ಆಕ್ಸಿಜನ್ ರೀ-ಫಿಲ್ಲಿಂಗ್ ಘಟಕಕ್ಕೆ 24ಘಿ7 ಪೊಲೀಸರ ಕಣ್ಗಾವಲು
ಮೈಸೂರು

ಆಕ್ಸಿಜನ್ ರೀ-ಫಿಲ್ಲಿಂಗ್ ಘಟಕಕ್ಕೆ 24ಘಿ7 ಪೊಲೀಸರ ಕಣ್ಗಾವಲು

May 3, 2021

ಮೈಸೂರು, ಮೇ 2(ಎಂಟಿವೈ)-ಕೊರೊನಾ ಎರಡನೇ ಹಂತದ ಅಲೆಯ ತೀವ್ರತೆಯಿಂದಾಗಿ ದಿನದಿಂದ ದಿನಕ್ಕೆ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಕ್ಸಿಜನ್ ಕೊರತೆ ಉಂಟಾಗದಂತೆ ಕಟ್ಟೆಚ್ಚರ ವಹಿ ಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆಕ್ಸಿಜನ್ ಘಟಕಗಳ ಮಾಲೀ ಕರಿಗೆ ಕೈಗಾರಿಕೆಗಳಿಗೆ ಆಮ್ಲಜನಕ ಸರಬ ರಾಜು ಮಾಡುವುದನ್ನು ಸ್ಥಗಿತಗೊಳಿಸು ವಂತೆ ಸೂಚಿಸಿದ್ದಾರೆ.

ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶ ದಲ್ಲಿರುವ ಆಕ್ಸಿಜನ್ ರೀ-ಫಿಲ್ಲಿಂಗ್ ಕೈಗಾ ರಿಕೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಡ್ರಗ್ ಕಂಟ್ರೋಲ್ ಇಲಾಖೆಯ ಅಧಿಕಾರಿ ಗಳಾದ ಅರುಣ್ ಹಾಗೂ ನಾಗರಾಜು ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕೈಗಾರಿಕೆ ಉದ್ದೇಶಗಳಿಗೆ ಈ ಹಿಂದೆ ಸರಬರಾಜು ಮಾಡುತ್ತಿದ್ದ ಆಕ್ಸಿಜನ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಕೇವಲ ಆರೋಗ್ಯ ಸೇವೆಗೆ ಮಾತ್ರ ಆಕ್ಸಿಜನ್ ಪೂರೈಸುವಂತೆ ಸೂಚಿಸಿದರು.

ಮೈಸೂರಲ್ಲಿರುವ ಆಕ್ಸಿಜನ್ ರೀ-ಫಿಲ್ಲಿಂಗ್ ಘಟಕವನ್ನೇ ಆಸ್ಪತ್ರೆಗಳು ಅವ ಲಂಬಿಸಿರುವುದರಿಂದ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಕೈಗಾ ರಿಕೆಗಳಿಗೆ ಸರಬರಾಜಾಗುತ್ತಿದ್ದ ಆಕ್ಸಿಜನ್‍ಗೆ ಜಿಲ್ಲಾಡಳಿತ ಕಡಿವಾಣ ಹಾಕಿದೆ.
ಪೊಲೀಸರ ಕಣ್ಗಾವಲು: ಈ ಸಂಬಂಧ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಸರ್ಕಾರದ ಆದೇಶ ದಂತೆ ಆಮ್ಲಜನಕವನ್ನು ಕೇವಲ ಆರೋಗ್ಯ ಮತ್ತು ಚಿಕಿತ್ಸಾ ಉದ್ದೇಶಕ್ಕೆ ಪೂರೈಸುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸಿ ಕೈಗಾರಿಕೆ ಅಥವಾ ಅನ್ಯ ಉದ್ದೇಶಕ್ಕೆ ಆಮ್ಲ ಜನಕ ಸರಬರಾಜು ಮಾಡಿದರೆ ಅಂತಹ ವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾಗಿರುವ ಆಮ್ಲಜನಕದ ಕೊರತೆ ಜಿಲ್ಲೆಯಲ್ಲಿ ಉಂಟಾಗದಂತೆ ಆಮ್ಲಜನಕ ತಯಾರಿಕಾ ಮತ್ತು ರೀ-ಫಿಲ್ಲಿಂಗ್ ಘಟಕ ಗಳಿಗೆ ಕೆಲವು ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.

ಆಕ್ಸಿಜನ್ ಕೊರತೆ ಉಂಟಾಗಬಹುದು ಎಂಬ ಮುಂದಾಲೋಚನೆಯಿಂದ ಕೆಲ ವರು ಮುಂಗಡವಾಗಿ ಆಕ್ಸಿಜನ್ ಸಿಲಿಂ ಡರ್ ಪಡೆಯಲೂಬಹುದು. ಅಲ್ಲದೇ ಕೆಲವು ಖಾಸಗಿ ಆಸ್ಪತ್ರೆಗಳು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಆಕ್ಸಿಜನ್ ಪಡೆದು ಕೃತಕ ಅಭಾವ ಸೃಷ್ಟಿಸಬಹುದಾಗಿದೆ. ಕೋವಿಡ್‍ನಂತಹ ಸಂದಿಗ್ಧ ಪರಿಸ್ಥಿತಿ ಯಲ್ಲಿ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈ ಸುವುದು ಸಮಂಜಸವಲ್ಲ. ಇದನ್ನು ಮನ ಗಂಡು ಎಲ್ಲಾ ಆಕ್ಸಿಜನ್ ಘಟಕಗಳಿಗೂ ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿ ಯನ್ನು ಹಾಕಲಾಗಿದ್ದು, ಪ್ರತಿಯೊಂದು ಕೇಂದ್ರಕ್ಕೂ ಡ್ರಗ್ ಕಂಟ್ರೋಲ್ ಇಲಾಖೆ ವತಿಯಿಂದ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಯಾವ ಯಾವ ಆಸ್ಪತ್ರೆಗೆ ಎಷ್ಟೆಷ್ಟು ಪ್ರಮಾಣದ ಆಕ್ಸಿಜನ್ ಬೇಡಿಕೆ ಇದೆ ಎಂಬುದನ್ನು ದಾಖಲಿಸಿ ಕೊಳ್ಳಲಾಗುತ್ತದೆ. ಅಲ್ಲದೇ ಆಕ್ಸಿಜನ್ ಕೇಂದ್ರಗಳಿಂದ ಬೇಡಿಕೆ ಇರುವ ಆಸ್ಪತ್ರೆ ಗಳಿಗೆ ನೋಡಲ್ ಅಧಿಕಾರಿಗಳ ಸೂಚನೆ ಮೇರೆಗೆ ಆಕ್ಸಿಜನ್ ರವಾನೆಯಾಗಿದೆ ಎಂದು ತಿಳಿಸಿದರು.

ಮೈಸೂರು ನಗರದಲ್ಲಿ ರೀ-ಫಿಲ್ಲಿಂಗ್ ಘಟಕ, ಏಜೆನ್ಸಿ ಸೇರಿದಂತೆ ಆಮ್ಲಜನಕ ಪೂರೈಸುವ ಐದು ಸಂಸ್ಥೆಗಳಿವೆ. ಸೀಮಿತ ಸಂಖ್ಯೆಯಲ್ಲಿ ಆಕ್ಸಿಜನ್ ಲಭ್ಯವಿರುತ್ತದೆ. ಹೊರ ಜಿಲ್ಲೆಗಳ ಕೆಲವು ರೋಗಿಗಳು ನಮ್ಮ ಜಿಲ್ಲೆಯಲ್ಲಿರುವ ಆಕ್ಸಿಜನ್ ಅನ್ನೇ ಅವಲಂಬಿಸಬೇಕಾಗುತ್ತದೆ. ಅನವಶ್ಯಕ ವಾಗಿ ಕೆಲವರು ಖಾಸಗಿಯಾಗಿ ಬಂದು ಸಿಲಿಂಡರ್‍ಗಳಿಗೆ ಆಮ್ಲಜನಕ ತುಂಬಿಸಿ ಕೊಂಡು ಹೋದರೆ ನಿಜವಾದ ರೋಗಿ ಗಳಿಗೆ ಆಕ್ಸಿಜನ್ ಸರಬರಾಜು ಮಾಡಲು ಕಷ್ಟವಾಗುತ್ತದೆ. ಇದನ್ನು ಮನಗಂಡು ಜಿಲ್ಲಾಡಳಿತದ ಮೂಲಕವೇ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳುವ ಉದ್ದೇಶ ದಿಂದ ಆಮ್ಲಜನಕ ಪೂರೈಕೆ ಮತ್ತು ರೀ-ಫಿಲ್ಲಿಂಗ್ ಘಟಕಗಳಿಗೆ ಸೂಚನೆ ನೀಡ ಲಾಗಿದೆ ಎಂದು ಸ್ಪಷ್ಟಪಡಿಸಿದರು.

Translate »