ಮೈಸೂರಲ್ಲಿ ಮುಂದುವರಿದ ವರುಣನ ಆರ್ಭಟ
ಮೈಸೂರು

ಮೈಸೂರಲ್ಲಿ ಮುಂದುವರಿದ ವರುಣನ ಆರ್ಭಟ

May 19, 2022

ಹಾನಿಗೀಡಾದ ಪ್ರದೇಶಗಳಲ್ಲಿ ಸಂಸದ, ಮುಡಾ ಅಧ್ಯಕ್ಷ, ಅಧಿಕಾರಿಗಳ ಪರಿಶೀಲನೆ ಎಲ್ಲೆಡೆ ಮಳೆ ನೀರು ಚರಂಡಿ ಸುಧಾರಣೆಗೆ ಸೂಚನೆ

ಮೈಸೂರು, ಮೇ ೧೮ (ಆರ್‌ಕೆ)- ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದ ಪ್ರತಾಪ್‌ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಹಾಗೂ ಅಧಿಕಾರಿಗಳು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬೋಗಾದಿಯ ಮರಿಯಪ್ಪನ ಕೆರೆ ತುಂಬಿ ಕೋಡಿ ಬಿದ್ದ ನೀರು ಹರಿದಿದ್ದರಿಂದ ಕೊಚ್ಚಿಹೋಗಿದ್ದ ಸೇತುವೆ, ಜಲಾವೃತ ಗೊಂಡಿದ್ದ ಸಿಎಫ್‌ಟಿಆರ್‌ಐ, ಆನಂದನಗರ ಆಶ್ರಯ ಬಡಾವಣೆ, ಶಾರದಾದೇವಿ ನಗರದ ತಗ್ಗು ಪ್ರದೇಶ, ಮಳೆ ನೀರಿನ ಚರಂಡಿ ಹಾದುಹೋಗಿರುವ ಸ್ಥಳ ಹಾಗೂ ಲಿಂಗಾAಬುದಿ ಕೆರೆಗಳಿಗೆ ಭೇಟಿ ನೀಡಿ ಉಂಟಾಗಿರುವ ಅವಾಂತರವನ್ನು ವೀಕ್ಷಿಸಿದ ಸಂಸದ, ಮುಡಾ ಅಧ್ಯಕ್ಷರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಮರಿಯಪ್ಪನ ಕೆರೆ ಮತ್ತು ಲಿಂಗಾAಬುದಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಹಾದು ಹೋಗಿರುವ ಬಗ್ಗೆ ಮೂಲ ನಕ್ಷೆ ಪರಿಶೀಲಿಸಿದ ಅವರು, ಅದರಂತೆ ಕಾಲುವೆಯ ನೈಜ ಸ್ಥಿತಿಯ ಬಗ್ಗೆ ಸರ್ವೆ ನಡೆಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ, ನೀರು ಹರಿದು ಹೋಗಲು ಅಡ್ಡಿಯಾಗಿರುವ ಗಿಡಗಂಟಿ, ಕಲ್ಲು, ಮಣ್ಣನ್ನು ತೆಗೆಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮರಿಯಪ್ಪನ ಕೆರೆಯಿಂದ ಶಾರದಾದೇವಿನಗರದವರೆಗೆ ೧.೨ ಕಿ.ಮೀ. ಚರಂಡಿ ಅಭಿವೃದ್ಧಿ ಕಾಮಗಾರಿ ನಡೆಸಲು ಯೋಜನೆ ರೂಪಿಸಿರುವ ಮುಡಾ ಅಧಿಕಾರಿಗಳು ಶೀಘ್ರ ಟೆಂಡರ್ ಕರೆದು ಕೆಲಸ ಆರಂಭಿಸುವAತೆ ನಿರ್ದೇಶನ ನೀಡಲಾಯಿತು. ಮಳೆ ನೀರು ಚರಂಡಿಯನ್ನು ಅಗಲೀಕರಣ ಮತ್ತು ಅಭಿವೃದ್ಧಿ ಕಾಮ ಗಾರಿಯನ್ನು ಲಿಂಗಾAಬುದಿ ಕೆರೆವರೆಗೆ ಮೈಸೂರು ಮಹಾನಗರ ಪಾಲಿಕೆ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು. ಮಳೆಗಾಲ ಆರಂಭವಾಗಿರುವುದರಿAದ ಮುಂದೆ ಸಂಭವಿಸಬಹುದಾದ ಅಪಾರ ಹಾನಿ ತಡೆಗಟ್ಟಲು ಮುಡಾ ಮತ್ತು ಪಾಲಿಕೆಯು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪ್ರತಾಪ್ ಸಿಂಹ ತಿಳಿಸಿದರು. ಅದೇ ರೀತಿ ಮಳೆ ನೀರು ನುಗ್ಗಿ ತೊಂದರೆಯಾಗಿರುವ ಆನಂದನಗರ, ಸಿಎಫ್‌ಟಿಆರ್‌ಐ ಲೇಔಟ್, ಶಾರದಾದೇವಿನಗರ, ವಿಜಯನಗರ ೪ನೇ ಹಂತ, ಲಿಂಗಾAಬುದಿ ಕೆರೆ ಹಾಗೂ ಸುತ್ತಲಿನ ಪ್ರದೇಶಗಳಿಗೂ ಭೇಟಿ ನೀಡಿ, ಸಮಸ್ಯೆಗೆ ನಿಖರ ಕಾರಣ ಏನೆಂಬುದನ್ನು ಸರ್ವೆ ಮೂಲಕ ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳು ವಂತೆಯೂ ಸೂಚನೆ ನೀಡಿದರು. ಮುಡಾದಿಂದ ಮಳೆ ಹಾನಿ ತಡೆಗಟ್ಟಲು ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳು, ಈಗಾಗಲೇ ಹಾನಿಯಾಗಿರುವ ರಸ್ತೆ, ಚರಂಡಿ, ಸೇತುವೆಗಳ ದುರಸ್ತಿ ಕಾರ್ಯಗಳ ಬಗ್ಗೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ವಿವ ರಿಸಿದರಲ್ಲದೇ, ಆ ಸಂಬAಧ ಸಭೆ ನಡೆಸಿ ಚರ್ಚಿಸಬೇಕೆಂದು ತಿಳಿಸಿದರು.

ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಎಕ್ಸಿಕ್ಯುಟಿವ್ ಇಂಜಿನಿಯರ್ ಮೋಹನ್, ಸುನಿಲ್, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್‌ಗಳು, ಮೈಸೂರು ಮಹಾನಗರ ಪಾಲಿಕೆ ಸೂಪರಿಂಟೆAಡಿAಗ್ ಇಂಜಿನಿಯರ್ ಮಹೇಶ ಸೇರಿದಂತೆ ಹಲವು ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಲಿಂಗಾAಬುದಿ ಕೆರೆ ಸಂರಕ್ಷಣೆ ಬಗ್ಗೆ ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳನ್ನು ಕರೆಸಿಕೊಂಡು ಮಾಹಿತಿ ಪಡೆದ ಸಂಸದರು, ಹೆಚ್ಚುವರಿ ಮಳೆ ನೀರು ಹರಿದುಹೋಗಲು ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಹಾಗೂ ಕೆರೆ ಸುರಕ್ಷತೆಗೆ ಧಕ್ಕೆ ಬಾರದಂತೆ ಕಾಮಗಾರಿ ನಡೆಸುವ ಬಗ್ಗೆಯೂ ಚರ್ಚೆ ನಡೆಸಿದರು.

ಕಾರ್ಪೊರೇರ‍್ಸ್ ಮನೆ ಮುಂದೆ ಧರಣ ಕೂತ್ಕೊಳ್ಳಿ ಮೈಸೂರು ಜನರಿಗೆ ಸಂಸದ ಪ್ರತಾಪ್ ಸಿಂಹ ಕರೆ
ಮೈಸೂರು,ಮೇ ೧೮(ಜಿಎ)- ನಿಮ್ಮ ಏರಿಯಾದಲ್ಲಿ ಕಸ ತೆಗೆದಿಲ್ವಾ? ಯುಜಿಡಿ ಓವರ್ ಫ್ಲೋ ಆಗ್ತಾ ಇದಿಯಾ? ನಿಮ್ಮ ಏರಿಯಾದ ಯಾವುದೇ ಸಮಸ್ಯೆ ಇದ್ದರೂ ಕಾರ್ಪೊ ರೇರ‍್ಸ್ ಮನೆ ಮುಂದೆ ಧರಣ ಕೂತ್ಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನ ನಾಗರಿಕರಿಗೆ ಕರೆ ನೀಡಿದರು.

ಮಳೆ ಹಾನಿ ಪ್ರದೇಶ ವೀಕ್ಷಣೆ ವೇಳೆ ಮಾಧ್ಯಮಗಳೊಂ ದಿಗೆ ಮಾತನಾಡಿದ ಅವರು, ಕಾರ್ಪೊರೇರ‍್ಸ್ ಕೆಲಸಗಳನ್ನು ನಾನೇ ಮಾಡಬೇಕು. ಮೈಸೂರಲ್ಲಿ ೬೫ ಜನ ಕಾರ್ಪೊರೇಟರ್ ಗಳಿದ್ದಾರೆ. ಕೇಬಲ್ ಹಾಕಲು ರಸ್ತೆ ಅಗೆಯುವುದಕ್ಕೆ ಬಿಡುತ್ತಾರೆ. ಆದರೆ ಜನಕ್ಕೆ ಅನುಕೂಲವಾಗುವ ಗ್ಯಾಸ್ ಪೈಪ್‌ಲೈನ್‌ಗೆ ವಿರೋ ಧಿಸುತ್ತಾರೆ. ಅವರ ಈ ಮನಸ್ಥಿತಿಯನ್ನು ಜನರು ಅರ್ಥ ಮಾಡಿ ಕೊಳ್ಳಬೇಕು ಎಂದರು. ಪ್ರತಿಯೊಂದಕ್ಕೂ ನಾನೇ ಬರುವುದಕ್ಕೆ ಆಗುವುದಿಲ್ಲ. ವಿದ್ಯಾರಣ್ಯಪುರಂ ಪ್ಲಾಂಟ್‌ನ ಕಸ ತೆಗೆಸುವ ಕೆಲಸ ಮಾಡಿಸುತ್ತಿದ್ದೇನೆ. ಗ್ರೇಟರ್ ಮೈಸೂರು ಮಾಡಲು ಪ್ರಯತ್ನಿಸುತ್ತಿದ್ದೇನೆ. ಸಾರ್ವಜನಿಕರು ತಮ್ಮ ನಿತ್ಯದ ಸಮಸ್ಯೆಗಳಿಗೆ ನಿಮ್ಮ ನಿಮ್ಮ ವ್ಯಾಪ್ತಿಯ ಕಾರ್ಪೊರೇಟರ್‌ಗಳ ಮನೆ ಮುಂದೆ ಧರಣ ಕೂರುವುದನ್ನು ಕಲಿತುಕೊಳ್ಳಿ ಎಂದರು. ಅಧಿಕಾರಿಯೊಬ್ಬ ರಿಗೆ ಕರೆ ಮಾಡಿದ ಸಂಸದರು, ನಿಮಗೆ ರೋಡ್ ಕನ್‌ಸ್ಟçಕ್ಷನ್ ಕೆಲಸ ಗೊತ್ತೇನ್ರಿ? ರಸ್ತೆಬದಿಯಲ್ಲಿ ನೀರು ಓವರ್ ಫ್ಲೋ ಆಗುವು ದನ್ನು ಕೂಡಲೇ ನಿಲ್ಲಿಸಬೇಕು. ಶೀಘ್ರವೇ ಎಂ.ಜಿ.ರಸ್ತೆ ದುರಸ್ಥಿ ಕಾರ್ಯ ಮಾಡಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.

 

Translate »