ಮಹಾರಾಷ್ಟ್ರದಲ್ಲಿ ನಾಪತ್ತೆಯಾಗಿರುವ ಮಹಿಳಾ ಪೇದೆ ಮೈಸೂರಲ್ಲಿರುವ ಶಂಕೆ
ಮೈಸೂರು

ಮಹಾರಾಷ್ಟ್ರದಲ್ಲಿ ನಾಪತ್ತೆಯಾಗಿರುವ ಮಹಿಳಾ ಪೇದೆ ಮೈಸೂರಲ್ಲಿರುವ ಶಂಕೆ

May 19, 2022

ಮೊಬೈಲ್ ಲೊಕೇಷನ್ ಆಧರಿಸಿ ಮಹಾರಾಷ್ಟç ಪೊಲೀಸರಿಂದ ಪರಿಶೀಲನೆ

ಪೇದೆಯನ್ನು ವಂಚಕನೊಬ್ಬ ಅಪಹರಿಸಿರುವ ಗುಮಾನಿ
ಮೈಸೂರು, ಮೇ ೧೮(ಜಿಎ)-ಮಹಾರಾಷ್ಟçದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳಾ ಪೇದೆಯ ಮೊಬೈಲ್ ಲೊಕೇಷನ್ ಮೈಸೂರಿನಲ್ಲಿ ಪತ್ತೆಯಾಗಿದೆ. ಆಕೆಯನ್ನು ವ್ಯಕ್ತಿಯೋರ್ವ ಅಪಹರಿಸಿದ್ದಾನೆ ಎಂದು ಶಂಕಿಸಿ, ಮಹಾರಾಷ್ಟç ಪೊಲೀಸರ ತಂಡ ಮೈಸೂರಲ್ಲಿ ತೀವ್ರ ಹುಡುಕಾಟ ನಡೆಸಿದೆ.

ವಿವರ: ಮಹಾರಾಷ್ಟç ಸತಾರಾ ಜಿಲ್ಲೆಯ ಸತಾರಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ತೇಜಾ ರಾಜೇಂದ್ರ ತುಪೆ(೩೮) ಮೇ ೧೦ರಂದು ಕರ್ತವ್ಯದ ವೇಳೆ ಯಲ್ಲೇ ಮಧ್ಯಾಹ್ನ ೨.೩೦ರ ಸುಮಾರಿನಲ್ಲಿ ನಾಪತ್ತೆಯಾ ಗಿದ್ದರು. ಈ ಸಂಬAಧ ಆಕೆಯ ತಾಯಿ ಜಯಶ್ರೀ ಅವರು ಅಂದೇ ಅದೇ ಠಾಣೆಯಲ್ಲಿ ಮಗಳ ನಾಪತ್ತೆ ಸಂಬAಧ ದೂರು ಸಲ್ಲಿಸಿದ್ದರು. ಕರ್ತವ್ಯದ ವೇಳೆ ಠಾಣೆಯಿಂದ ಹೊರ ಹೋದ ಮಹಿಳಾ ಪೇದೆ ನಿಗೂಢವಾಗಿ ನಾಪತ್ತೆಯಾಗಿ ದ್ದನ್ನು ಗಂಭೀರವಾಗಿ ಪರಿಗಣ ಸಿದ್ದ ಅಲ್ಲಿನ ಪೊಲೀಸರು ತನಿಖೆ ಆರಂಭಿಸಿದಾಗ ಆಕೆಯ ಬ್ಯಾಂಕ್ ಖಾತೆಯಿಂದ ಫೋನ್ ಪೇ ಮೂಲಕ ವ್ಯಕ್ತಿಯೋರ್ವನ ಖಾತೆಗೆ ೨.೨೦ ಲಕ್ಷ ರೂ. ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಆ ವ್ಯಕ್ತಿಯ ಜಾಡನ್ನು ಹಿಡಿದು ತನಿಖೆ ನಡೆಸಿದಾಗ ಆತ ಮೂಲತಃ ಹಾಸನ ಜಿಲ್ಲೆಯವನಾದ ಮುಜಾಮಿಲ್ ಶಾನವಾಜ್ ಖಾನ್ ಎಂದು ತಿಳಿದು ಬಂದಿದ್ದು, ಮಹಾರಾಷ್ಟçದ ಹೋಂ ಅಪ್ಲೆöÊಯನ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಈ ಹಿಂದೆ ಇಬ್ಬರು ಮಹಿಳೆಯರನ್ನು ಇದೇ ರೀತಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದು, ಆ ಮಹಿಳೆಯರ ಖಾತೆಗಳಿಂದಲೂ ಈತನ ಖಾತೆಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆಯಂತೆ.

ಈ ಹಿನ್ನೆಲೆಯಲ್ಲಿ ಮಹಿಳಾ ಪೇದೆ ಈತನಿಂದ ಅಪಹರಣವಾಗಿದ್ದಾಳೆ ಎಂದು ಪರಿಗಣ ಸಿರುವ ಮಹಾರಾಷ್ಟç ಪೊಲೀಸರು ಆಕೆಯ ಮೊಬೈಲ್ ಟವರ್ ಲೊಕೇಷನ್ ಪತ್ತೆಯಲ್ಲಿ ತೊಡಗಿದಾಗ ಉತ್ತರ ಪ್ರದೇಶ, ಬೆಂಗಳೂರು ಸೇರಿದಂತೆ ಹಲವೆಡೆ ಲೊಕೇಷನ್ ದೊರೆತಿದೆ. ಮೇ ೧೬ರಂದು ಮಧ್ಯಾಹ್ನ ೧೨.೧೨ರ ಸಮಯದಲ್ಲಿ ಮೈಸೂರಿನ ಹಳ್ಳದಕೇರಿಯಲ್ಲಿರುವ ಮನ್ನರ‍್ಸ್ ಕಾಂಪ್ಲೆಕ್ಸ್ ಬಿಲ್ಡಿಂಗ್‌ನಲ್ಲಿರುವ ಟವರ್‌ನಿಂದ ಮಹಿಳಾ ಪೇದೆಯ ಮೊಬೈಲ್ ಕಾರ್ಯ ನಿರ್ವಹಿಸಿರುವುದು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದ ಮಹಾರಾಷ್ಟç ಪೊಲೀಸರ ತಂಡ ಲಷ್ಕರ್ ಠಾಣೆ ಪೊಲೀಸರ ಸಹಕಾರದೊಂದಿಗೆ ಮನ್ನರ‍್ಸ್ ಕಾಂಪ್ಲೆಕ್ಸ್ ಬಿಲ್ಡಿಂಗ್‌ಗೆ ತೆರಳಿ ಪರಿಶೀಲನೆ ನಡೆಸಿತು. ಈ ಟವರ್‌ನಿಂದ ಸುಮಾರು ೨ ಕಿ.ಮೀ. ಸುತ್ತಳತೆ ಪ್ರದೇಶದಲ್ಲಿ ಮೊಬೈಲ್‌ಗಳು ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರಿತ ಮಹಾರಾಷ್ಟç ಪೊಲೀಸರ ತಂಡ ಕಳೆದ ಎರಡು ದಿನಗಳಿಂದ ಮಹಿಳಾ ಪೇದೆ ಮತ್ತು ಶಾನವಾಜ್ ಖಾನ್ ಪತ್ತೆಗಾಗಿ ಹುಡುಕಾಟ ನಡೆಸುತ್ತಿದೆ. ಮೇ ೧೬ರಂದು ಆಕೆಯ ಮೊಬೈಲ್ ಕಾರ್ಯ ನಿರ್ವಹಿಸಿದ ನಂತರ ಮತ್ತೆ ಅದರ ಜಾಡು ದೊರೆಯಲಿಲ್ಲ ಎಂದು ಹೇಳಲಾಗಿದೆ. ಇಂದು ಮಧ್ಯಾಹ್ನ ಮೈಸೂರಿನ ಪತ್ರಕರ್ತರ ಭವನಕ್ಕೆ ಆಗಮಿಸಿದ್ದ ಮಹಾರಾಷ್ಟç ಪೊಲೀಸರ ತಂಡ ನಿಗೂಢವಾಗಿ ನಾಪತ್ತೆಯಾಗಿರುವ ಮಹಿಳಾ ಪೇದೆ ಮತ್ತು ಆಕೆ ಯನ್ನು ಅಪಹರಿಸಿದ್ದಾನೆಂದು ಶಂಕಿಸಲಾಗಿರುವ ಶಾನವಾಜ್ ಖಾನ್ ಫೋಟೋ ಗಳನ್ನು ಪತ್ರಕರ್ತರಿಗೆ ನೀಡಿದೆ. ಇವರಿಬ್ಬರ ಬಗ್ಗೆ ಮಾಹಿತಿ ದೊರೆತವರು ಮೊಬೈಲ್ ಸಂಖ್ಯೆ ೯೩೨೧೦೩೩೦೧೮ ಅಥವಾ ೯೮೨೨೨೧೯೦೧೧ ಅನ್ನು ಸಂಪರ್ಕಿಸುವAತೆ ಕೋರಿದ್ದಾರೆ.

Translate »