ಬ್ಯಾಗ್ ಖರೀದಿ, ಈಜುಕೊಳ, ಜಿಮ್ ನಿರ್ಮಾಣ, ಕೊರೊನಾ ಸಾವಿನ ತಪ್ಪು ಮಾಹಿತಿ ಸಂಬAಧ ರೋಹಿಣ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ
ಮೈಸೂರು

ಬ್ಯಾಗ್ ಖರೀದಿ, ಈಜುಕೊಳ, ಜಿಮ್ ನಿರ್ಮಾಣ, ಕೊರೊನಾ ಸಾವಿನ ತಪ್ಪು ಮಾಹಿತಿ ಸಂಬAಧ ರೋಹಿಣ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

May 20, 2022

ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಂ ತನಿಖಾಧಿಕಾರಿ
ಬೆಂಗಳೂರು,ಮೇ ೧೯-ಮಾರುಕಟ್ಟೆ ದರ ಕ್ಕಿಂತ ಹೆಚ್ಚಿನ ದರದಲ್ಲಿ ಬಟ್ಟೆ ಬ್ಯಾಗ್ ಖರೀದಿ, ಜಿಲ್ಲಾಧಿ ಕಾರಿಗಳ ಅಧಿಕೃತ ನಿವಾಸ ವಾದ ಪಾರಂಪರಿಕ ಕಟ್ಟಡ ವ್ಯಾಪ್ತಿಯಲ್ಲಿ ಈಜುಕೊಳ, ಜಿಮ್ ನಿರ್ಮಾಣ ಹಾಗೂ ಕೊರೊನಾ ಸೋಂಕಿನಿAದ ಮೃತಪಟ್ಟವರ ಬಗ್ಗೆ ತಪ್ಪು ಮಾಹಿತಿ ನೀಡಿರುವ ಆರೋಪಗಳ ಮೇರೆಗೆ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣ ಸಿಂಧೂರಿ ವಿರುದ್ಧ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷರಾದ ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಂ ಅವರನ್ನು ತನಿ ಖಾಧಿಕಾರಿಯಾಗಿ ನೇಮಿಸಲಾಗಿದೆ.

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಿಗೆ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಖರೀದಿ ಸುವ ಸಂಬAಧ ೨೦೨೧ರ ಏಪ್ರಿಲ್ ೯ ರಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಾರ್ಯಾದೇಶ ಹೊರಡಿಸಲಾಗಿತ್ತು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಬಟ್ಟೆ ಬ್ಯಾಗ್ ಗಳ ದರಪಟ್ಟಿ ಪಡೆದಿದ್ದು, ಅದರಂತೆ ೪ ಕೆಜಿ ಮತ್ತು ೧೦ ಕೆಜಿ ಸಾಮರ್ಥ್ಯದ ಬಟ್ಟೆ ಬ್ಯಾಗ್‌ವೊಂದಕ್ಕೆ ಜಿಎಸ್‌ಟಿ ಸೇರಿ ೫೨ ರೂ. ಗಳಂತೆ ೧೪,೭೧,೪೫೮ ಬ್ಯಾಗ್ ಖರೀದಿಸಲು ರೋಹಿಣ ಸಿಂಧೂರಿ ಅವರು ಅನು ಮೋದನೆ ನೀಡಿದ್ದರು. ಸದರಿ ಬಟ್ಟೆ ಬ್ಯಾಗ್ ವಿತರಣೆ ಸಂಬAಧ ಮೈಸೂರು ನಗರಪಾಲಿಕೆ ಜಿಪಂ ವ್ಯಾಪ್ತಿಗೆ ಒಳಪಡುವ ಗ್ರಾಪಂ ಹಾಗೂ ಪುರಸಭೆಗಳ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಧವಾದ ಅನುಮೋದನೆ ಪಡೆ ಯದೇ ಈ ಸಂಸ್ಥೆಗಳಲ್ಲಿನ ಜನಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶ ದಿಂದ ರೋಹಿಣ ಸಿಂಧೂರಿ ಈ ಕಾರ್ಯಾ ದೇಶ ಹೊರಡಿಸಿದ್ದರು. ಮುಕ್ತ ಮಾರುಕಟ್ಟೆಯಲ್ಲಿ ೧೦ರಿಂದ ೧೩ ರೂ.ಗಳಿಗೆ ಚಿಲ್ಲರೆ ಮಾರಾಟದಲ್ಲಿ ದೊರೆಯುವ ಬ್ಯಾಗ್‌ಗಳಿಗೆ ಸಗಟು ದರದಲ್ಲಿ ೫೨ ರೂ. ನಿಗದಿಪಡಿಸಿ ಅನುಮೋದನೆ ನೀಡಿರು ವುದು ಸಾರ್ವಜನಿಕ ಹಣದ ಅಪವ್ಯಯವಾಗಿದೆ ಎಂದು ಕಾಗದ ಪತ್ರಗಳ ಸಮಿತಿ ಅಧ್ಯಕ್ಷರೂ ಆದ ಶಾಸಕ ಸಾ.ರಾ.ಮಹೇಶ್ ೨೦೨೧ರ ಸೆಪ್ಟೆಂಬರ್ ೩ರಂದು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಪಾರಂಪರಿಕ ಕಟ್ಟಡವಾದ ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಜಲಸನ್ನಿಧಿ ವ್ಯಾಪ್ತಿಯಲ್ಲಿ ಪಾರಂಪರಿಕ ಇಲಾಖೆಯ ಅನುಮತಿ ಇಲ್ಲದೇ ೫೦ ಲಕ್ಷ ರೂ. ವೆಚ್ಚದಲ್ಲಿ ಒಳಾಂ ಗಣ ಈಜುಕೊಳ ಮತ್ತು ಜಿಮ್, ೧೬.೩೫ ಲಕ್ಷ ರೂ. ವೆಚ್ಚದಲ್ಲಿ ಕಟ್ಟಡದ ನೆಲಹಾಸಿಗೆ, ವೆಟ್ರಿಫೈಡ್ ಟೈಲ್ಸ್ ಅಳವಡಿಸಿ ಹೆರಿಟೇಜ್ ರೆವುಲೇಷನ್ ಉಲ್ಲಂ ಘನೆ ಮಾಡಲಾಗಿದೆ ಎಂದು ಸಾ.ರಾ.ಮಹೇಶ್ ೨೦೨೧ರ ಜುಲೈ ೩೦ರಂದು ದೂರು ಸಲ್ಲಿಸಿ ದುಂದು ವೆಚ್ಚ ಮಾಡಿ ರುವ ಕುರಿತು ವಿಚಾರಣೆ ನಡೆಸಿ ನವೀಕರಣಕ್ಕೆ ವೆಚ್ಚ ಮಾಡಿರುವ ಹಣವನ್ನು ರೋಹಿಣ ಸಿಂಧೂರಿ ಅವರಿಂದ ವಸೂಲಿ ಮಾಡಬೇಕು ಎಂದು ಕೋರಿದ್ದರು.

೨೦೨೧ರ ಮೇ ತಿಂಗಳಿನಲ್ಲಿ ಮುಕ್ತಿಧಾಮದ ಮಾಹಿತಿ ಪ್ರಕಾರ ಕೊರೊನಾ ಸೋಂಕಿನಿAದ ಮೃತ ಪಟ್ಟವರ ಸಂಖ್ಯೆ ೯೬೯ ಆಗಿದ್ದು, ಅಂದಿನ ಜಿಲ್ಲಾಧಿ ಕಾರಿ ರೋಹಿಣ ಸಿಂಧೂರಿ ಸರ್ಕಾರಕ್ಕೆ ಹಾಗೂ ಜಿಲ್ಲೆಯ ಜನತೆಗೆ ಸೋಂಕಿನಿAದ ಮೃತಪಟ್ಟವರ ಸಂಖ್ಯೆ ೨೩೮ ಎಂದು ತಪ್ಪಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ೨೪ ಕೊರೊನಾ ಸೋಂಕಿತರ ಸಾವಿಗೆ ಕಾರಣಕರ್ತರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಮೈಸೂರಿನ ಮಾಜಿ ಉಪ ಮೇಯರ್ ಶೈಲೆಂದ್ರ ಅವರು ೨೦೨೧ರ ಜೂನ್ ೧೫ರಂದು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ಈ ಎಲ್ಲಾ ಪ್ರಕರಣಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಆರೋಪಗಳ ಸತ್ಯಾಂಶಗಳ ಬಗ್ಗೆ ನಿಯಾ ಮಾನುಸಾರ ಪರಿಶೀಲಿಸಿ ವಿವರವಾದ ವರದಿಯನ್ನು ೩೦ ದಿನಗಳ ಒಳಗಾಗಿ ಸಲ್ಲಿಸುವಂತೆ ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಂ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಜೇಮ್ಸ್ ತರಕನ್ ಅವರು ಮೇ ೧೭ರಂದು ಆದೇಶ ಹೊರಡಿಸಿದ್ದಾರೆ.

 

Translate »