ಸತತ ಅಧ್ಯಯನವೇ ಉತ್ತಮ  ಸಂಶೋಧನೆ, ವಿಚಾರಕ್ಕೆ ನಾಂದಿ
ಮೈಸೂರು

ಸತತ ಅಧ್ಯಯನವೇ ಉತ್ತಮ ಸಂಶೋಧನೆ, ವಿಚಾರಕ್ಕೆ ನಾಂದಿ

March 16, 2021

ಮೈಸೂರು,ಮಾ.15-ಸಂಶೋಧನೆಯಲ್ಲಿ ಓದು ಅತಿ ಮುಖ್ಯವಾದುದು. ಕನಿಷ್ಠ ನೂರು ಸಂಶೋಧನಾ ಪ್ರಬಂಧಗಳನ್ನು ಓದಿದಾಗ ಮಾತ್ರವೇ ಸಂಶೋಧನೆಯ ಬರಹ ಮತ್ತು ವಿಧಾನ ಗ್ರಹಿಸಲು ಸಾಧ್ಯ. ಸತತ ಅಧ್ಯಯನವೇ ಉತ್ತಮ ಸಂಶೋ ಧನೆಯ ದಾರಿ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಅಭಿಪ್ರಾಯಪಟ್ಟರು.

ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಸಂಶೋ ಧನಾ ಕೇಂದ್ರದ ವತಿಯಿಂದ ಸಂಶೋ ಧಕರು ಮತ್ತು ಮಾರ್ಗದರ್ಶಕರಿಗಾಗಿ ನಡೆದ ‘ಸಂಶೋಧನಾ ವಿಧಾನ’ ವಿಷಯ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ವನ್ನು ಉದ್ಘಾಟಿಸಿ, ಮಾತನಾಡಿದರು.

ಸಂಶೋಧನೆಯಿಂದ ಈಗ ನಿರೀಕ್ಷಿತ ಮಟ್ಟವನ್ನು ಮುಟ್ಟಲಾಗಿಲ್ಲ. ಸಂಶೋ ಧನೆಯಿಂದ ಉತ್ತಮವಾದ ಲೇಖನಗಳು ಪ್ರಕಟಗೊಳ್ಳಬೇಕು. ಅವುಗಳಿಂದ ಸಮಾ ಜಕ್ಕೆ ಉಪಯೋಗವಾಗಬೇಕು. ನಿಮ್ಮ ಅಧ್ಯಯನ ಸರಿದಾರಿಯಲ್ಲಿ ಸಾಗಿದಷ್ಟು ಉತ್ತಮ ವಿಚಾರಗಳು ಹೊರಬರಲು ಸಾಧ್ಯ. ಸಂಶೋಧಕರು ತಿಂಗಳಿಗೊಮ್ಮೆಯಾ ದರೂ ಅದುವರೆಗೆ ನಡೆಸಿದ ಅಧ್ಯಯನ, ಮುಂದೆ ನಡೆಸಬೇಕಾದ ಸಂಶೋಧನೆಯ ಬಗ್ಗೆ ಮನನ ಮಾಡಿಕೊಳ್ಳುತ್ತಿರಬೇಕು. ಹಾಕಿಕೊಂಡ ಯೋಜನೆಯಂತೆ ಗುರಿ ತಲು ಪಲು ಕಾರ್ಯಪ್ರವೃತ್ತರಾಗಬೇಕು. ಇಂತಹ ಕಾರ್ಯಕ್ರಮಗಳಿಂದ ಸಂಶೋ ಧನೆಯ ಗೊತ್ತು ಗುರಿಗಳು ಸ್ಪಷ್ಟವಾಗುತ್ತವೆ ಎಂದು ಅವರು ಹೇಳಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾ ಹಕರಾದ ಪ್ರೊ. ಬಿ.ವಿ.ಸಾಂಬಶಿವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಯಾವುದೇ ದೇಶ ಆರ್ಥಿಕವಾಗಿ ಸಬಲಗೊಳ್ಳಲು, ಸಮಾಜ ಉನ್ನತ ಸ್ಥಿತಿಗೆ ಏರಲು ಸಂಶೋಧನೆ ಅಂತೆಯೇ ಜ್ಞಾನ ಸೃಷ್ಟಿ ಅತ್ಯಂತ ಅವಶ್ಯಕವಾದುದು. ಜಗತ್ತಿ ನಲ್ಲಿ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತ್ವರಿತ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಜೊತೆಗೆ ಜಾಗತಿಕವಾಗಿ ಅನೇಕ ಸವಾಲು ಗಳನ್ನು ಪ್ರತಿದಿನ ಎದುರಿಸುತ್ತಿದ್ದೇವೆ. ಹೀಗೆ ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಗೆ ಅನುಗುಣವಾಗಿ ನಮ್ಮ ದೇಶವು ಸಾಗಬೇಕಾದರೆ ಸಂಶೋಧನಾ ಕ್ಷೇತ್ರ ವ್ಯಾಪಕಗೊಳ್ಳಬೇಕು. ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಗಳು ನಡೆಯಬೇಕು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಪ್ರಮಾಣ ಕಡಿಮೆಯಿದೆ. ವಿಜ್ಞಾನದಂತೆ ಇತರೆ ಕ್ಷೇತ್ರಗಳಲ್ಲಿಯೂ ಸಂಶೋಧನೆ ವ್ಯಾಪಕವಾಗಿ ನಡೆದು ಮಾನವ ಪ್ರಗತಿಗೆ ಸಹಾಯಕವಾಗಲಿ ಎಂದರು.

ಪ್ರಾಂಶುಪಾಲರಾದ ಡಾ.ಹೆಚ್.ಸಿ. ಹೊನ್ನಪ್ಪ ಸ್ವಾಗತಿಸಿದರು. ಶ್ರೀಮತಿ ಎಂ. ಗೀತಾ ಪ್ರಾರ್ಥಿಸಿದರು. ಡಾ.ಎನ್. ರಾಜೇಂದ್ರಪ್ರಸಾದ್ ನಿರೂಪಿಸಿ, ವಂದಿಸಿ ದರು. ಉದ್ಘಾಟನೆಯ ನಂತರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎನ್.ಎಸ್.ತಾರಾ ನಾಥ್, ‘ಸಂಶೋಧನಾ ಸ್ವರೂಪ’ ಕುರಿತು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ರವಿ, ‘ಸಂಶೋಧನಾ ವಿಧಾನ-ಸಂಖ್ಯಾಶಾಸ್ತ್ರ ಮೌಲ್ಯಮಾಪನ’ ವಿಷಯ ವಿಚಾರ ಮಂಡಿಸಿದರು.

Translate »