಡಬ್ಲ್ಯೂಎಸ್, ಹೆಬ್ಬಾಳ್ 1ನೇ ಹಂತ 7ನೇ ಡಿ ಕ್ರಾಸ್, ಗೋಕುಲಂ 3ನೇ ಹಂತ 3ನೇ ಮುಖ್ಯರಸ್ತೆ, ಉದಯಗಿರಿ 6ನೇ ಕ್ರಾಸ್, ಹಳ್ಳಿಬೋಗಾದಿ 10ನೇ ಕ್ರಾಸ್, ಕಲ್ಯಾಣಗಿರಿನಗರ ಕೆಹೆಚ್‍ಬಿ ಕಾಲೋನಿ ಎಂಐಜಿ 2ನೇ ಕ್ರಾಸ್, ಬಿ.ಎಲ್. ರಸ್ತೆ, ಬಿಎಂಶ್ರೀ ನಗರ ರೈಲ್ವೇ ಟ್ರ್ಯಾಕ್ ಹತ್ತಿರ, ಬಿಎಂಶ್ರೀ ನಗರ 16ನೇ ಕ್ರಾಸ್, ಹುಯಿಲಾಳು ಗ್ರಾಮ, ಮೈಸೂರಿನ ಜಯದೇವನಗರ 8ನೇ ಕ್ರಾಸ್, ಮಹಾವೀರನಗರ ಕೇಶವ ಅಯ್ಯಂಗಾರ್ ರಸ್ತೆ, ಎನ್.ಆರ್.ಮೊಹಲ್ಲಾ ಎಜೆ ಬ್ಲಾಕ್ 7ನೇ ಕ್ರಾಸ್, ರಾಘವೇಂದ್ರ ಬಡಾವಣೆ 2ನೇ ಕ್ರಾಸ್ ಸೇರಿದಂತೆ 71 ಪ್ರದೇಶಗಳನ್ನು ಹೊಸ ಕಂಟೇನ್ಮೆಂಟ್ ವಲಯಗಳಾಗಿ ಜಿಲ್ಲಾಡಳಿತ ಘೋಷಿಸಿದೆ.