ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಮೇ.ನಿರಾಣ ಶುರ‍್ಸ್ಗೆ ೪೦ ವರ್ಷಕ್ಕೆ ಗುತ್ತಿಗೆ
ಮೈಸೂರು

ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಮೇ.ನಿರಾಣ ಶುರ‍್ಸ್ಗೆ ೪೦ ವರ್ಷಕ್ಕೆ ಗುತ್ತಿಗೆ

May 20, 2022

೧೨೦ ಕೋಟಿ ರೂ. ಗುತ್ತಿಗೆ ಮೊತ್ತ

ರೈತರ ಕಬ್ಬಿಗೆ ಸಕಾಲದಲ್ಲಿ ಬಿಲ್ ಪಾವತಿ ಷರತ್ತು
ಮೈಸೂರು, ಮೇ ೧೯-ಕೆ.ಆರ್.ನಗರ ತಾಲೂಕು ಚುಂಚನಕಟ್ಟೆಯಲ್ಲಿ ರುವ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಮೇ.ನಿರಾಣ ಶುರ‍್ಸ್ಗೆ ೪೦ ವರ್ಷ ಗುತ್ತಿಗೆಗೆ ನೀಡಲು ರಾಜ್ಯ ಸರ್ಕಾರ ಅನುಮೋದಿಸಿದ್ದು, ಗುತ್ತಿಗೆ ಮೊತ್ತವನ್ನು ೧೨೦ ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ.

ಗುತ್ತಿಗೆ ನೀಡುವ ಕಾರ್ಯಾದೇಶವನ್ನು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ನೀಡತಕ್ಕದು. ಗುತ್ತಿಗೆ ಒಪ್ಪಂದ ಏರ್ಪಟ್ಟ ಮೂರು ತಿಂಗಳ ಒಳಗಾಗಿ ಗುತ್ತಿಗೆದಾರರನ್ನು ಸಂಬAಧಪಟ್ಟ ನೋಂದಣ ಪ್ರಾಧಿ ಕಾರದಲ್ಲಿ ನೋಂದಾಯಿಸತಕ್ಕದು. ಭದ್ರತಾ ಠೇವಣ ಮೊತ್ತ ೫೦ ಲಕ್ಷ ರೂ.ಗಳನ್ನು ನಿರಾಣ ಶುರ‍್ಸ್ನವರು ಕಾರ್ಖಾನೆಗೆ ಪಾವತಿಸಿದ ನಂತರ ಗುತ್ತಿಗೆ ಕರಾರು ಒಪ್ಪಂದವನ್ನು ಮಾಡಿಕೊಳ್ಳತಕ್ಕದು. ಗುತ್ತಿಗೆದಾರರು ಮುಂಗಡ ಹಣ ೨.೫೦ ಕೋಟಿಗಳನ್ನು ಕರಾರಿನ ಪ್ರಕಾರ ಪಾವತಿಸತಕ್ಕದು. ಭದ್ರತಾ ಠೇವಣ ಹಣ ೫೦ ಲಕ್ಷ ರೂ. ಮುಂಗಡ ಹಣ ೨.೫೦ ಕೋಟಿ ರೂ. ಹಾಗೂ ವಾರ್ಷಿಕ ಗುತ್ತಿಗೆ ಹಣವನ್ನು ವ್ಯವಸ್ಥಾಪಕ ನಿರ್ದೇಶಕರು, ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಹೆಸರಲ್ಲಿ ಜಂಟಿ ಖಾತೆಯನ್ನು ತೆರೆ ಯುವುದು. ಮೈಸೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಪಾವತಿಸಬೇಕಾದ ಸಾಲವನ್ನು ಏಕ ತೀರುವಳಿ ಮೂಲಕ ಮೊದಲಿಗೆ ಪಾವತಿಸುವುದು. ತದ ನಂತರ ಸರ್ಕಾರದ ಸಾಲ, ಹಣಕಾಸು ಸಂಸ್ಥೆಗಳು ಮತ್ತು ಇತರ ಶಾಸನಬದ್ಧ ಪಾವತಿಗಳಿಗಾಗಿ ಆದ್ಯತೆಗನುಸಾರ ಹಂಚಿಕೆ ಮಾಡಲು ಕ್ರಮ ವಹಿಸತಕ್ಕದು. ಗುತ್ತಿಗೆದಾರರು ೨೦೨೨-೨೩ನೇ ಹಂಗಾಮಿನಿAದಲೇ ಕಬ್ಬು ಅರೆಯುವ ಕಾರ್ಯವನ್ನು ಪ್ರಾರಂಭಿಸಬೇಕು. ಗುತ್ತಿಗೆ ಅವಧಿಯಲ್ಲಿ ಕೇಂದ್ರ ಸರ್ಕಾರ ನಿಗದಿ ಪಡಿಸಬಹುದಾದ ಎಫ್‌ಆರ್‌ಪಿಯಂತೆ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸ ಬಹುದಾದ ರಾಜ್ಯ ಸಲಹಾ ಬೆಲೆಯಂತೆ ರೈತರ ಕಬ್ಬಿಗೆ ಬಿಲ್ಲನ್ನು ಸಕಾಲದಲ್ಲಿ ಪಾವತಿಸಬೇಕು. ೨೦೬೧-೬೨ಕ್ಕೆ ಗುತ್ತಿಗೆ ಅವಧಿ ಮುಗಿದ ನಂತರ ಯಾವುದೇ ರೀತಿಯ ಹೊಣೆಗಾರಿಕೆ ಹಾಗೂ ಋಣಭಾರಗಳಿಲ್ಲದೇ ಕಾರ್ಖಾನೆಯನ್ನು ಆಡಳಿತ ಮಂಡಳಿಗೆ ವರ್ಗಾಯಿಸತಕ್ಕದು ಎಂಬ ಷರತ್ತುಗಳೊಂದಿಗೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ನಿರಾಣ ಶುರ‍್ಸ್ಗೆ ಗುತ್ತಿಗೆ ನೀಡುವ ಆದೇಶವನ್ನು ರಾಜ್ಯ ಸರ್ಕಾರದ ವಾಣ ಜ್ಯ ಮತ್ತು ಕೈಗಾರಿಕಾ ಇಲಾಖೆ (ಸಕ್ಕರೆ) ಅಧೀನ ಕಾರ್ಯದರ್ಶಿ ಸುಪ್ರಿಯಾ ಪತ್ತಾರ ಅವರು ಮೇ ೧೭ರಂದು ಆದೇಶ ಹೊರಡಿಸಿದ್ದಾರೆ.

Translate »