ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಮೂರು ದಿನಗಳ `ಟೆಕ್‌ಭಾರತ್’ ಕೃಷಿ, ಆಹಾರ ತಂತ್ರಜ್ಞಾನ ಮೇಳ ಆರಂಭ
ಮೈಸೂರು

ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಮೂರು ದಿನಗಳ `ಟೆಕ್‌ಭಾರತ್’ ಕೃಷಿ, ಆಹಾರ ತಂತ್ರಜ್ಞಾನ ಮೇಳ ಆರಂಭ

May 20, 2022

ದೇಶದ ವಿವಿಧ ಭಾಗಗಳ ಉದ್ಯಮಿಗಳಿಂದ ೧೦೦ಕ್ಕೂ ಹೆಚ್ಚು ಮಳಿಗೆಗಳ ಬೃಹತ್ ವಸ್ತುಪ್ರದರ್ಶನಕ್ಕೂ ಚಾಲನೆ
ಕೃಷಿಗೆ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲು
ಮೈಸೂರು, ಮೇ ೧೯ (ಆರ್‌ಕೆ)-ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಮೂರು ದಿನಗಳ `ಟೆಕ್‌ಭಾರತ್ -೨೦೨೨’ ಕೃಷಿ, ಆಹಾರ ಸಂಸ್ಕರಣೆ ಮೇಳ ಹಾಗೂ ವಸ್ತು ಪ್ರದರ್ಶನ ಇಂದಿನಿAದ ಆರಂಭವಾಯಿತು.

ಲಘು ಉದ್ಯೋಗ ಭಾರತಿ, ಐಎಂಎಸ್ ಫೌಂಡೇಷನ್ ಮತ್ತು ಸಿಎಫ್‌ಟಿಆರ್‌ಐ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಟೆಕ್‌ಭಾರತ್-೨೦೨೨ ೩ನೇ ಆವೃತ್ತಿಯ ಮೇಳವನ್ನು ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಸಚಿವ ಕೈಲಾಶ ಚೌಧರಿ ಗುರುವಾರ ಬೆಳಗ್ಗೆ ಉದ್ಘಾಟಿಸಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ್, ಕೇಂದ್ರ ವಾಣ ಜ್ಯ ಇಲಾಖೆ ಐಎಇಡಿಎ ಅಧ್ಯಕ್ಷ ಡಾ.ಎಂ.ಅAಗಮುತ್ತು, ಇನ್ ಫೋಸಿಸ್ ಮಾಜಿ ಸಿಇಓ ಕ್ರಿಸ್ ಗೋಪಾಲ ಕೃಷ್ಣನ್, ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣಸಿಂಗ್, ಲಘು ಉದ್ಯೋಗ ಭಾರತಿ ರಾಜ್ಯ ಅಧ್ಯಕ್ಷ ಸಚಿನ್ ಬಿ.ಸಬ್ನಿಸ್, ಉಪಾಧ್ಯಕ್ಷೆ ಛಾಯಾ ನಂಜಪ್ಪ, ಕಾರ್ಯ ದರ್ಶಿ ಭೋಜರಾಜ್, ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಅಗ್ರಿಟೆಕ್, ಫುಡ್‌ಟೆಕ್ ಮತ್ತು ಫುಡ್ ಪ್ರೊಸೆಸ್ಸಿಂಗ್ ಟೆಕ್ನಾಲಜಿ ಕುರಿತಂತೆ ಮೂರು ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿ ಗಳಲ್ಲಿ ದೇಶ-ವಿದೇಶಗಳ ಸಂಶೋಧಕರು ತಂತ್ರಜ್ಞರು, ಪ್ರಗತಿಪರ ರೈತರು, ಆಹಾರ ಉತ್ಪಾದನಾ ಕ್ಷೇತ್ರದ ಉದ್ಯಮಿಗಳು ಭಾಗ ವಹಿಸಿ ಚಿಂತನ ಮಂಥನ ನಡೆಸುವರು.

ಖಿಡಿಚಿಟಿsಜಿoಡಿmiಟಿg Iಟಿಜiಚಿ’s ಈooಜ ಣeಛಿh ಚಿಟಿಜ ಚಿgಡಿoಟಿomiಛಿ ಟಚಿಟಿಜsಛಿಚಿ ಠಿe ಧ್ಯೇಯದೊಂದಿಗೆ ಸಿಎಫ್‌ಟಿಆರ್‌ಐ ಆವರಣದಲ್ಲಿ ಏರ್ಪಡಿಸಿರುವ ವಸ್ತುಪ್ರದ ರ್ಶನದಲ್ಲಿ ದೇಶದ ವಿವಿಧ ಭಾಗಗಳ ಉದ್ಯಮ, ಕೈಗಾರಿಕೆ, ತಂತ್ರಜ್ಞಾನ ಅಭಿ ವೃದ್ಧಿ ಕಂಪನಿಗಳ ೧೦೦ಕ್ಕೂ ಹೆಚ್ಚು ಮಳಿಗೆ ಗಳನ್ನು ತೆರೆಯಲಾಗಿದ್ದು, ಕೃಷಿ ಮತ್ತು ಆಹಾರ ತಂತ್ರಜ್ಞಾನ ಕುರಿತು ಪ್ರಾತ್ಯಕ್ಷಿಕೆ ನಡೆಸ ಲಾಗುತ್ತಿದೆ. ಸಿಎಫ್‌ಟಿಆರ್‌ಐ ಅಭಿವೃದ್ಧಿ ಪಡಿಸಿದ ರಾಗಿ ಆಧಾರಿತ ಬ್ರೆಡ್ ತಯಾ ರಿಕೆ (Iಟಿsಣಚಿಟಿಣ ಃeveಡಿಚಿge mix ಜಿಡಿom mಚಿಟಣeಜ ಡಿಚಿgi) ಉತ್ಪನ್ನವನ್ನು ಸಚಿವ ಬಿ.ಸಿ.ಪಾಟೀಲ್ ಬಿಡುಗಡೆ ಮಾಡಿ ದರು. ಸಂಸ್ಥೆ ಸಿದ್ಧಪಡಿಸಿರುವ ಮೊಬೈಲ್ ಫುಡ್ ಪ್ರೊಸೆಸ್ಸಿಂಗ್ ಮತ್ತು ಡೆಮಾನ್ ಸ್ಟೆçÃಷನ್ ಘಟಕವನ್ನು ಕೇಂದ್ರ ಸಚಿವ ಕೈಲಾಶ್ ಚೌಧರಿ ಉದ್ಘಾಟಿಸಿದರು.

ಸಿಎಫ್‌ಟಿಆರ್‌ಐನಿಂದ ಅಭಿವೃದ್ಧಿಪಡಿಸಿ ಉಚಿತವಾಗಿ ಸಮರ್ಪಣೆ ಮಾಡಿರುವ ೨೨ ತಂತ್ರಜ್ಞಾನಗಳ ಮಾಹಿತಿ ಹೊಂದಿರುವ ಪುಸ್ತಕವನ್ನು ಬಿಡುಗಡೆ ಮಾಡಿದರು. ಆಮ್ಲಕ್ಯಾಂಡಿ, ಸೆರಿಯಲ್ ಫ್ಲೆಕ್ಸ್, ರೈಸ್, ಚಿಕನ್ ಸೂಪ್ ಮಿಕ್ಸ್, ಕಾಂಪೋಸಿಟಿವ್ ರಾಗಿ ಮಿಕ್ಸ್, ಕ್ಯೂರಿಂಗ್ ಆಫ್ ನ್ಯೂ ಪ್ಯಾಡಿ, ಫ್ರೂಟ್ ಸ್ಟೆçಡ್, ಜಿಂಜರ್ ಡೀಹೈ ಡ್ರೇಷನ್, ಗ್ರೀನ್ ಚಿಲ್ಲಿಸಾಸ್, ಪಾರ್ ಬಾಯ್ಲಿಂಗ್ ಆಫ್ ಪ್ಯಾಡಿ, ಪ್ರೋಟೀನ್ ಬನ್ಸ್, ರೆಡಿಮಿಕ್ಸ್ ಇಡ್ಲಿ, ರೆಡಿಮಿಕ್ಸ್ ಸಾಂಬಾರ್, ರೀಟೇಲ್ ಪ್ಯಾಕ್‌ಗಳಲ್ಲಿ ದೋಸೆ, ರಿಫೈನ್ಡ್ ಮಿಲೆಟ್ ಫ್ಲೋರ್, ರೈಸ್ ಮಿಲ್ಕ್ ಮಿಕ್ಸ್, ಟರ್ಮರಿಕ್ ಕ್ಯೂರಿಂಗ್, ಲೀಫ್ ಕಫ್ ಮೆಷಿನ್, ಹ್ಯಾಂಡ್ ಆಪರೇಟಿವ್ ಪಾಪಡ್ ಪ್ರೆಸ್, ಪೆಡಲ್ ಆಪರೇಟೆಡ್ ಮಿಲೆಟ್ ಡೆಹುಲ್ಲರ್ ತಂತ್ರಜ್ಞಾನಗಳನ್ನು ಸಂಸ್ಥೆಯು ಉಚಿತವಾಗಿ ನೀಡುತ್ತಿದ್ದು, ಸಿಎಫ್‌ಟಿ ಆರ್‌ಐ ವೆಬ್‌ಸೈಟ್‌ನಿಂದ ಅವುಗಳನ್ನು ಸಾರ್ವ ಜನಿಕರು ಡೌನ್‌ಲೋಡ್ ಮಾಡಿಕೊಂಡು ಉದ್ದಿಮೆ ಆರಂಭಿಸಬಹುದಾಗಿದೆ. ಈ ವೇಳೆ ಡ್ರೋನ್ ಆಧಾರಿತ ತಂತ್ರಜ್ಞಾನ ಕುರಿತಂತೆ ಪ್ರಾತ್ಯಕ್ಷಿಕೆ ಮಾಡಲಾಗುತ್ತಿದೆ. ಬೆಳಗ್ಗೆ ೧೦ ರಿಂದ ಸಂಜೆ ೬ ಗಂಟೆಯವರೆಗೆ ಸಾರ್ವ ಜನಿಕರು, ಯುವ ಉದ್ಯಮಿಗಳು, ವೀಕ್ಷಿಸಲು ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶವಿರುತ್ತದೆ. ಕೃಷಿ, ಆಹಾರ ಕ್ಷೇತ್ರಗಳಲ್ಲಿ ನಿರತರಾದ ಉತ್ಸಾಹಿ ನವ ಉದ್ಯಮಿ ಆಕಾಂಕ್ಷಿಗಳು, ಸಂಶೋಧ ಕರು, ತಂತ್ರಜ್ಞರು ದೇಶ ವಿದೇಶಗಳಿಂದ ಟೆಕ್‌ಭಾರತ್ ಮೇಳದಲ್ಲಿ ಭಾಗವಹಿಸಿದ್ದಾರೆ.

 

Translate »