ವಿಧಾನಸಭೆಯಿಂದ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ: ಮೂರೂ ಪಕ್ಷಗಳಿಗೆ ‘ಅಡ್ಡ’ ಭೀತಿ
ಮೈಸೂರು

ವಿಧಾನಸಭೆಯಿಂದ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ: ಮೂರೂ ಪಕ್ಷಗಳಿಗೆ ‘ಅಡ್ಡ’ ಭೀತಿ

May 19, 2022

ಅವಿರೋಧ ಆಯ್ಕೆಗೆ ಹರಸಾಹಸ
ಬೆಂಗಳೂರು, ಮೇ ೧೮ (ಕೆಎಂಶಿ)-ವಿಧಾನಸಭೆಯಿAದ ರಾಜ್ಯಸಭೆಯ ನಾಲ್ಕು, ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅಡ್ಡ ಮತದಾನದ ಭಯ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಕಾಡುತ್ತಿದೆ.
ಅಡ್ಡ ಮತದಾನದಿಂದ ಪಾರಾಗಲು ಅವಿರೋಧ ಆಯ್ಕೆಗೆ ಮೂರು ಪಕ್ಷಗಳೂ ಒಲವು ತೋರಿವೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಎರಡು, ಕಾಂಗ್ರೆಸ್‌ಗೆ ಒಂದು, ಜೆಡಿಎಸ್ ಇತರೆ ಸದಸ್ಯರ ಬೆಂಬಲ ಪಡೆದು ಒಂದು ಸ್ಥಾನ ಗೆಲ್ಲಬಹುದಾಗಿದೆ. ಇನ್ನು ವಿಧಾನ ಪರಿಷತ್ತಿನ ೭ ಸ್ಥಾನಗಳಲ್ಲಿ ಬಿಜೆಪಿ ೪, ಕಾಂಗ್ರೆಸ್‌ಗೆ ೨, ಜೆಡಿಎಸ್‌ಗೆ ೧ ಸ್ಥಾನ ತಮ್ಮ ವಿಧಾನಸಭೆ ಸದಸ್ಯರ ಬಲಾಬಲದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಯಾವುದಾದರೂ ರಾಜಕೀಯ ಪಕ್ಷ ತನಗಿಲ್ಲದ ಸ್ಥಾನಕ್ಕೆ ಒಲವು ತೋರಿದರೆ, ಅಂತಹ ಸಂದರ್ಭದಲ್ಲಿ ಅಡ್ಡಮತ ದಾನದ ಭೀತಿ ಎದುರಾಗಬಹುದೆಂಬ ಭೀತಿ ಕಾಡು ತ್ತಿದೆ. ಈ ಹಿಂದೆ ವಿಜಯ್‌ಮಲ್ಯ, ಎಂಎಎA ರಾಮಸ್ವಾಮಿ, ರಾಜೀವ್ ಚಂದ್ರಶೇಖರ್, ಕುಪೇಂದ್ರ ರೆಡ್ಡಿ, ಕೆ.ಸಿ.ರಾಮಮೂರ್ತಿ ಸೇರಿದಂತೆ ಹಲವು ಬಲಾಢ್ಯರು ಪಕ್ಷೇತರರಾಗಿ ಕಣಕ್ಕಿಳಿದು, ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳನ್ನೇ ಸೋಲಿಸಿ, ಜಯಭೇರಿ ಬಾರಿಸಿದ್ದರು. ಮೂರು ಪಕ್ಷಗಳಲ್ಲೂ ಒಂದಲ್ಲ ಒಂದು ಕಾರಣಕ್ಕೆ ಕೆಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಒಂದು ವೇಳೆ ಚುನಾವಣೆ ನಡೆದರೆ, ಇಂತಹವರು ಅಡ್ಡ ಮತದಾನ ಮಾಡಬಹುದೆಂಬ ಭಯ ಕಾಡುತ್ತಿದೆ. ಆಡಳಿತಾರೂಢ ಬಿಜೆಪಿಗೂ ಇದೇ ಭಯ ಕಾಡಿದೆ. ಇದನ್ನು ಮನಗಂಡ ಬಿಜೆಪಿ ವರಿಷ್ಠರು ತಮಗಿಲ್ಲದ್ದನ್ನು ಆಸೆಪಡದೇ ಅವಿ ರೋಧ ಆಯ್ಕೆ ಮಾಡಿಕೊಳ್ಳಲು ಕಸರತ್ತು ನಡೆಸಿ ಎಂದು ಸಿಎಂ ಬೊಮ್ಮಾಯಿ ಅವರಿಗೆ ಸಲಹೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಸ್ನೇಹಿತರು ಮತ್ತು ಮಂತ್ರಿ ಸ್ಥಾನ ಸಿಗದೇ ಅಸಮಾಧಾನದಲ್ಲಿರುವವರು, ಚುನಾವಣೆ ನಡೆದರೆ, ಅಡ್ಡ ಮತದಾನ ಮಾಡುತ್ತಾರೆ ಎಂಬ ಭಯ ಕಾಡಿದೆ. ಇದನ್ನು ತಪ್ಪಿಸಲೇಂದೇ ರಾಷ್ಟಿçÃಯ ಕಾರ್ಯದರ್ಶಿ ಸಂತೋಷ್, ಕಳೆದ ಶನಿವಾರ ರಾತ್ರಿ ಕೇಶವ ಶಿಲ್ಪದಲ್ಲಿ ರಾಜ್ಯ ಮುಖಂಡರ ಸಭೆ ನಡೆಸಿ, ಅವಿರೋಧ ಆಯ್ಕೆಗೆ ಕಸರತ್ತು ನಡೆಸುವಂತೆ ಸೂಚಿಸಿದ್ದಾರೆ. ಇನ್ನು ಜೆಡಿಎಸ್‌ನಲ್ಲಿ ಆ ಪಕ್ಷದ ಏಳು ಶಾಸಕರು ಬಹಿರಂಗವಾಗಿಯೇ ತಮ್ಮ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಕೆಲವು ಶಾಸಕರು ಬಿಜೆಪಿಯ ಬಾಗಿಲು ತಟ್ಟಿದ್ದಾರೆ. ಅಂತಹವರು ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಕೈಕೊಡಬಹುದೆಂಬ ಭಯ ಅವರನ್ನು ಕಾಡಿದೆ.

 

Translate »