ರಾಜ್ಯಸಭೆ, ಪರಿಷತ್‌ಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಡಿಕೆಶಿ, ಸಿದ್ದರಾಮಯ್ಯಜಂಗೀಕುಸ್ತಿ
ಮೈಸೂರು

ರಾಜ್ಯಸಭೆ, ಪರಿಷತ್‌ಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಡಿಕೆಶಿ, ಸಿದ್ದರಾಮಯ್ಯಜಂಗೀಕುಸ್ತಿ

May 20, 2022

ಬೆAಗಳೂರು, ಮೇ ೧೯ (ಕೆಎಂಶಿ)-ರಾಜ್ಯಸಭೆ ಮತ್ತು ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ ನಡುವೆ ಜಂಗೀಕುಸ್ತಿ ನಡೆದಿದೆ.

ಇದರಿಂದ ನಿನ್ನೆ ನಡೆಯಬೇಕಿದ್ದ ಸಭೆಯು ಮುಂದೂಡಲ್ಪಟ್ಟಿದೆ. ತಮ್ಮ ತಮ್ಮ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ಪಟ್ಟು ಹಿಡಿದಿರುವು ದರಿಂದ ಅಭ್ಯರ್ಥಿಗಳ ಆಯ್ಕೆ ಗೊಂದಲಕ್ಕೆ ಬಿದ್ದಿದೆ. ಈ ಮಧ್ಯೆ ಸಿದ್ದರಾಮಯ್ಯ ತಮ್ಮ ೨ ದಿನಗಳ ಪ್ರವಾಸ ರದ್ದುಗೊಳಿಸಿ, ಬೆಂಗಳೂರಿನಲ್ಲೇ ಉಳಿದು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದ್ದಾರೆ. ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಎಸ್.ಆರ್. ಪಾಟೀಲ್‌ಗೆ ಪರಿಷತ್ತಿನ ಅಭ್ಯರ್ಥಿ ಮಾಡಲು ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಆದರೆ ಸಿದ್ದರಾಮಯ್ಯ ಬಿಲ್‌ಕುಲ್ ಇದಕ್ಕೆ ಒಪುö್ಪತ್ತಿಲ್ಲ. ಅವರು ಪಕ್ಷವನ್ನು ಬದಿಗಿಟ್ಟು, ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ಸೇರಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇಂತಹವರಿಗೆ ಟಿಕೆಟ್ ಬೇಡ ಎಂದು ಸಿದ್ದರಾಮಯ್ಯ ವಾದ ಮಾಡಿದ್ದಾರೆ. ಎಸ್.ಆರ್.ಪಾಟೀಲರಿಗೆ ನಾವು ಅನ್ಯಾಯ ಮಾಡಿದ್ದೇವೆ. ಪ್ರತಿಪಕ್ಷದ ನಾಯಕರಾಗಿದ್ದವರು, ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಂತಹವರಿಗೆ ಅವಕಾಶ ನೀಡಬೇಕೆನ್ನುವುದು ಶಿವಕುಮಾರ್ ವಾದ. ಅಷ್ಟೇ ಅಲ್ಲ, ಆಸ್ಕರ್ ಫರ್ನಾಂಡೀಸ್ ಮಗಳಿಗೂ ಈ ಬಾರಿ ಅವಕಾಶ ಕಲ್ಪಿಸ ಬೇಕೆಂದು ಶಿವಕುಮಾರ್ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಒಂದು ಟಿಕೆಟ್ ನೀಡಬೇಕೆಂಬುದು ಸಿದ್ದರಾಮಯ್ಯ ಅವರ ವಾದವಾಗಿದೆ. ಪ್ರತಿ ಬಾರಿ ಮುಸ್ಲಿಂರಿಗೆ ನೀಡುತ್ತಿದ್ದು, ಕ್ರಿಶ್ಚಿಯನರಿಗೆ ಅವಕಾಶ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಬಾರಿ ಆ ಸಮುದಾಯಕ್ಕೆ ನೀಡಬೇಕೆಂಬುದು ಶಿವಕುಮಾರ್ ವಾದ. ವಿಧಾನಸಭೆಯ ಕಾಂಗ್ರೆಸ್ ಸಂಖ್ಯಾಬಲದ ಮೇಲೆ ಪರಿಷತ್ತಿಗೆ ಎರಡು, ರಾಜ್ಯಸಭೆಗೆ ಒಂದು ಸ್ಥಾನವನ್ನು ಗೆಲ್ಲುವ ಅವಕಾಶ ಪಕ್ಷಕ್ಕಿದೆ. ಸುಲಭವಾಗಿ ಗೆಲ್ಲಬಹುದಾದ ಸ್ಥಾನಗಳನ್ನು ತಮ್ಮವರಿಗೆ ಕೊಡಿಸಲು ಉಭಯ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ಇದರಿಂದ ಆಕಾಂಕ್ಷಿಗಳೇ ಆಕಾಶ ನೋಡುವಂತಾಗಿದೆ. ಆಕಾಂಕ್ಷಿಗಳAತೂ ಯಾರ ಮನವೊಲಿಸಿದರೆ ಅವಕಾಶ ದೊರೆಯಬಹುದೆಂದು ಬೆಳಗ್ಗೆ ಒಬ್ಬರ ಮನೆಗೆ ಹೋದರೆ, ಸಂಜೆ ಇನ್ನೊಬ್ಬರ ಮನೆಗೆ ಹೋಗುವುದು ಸಾಮಾನ್ಯವಾಗಿದೆ.

Translate »