ನಿರಾಶ್ರಿತರಿಗೆ ಆಹಾರ ನೀಡುವ ಮುಂದುವರಿದ ಮಾನವೀಯ ಕಾರ್ಯ
ಮೈಸೂರು

ನಿರಾಶ್ರಿತರಿಗೆ ಆಹಾರ ನೀಡುವ ಮುಂದುವರಿದ ಮಾನವೀಯ ಕಾರ್ಯ

May 3, 2021

ಮೈಸೂರು, ಮೇ2(ಆರ್‍ಕೆಬಿ)- ಕೋವಿಡ್ ಕಫ್ರ್ಯೂ ನಡುವೆಯೂ ಹಸಿದವರಿಗೆ ಅನ್ನ ನೀಡುವ ಕಾರ್ಯ ಮುಂದುವರಿದಿದೆ. ಹಲವು ಸಂಘ ಟನೆಗಳು ವಲಸೆ ಕಾರ್ಮಿಕರು, ನಿರಾಶ್ರಿ ತರಿಗೆ ಭಾನುವಾರವೂ ಊಟ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಕ್ಷಯ ಆಹಾರ ಫೌಂಡೇಷನ್ ಭಾನು ವಾರವೂ ಕೆ.ಆರ್.ಆಸ್ಪತ್ರೆ ಎದುರು, ಎಲ್ಲಮ್ಮ ಕಾಲೋನಿ, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ತೆರಳಿ 13 ದೊಡ್ಡ ಕ್ಯಾರಿಯರ್ ಪಾತ್ರೆಗಳಲ್ಲಿ ತಯಾರಿಸಿ ತಂದಿದ್ದ ಬಿಸಿ ಬೇಳೆಬಾತ್, ರೈಸ್‍ಬಾತ್, ಅನ್ನ ಸಾಂಬಾರ್ ವಿತರಿಸಿದರು. ಪ್ರತಿದಿನದಂತೆ ಇಂದೂ ಸಹ ನಿರಾಶ್ರಿತ ಹಸಿದ ಹೊಟ್ಟೆಗಳಿಗೆ ಸರತಿಯ ಸಾಲಿನಲ್ಲಿ ನಿಲ್ಲಿಸಿ ಆಹಾರ ವಿತರಿಸಿದರು.

ಸುಜೀವ್ ಸಂಸ್ಥೆಯ ರಾಜಾರಾಂ ಕೂಡ ಇಂದು ಕೆ.ಅರ್.ಆಸ್ಪತ್ರೆ ಬಳಿ ನಿರಾಶ್ರಿತರಿಗೆ ಮಾಸ್ಕ್ ಜೊತೆಗೆ ಆಹಾರದ ಪೊಟ್ಟಣ ಗಳನ್ನು ವಿತರಿಸಿದರು.
ತಿಲಕ್‍ನಗರದ ಶ್ವೇತಾ ಎಂಬ ಗೃಹಿಣಿ ಸಿದ್ಧಪಡಿಸಿದ್ದ 50ಕ್ಕೂ ಹೆಚ್ಚು ರೈಸ್ ಬಾತ್‍ನ ಪೊಟ್ಟಣಗಳನ್ನು ಕೆ.ಆರ್.ಆಸ್ಪತ್ರೆ ವೃತ್ತದ ಬಳಿ, ಹಳೇ ಆರ್‍ಎಂಸಿ ಬಳಿ ಅವರ ಸಹೋದರರಾದ ಚೇತನ್, ಕಿರಣ್ ನಿರಾಶ್ರಿತರಿಗೆ ವಿತರಿಸುವ ಮೂಲಕ ಮಾನವೀಯ ಕಾರ್ಯ ತೋರಿದರು.

`ಮೈಸೂರು ಮಿತ್ರ’ ಪತ್ರಿಕೆಯಲ್ಲಿ ನಮ್ಮ ಫೌಂಡೇಷನ್‍ನ ದೂರವಾಣಿ ಸಂಖ್ಯೆ ಯನ್ನು ನೋಡಿ, ಅನೇಕರು ಅಂಗಡಿ ಯವರು, ಗೃಹಿಣಿಯರು, ಸರ್ಕಾರಿ ನೌಕರರು ಪ್ರತಿದಿನ ತಮ್ಮ ಕೈಲಾದಷ್ಟು ಅಂದರೆ ಕೆಲವರು 25, 50, 100 ಹೀಗೆ ತಾವೇ ತಯಾರಿಸಿದ ಆಹಾರದ ಪೊಟ್ಟಣ ಗಳನ್ನು ನಿರಾಶ್ರಿತರಿಗೆ ನೀಡುವಂತೆ ಫೌಂಡೇಷನ್‍ಗೆ ನೀಡುತ್ತಿರುವುದು ಮಾನ ವೀಯತೆಗೆ ನಿದರ್ಶನವಾಗಿದೆ ಎಂದು ಅಕ್ಷಯ ಆಹಾರ ಫೌಂಡೇಷನ್‍ನ ಹೆಚ್. ಆರ್.ರಾಜೇಂದ್ರ ತಿಳಿಸಿದರು.

ಶ್ರೀರಾಂಪುರದ ಇಂಡಿ ಫುಡ್‍ನ ಹೇಮಾರಾವ್, ಪ್ರಕಾಶ್ ಜ್ಯೂವೆಲ್ಲರ್ಸ್ ಹಾಗೂ ಅನೇಕರು ಹೆಸರು ಹೇಳಲಿಚ್ಛಿಸದೆ ಆಹಾರದ ಪೊಟ್ಟಣಗಳನ್ನು ನಮಗೆ ತಲುಪಿಸುತ್ತಿದ್ದಾರೆ. ಕರೆ ಮಾಡಿದರೆ ನಾವೇ ಹೋಗಿ ದಾನಿಗಳಿಂದ ಆಹಾರದ ಪೊಟ್ಟಣಗಳನ್ನು ಪಡೆದುಕೊಂಡು ನಿರಾ ಶ್ರಿತರಿಗೆ ತಲುಪಿಸುವ ಕೆಲಸ ಮಾಡು ತ್ತಿರುವುದಾಗಿ ಫೌಂಡೇಷನ್‍ನ ರಾಜೇಂದ್ರ ಮತ್ತು ಶ್ವೇತಾ ದಂಪತಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »