900 ಎಂಎಲ್‍ಡಿ ಸಾಮಥ್ರ್ಯಕ್ಕೆ ಪೂರಕವಾಗಿ ಮುಂದುವರೆದ ಕಾಮಗಾರಿ
ಮೈಸೂರು

900 ಎಂಎಲ್‍ಡಿ ಸಾಮಥ್ರ್ಯಕ್ಕೆ ಪೂರಕವಾಗಿ ಮುಂದುವರೆದ ಕಾಮಗಾರಿ

January 28, 2022

ಮೈಸೂರು, ಜ.27(ಪಿಎಂ)-ಮೈಸೂರು ನಗರ ಮತ್ತು ಸುತ್ತ ಮುತ್ತ 92 ಗ್ರಾಮಗಳಿಗೆ ಶಾಶ್ವತ ಕಾವೇರಿ ಕುಡಿಯುವ ನೀರು ಪೂರೈಸುವ ಹಳೇ ಉಂಡುವಾಡಿ ಯೋಜನೆಯ ಕಾಮಗಾರಿ ಯನ್ನು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಸಲಹೆ ಮೇರೆಗೆ 900 ಎಂಎಲ್‍ಡಿ (ಮಿಲಿಯನ್ ಲೀಟರ್ ಪರ್ ಡೇ) ಸಾಮಥ್ರ್ಯಕ್ಕೆ ಪೂರಕವಾಗಿ ಮುಂದುವರೆಸಲಾಗಿದೆ.

ಹಳೇ ಉಂಡುವಾಡಿ ಗ್ರಾಮದ ಬಳಿ ಕೆಆರ್‍ಎಸ್ ಹಿನ್ನೀರಿ ನಲ್ಲಿ ಸಗಟು ನೀರು ಎತ್ತುವ ಮೂಲಸ್ಥಾವರದ ಕಾಮಗಾರಿ ಸಂಬಂಧ ಜಾಕ್‍ವೆಲ್ ಮತ್ತು ಸ್ಟಿಲ್ಲಿಂಗ್ ಬೇಸಿನ್‍ಗಳನ್ನು 300 ಎಂಎಲ್‍ಡಿ ಸಾಮಥ್ರ್ಯಕ್ಕೆ ಮತ್ತು ಡ್ರಾಟ್‍ಕೆನಾಲ್ ಅನ್ನು 900 ಎಂಎಲ್‍ಡಿ ಸಾಮಥ್ರ್ಯಕ್ಕೆ ನಿರ್ಮಿಸಲು ಉದ್ದೇಶಿಸ ಲಾಗಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವತಿಯಿಂದ ಸದರಿ ಉದ್ದೇಶಿತ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನ ವಿನ್ಯಾಸ ಮತ್ತು ನಕ್ಷೆಗಳನ್ನು ಪರಿಣಿತರಿಂದ ಪರಿಶೀಲಿಸಿಕೊಳ್ಳುವ ಉದ್ದೇಶದಿಂದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್‍ಗೆ ಸಲ್ಲಿಸಲಾಗಿತ್ತು.

ಮಂಡಳಿಯಿಂದ ಸಲ್ಲಿಸಿದ ವಿನ್ಯಾಸ ಮತ್ತು ನಕ್ಷೆ ಗಳನ್ನು ಪರಿಶೀಲಿಸಿದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ಮುಂದಿನ ಹಂತಗಳಲ್ಲಿ ಜಾಕ್‍ವೆಲ್ ಮತ್ತು ಸ್ಟಿಲ್ಲಿಂಗ್ ಬೇಸಿನ್‍ಗಳನ್ನು ನಿರ್ಮಿಸುವ ಸಮಯ ದಲ್ಲಿ ತಾತ್ಕಾಲಿಕವಾಗಿ ನೀರಿನ ತಡೆಗೋಡೆ ನಿರ್ಮಿ ಸಲು ತಗುಲುವ ವೆಚ್ಚವು ಮರುಕಳಿಸದಂತೆ ತಡೆ ಯಲು ಹಾಗೂ ಮುಂದೆ ನಿರ್ಮಾಣ ಸಮಯದಲ್ಲಿ ಹಾಲಿ ಚಾಲನೆಯಲ್ಲಿದ್ದ ನೀರು ಸರಬರಾಜು ಸ್ಥಗಿತ ಗೊಳಿಸುವು ದನ್ನು ತಪ್ಪಿಸಲು ಪ್ರಸ್ತುತ ನಿರ್ಮಾಣ ಹಂತದಲ್ಲೇ ಜಾಕ್ ವೆಲ್, ಸ್ಟಿಲ್ಲಿಂಗ್ ಬೇಸಿನ್ ಮತ್ತು ಡ್ರಾಟ್‍ಕೆನಾಲ್ ಗಳನ್ನು ಅಂತಿಮ ಹಂತದ ಸಾಮಥ್ರ್ಯ 900 ಎಂಎಲ್‍ಡಿಗೆ ನಿರ್ಮಿಸುವುದು ಸೂಕ್ತ ಎಂದು ಸಲಹೆ ನೀಡಿತ್ತು.

ಜೊತೆಗೆ ಇದರಿಂದ ಆರ್ಥಿಕವಾಗಿಯೂ ಉಳಿತಾಯ ವಾಗಲಿದೆ ಎಂದು ಮಂಡಳಿ ಸಲ್ಲಿಸಿದ್ದ ವಿನ್ಯಾಸ ಮತ್ತು ನಕ್ಷೆಗಳನ್ನು ಅಂತಿಮಗೊಳಿಸಿತ್ತು. ಅದರಂತೆ, ಮೂಲಸ್ಥಾವ ರದ ಎಲ್ಲಾ ಕಾಂಪೋನೆಂಟ್‍ಗಳನ್ನು 900 ಎಂಎಲ್‍ಡಿ ಸಾಮಥ್ರ್ಯಕ್ಕೆ ಪೂರಕವಾಗಿ ಕಾಮಗಾರಿ ಮುಂದುವರೆಸ ಲಾಗಿದೆ. ಹಳೇ ಉಂಡವಾಡಿ ಗ್ರಾಮದ ಬಳಿ ಕೆಆರ್‍ಎಸ್ ಹಿನ್ನೀರಿನಲ್ಲಿ ಸಗಟು ನೀರು ಎತ್ತುವ ಮೂಲಸ್ಥಾವರ ದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಜಿ.ಟಿ. ದೇವೇಗೌಡ ಈ ವಿಷಯ ತಿಳಿಸಿದರು.

1ನೇ ಹಂತದಲ್ಲಿ 150 ಎಂಎಲ್‍ಡಿ: ಮೊದಲ ಹಂತ ವಾಗಿ 150 ಎಂಎಲ್‍ಡಿ ಸಾಮಥ್ರ್ಯಕ್ಕೆ ಯೋಜನೆ ಯನ್ನು ಅನುಷ್ಠಾನ ಮಾಡುತ್ತಿದ್ದು, ನಂತರದ ದಿನ ಗಳಲ್ಲಿ ಬೇಡಿಕೆಗೆ ಅನುಗುಣವಾಗಿ 900 ಎಂಎಲ್‍ಡಿ ಸಾಮಥ್ರ್ಯದವರೆಗೆ ವಿಸ್ತರಿಸಬಹುದು. ಈ ಯೋಜ ನೆಯ ಮೂಲ ಅಂದಾಜನ್ನು 545 ಕೋಟಿ ರೂ.ಗೆ ತಯಾರಿಸಲಾಗಿತ್ತು. ಆದರೆ 350 ಕೋಟಿ ರೂ.ಗೆ ಸೀಮಿತಗೊಳಿಸಿ, ಮೊದಲ ಹಂತಕ್ಕೆ ಸರ್ಕಾರದ ಅನು ಮೋದನೆ ದೊರೆತಿದೆ. ಯೋಜನೆಯ ಅಂದಾಜಿನಲ್ಲಿ ಅಗತ್ಯ ಭೂಮಿ ಖರೀದಿಸಲು 50 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ತಲಾ 25 ಕೋಟಿ ರೂ.ಗಳನ್ನು ಮೈಸೂರು ಮತ್ತು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಖಾತೆಗೆ ಜಮೆ ಮಾಡಲಾಗಿದೆ. ಅಗತ್ಯವಿರುವ ಬಾಕಿ ಮೊತ್ತ 50 ಕೋಟಿ ರೂ.ಗಳನ್ನು ಸರ್ಕಾರದ ವಿಶೇಷ ಅನುದಾನದಡಿ ಪಡೆಯಲು ಆರ್ಥಿಕ ಇಲಾಖೆಗೆ ಪ್ರಸ್ತಾ ವನೆ ಸಲ್ಲಿಸಿದ್ದು, ಇದಕ್ಕೆ ಅನುಮೋದನೆ ದೊರೆಯ ಬೇಕಿದೆ. ಅನುಮೋದಿತ ಅಂದಾಜಿನಂತೆ 3 ಹಂತಗಳಲ್ಲಿ ಒಟ್ಟು ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸ ಲಾಗಿದೆ ಎಂದು ಸಂಸದರು ಮತ್ತು ಶಾಸಕರು ತಿಳಿಸಿದರು.

ಜಲಶುದ್ಧೀಕರಣ ಘಟಕ: ಇದೇ ಯೋಜನೆಗೆ ಪೂರಕವಾಗಿ ನಿರ್ಮಿಸುತ್ತಿರುವ ಮೇಗಳಾಪುರ ಬಳಿಯ ಜಲಶುದ್ಧೀಕರಣಕ್ಕೂ ಸಂಸದರು ಮತ್ತು ಶಾಸಕರು ಭೇಟಿ ನೀಡಿ ಪರಿಶೀಲಿಸಿದರು. ಹಳೇ ಉಂಡವಾಡಿ ಬಳಿಯ ಮೂಲಸ್ಥಾವರದ ಸಗಟು ನೀರನ್ನು ಇಲ್ಲಿ ನಿರ್ಮಿ ಸುತ್ತಿರುವ ಜಲಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸ ಲಾಗುವುದು. ಅದಕ್ಕಾಗಿ ಇಲ್ಲಿ 150 ಎಂಎಲ್‍ಡಿ ಸಾಮ ಥ್ರ್ಯದ ಜಲಶುದ್ಧೀಕರಣ ಘಟಕ ಹಾಗೂ 300 ಎಂಎಲ್‍ಡಿ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಲಾಗುತ್ತಿದೆ ಎಂದು ಗುತ್ತಿಗೆದಾರ ಎ.ಕೆ.ನಂದ ತಿಳಿಸಿದರು. ಮಂಡಳಿಯ ಕಾರ್ಯಪಾಲಕ ಅಭಿಯಂತರ ವಿ.ಎಲ್.ಚಂದ್ರಪ್ಪ, ಎಇಇ ಆಸಿಫ್, ನಿರ್ದೇಶಕ ಸತೀಶ್, ಕಾಮಗಾರಿಯ ಗುತ್ತಿಗೆದಾರ ಎ.ಕೆ.ನಂದ ಮತ್ತಿತರರು ಹಾಜರಿದ್ದರು.

Translate »