ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿನ್ನೆಲೆ; ಕೇಸು ದಾಖಲು ಸಚಿವ ಶ್ವರಪ್ಪ-ಂ1 ಆಪ್ತರಾದ ಬಸವರಾಜು-ಂ2, ರಮೇಶ್-ಂ3
News

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿನ್ನೆಲೆ; ಕೇಸು ದಾಖಲು ಸಚಿವ ಶ್ವರಪ್ಪ-ಂ1 ಆಪ್ತರಾದ ಬಸವರಾಜು-ಂ2, ರಮೇಶ್-ಂ3

April 14, 2022

ಮೈಸೂರು, ಏ.13- ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಅವರ ಆಪ್ತರಾದ ಬಸವರಾಜು ಮತ್ತು ರಮೇಶ್ ವಿರುದ್ಧ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇರೆಗೆ ಇಂದು ಎಫ್‍ಐಆರ್ ದಾಖಲಾಗಿದೆ.
ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಇಂದು ಮುಂಜಾನೆ 3.25ರಲ್ಲಿ ಎಫ್‍ಐಆರ್ ದಾಖ ಲಿಸಿದ್ದಾರೆ. ಸಂತೋಷ್ ಪಾಟೀಲ್ 4 ಕೋಟಿ ರೂ.ಗಳಿಗೂ ಹೆಚ್ಚು ಕಾಮಗಾರಿ ನಡೆಸಿದ್ದು, ಶೇ.40 ರಷ್ಟು ಕಮಿಷನ್ ನೀಡಿ ದರೆ ಮಾತ್ರ ಬಿಲ್ ಪಾಸ್ ಮಾಡುವು ದಾಗಿ ಸಚಿವ ಈಶ್ವರಪ್ಪ ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಅವರು ಒತ್ತಡ ಹೇರಿ, ಕೊನೆಗೂ ಬಿಲ್ ಪಾಸ್ ಮಾಡದ ಕಾರಣ ಸಂತೋಷ್ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2020-21ನೇ ಸಾಲಿನಲ್ಲಿ ಬೆಳಗಾವಿಯ ಹಿಂಡಲಗಾ ಗ್ರಾಪಂ ವ್ಯಾಪ್ತಿಯಲ್ಲಿರುವ ಶ್ರೀ ಲಕ್ಷ್ಮೀದೇವಿ ಜಾತ್ರೆ ವೇಳೆ ಗ್ರಾಮದ ಮುಖಂ ಡರು ಹಾಗೂ ಸ್ವಾಮೀಜಿಗಳು ಬೆಂಗಳೂ ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಿ, ಜಾತ್ರೆ ಹಿನ್ನೆಲೆಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಸೇರಿದಂತೆ ಕೆಲವು ಕಾಮಗಾರಿಗಳನ್ನು ಮಾಡಿ ಕೊಡಬೇಕೆಂದು ಮನವಿ ಸಲ್ಲಿಸಿದ್ದರು. ಈ ವೇಳೆ ಈಶ್ವರಪ್ಪನವರು ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಕಾಮಗಾರಿ ಆರಂಭಿಸಿ, ನಾನು ಹಣ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಿಂಡಲಗಾ ಗ್ರಾಪಂ ಅಧ್ಯಕ್ಷರು ಮತ್ತು ಮುಖಂಡರು ತಿಳಿಸಿದ ಮೇರೆಗೆ ಸಂತೋಷ್ ಪಾಟೀಲ್ ತನ್ನ ಸ್ವಂತ ಹಣದಲ್ಲಿ ಕಾಮಗಾರಿ ಮುಗಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ನಾಲ್ಕು ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತದ ಕಾಮಗಾರಿ ನಡೆಸಿದ್ದ ಸಂತೋಷ್, ಬೆಂಗಳೂರಿಗೆ ತೆರಳಿ ಈಶ್ವರಪ್ಪನವರನ್ನು ಭೇಟಿ ಮಾಡಿ ಬಿಲ್ ಪಾಸ್ ಮಾಡುವಂತೆ ವಿನಂತಿಸಿದ್ದಾರೆ. ಆದರೆ ಈಶ್ವರಪ್ಪ, ಬಸವರಾಜು ಮತ್ತು ರಮೇಶ್ ಅವರು ಶೇ.40 ರಷ್ಟು ಕಮಿಷನ್ ಕೊಟ್ಟರೆ ಮಾತ್ರ ಬಿಲ್ ಪಾಸ್ ಮಾಡುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಬೆಳಗಾವಿ ಗುತ್ತಿಗೆದಾರರ ಸಂಘದವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಸಂತೋಷ್ ಅವರು ಮಾರ್ಚ್ ತಿಂಗಳಿನಲ್ಲಿ ಸಚಿವ ಈಶ್ವರಪ್ಪ ಶೇ.40ರಷ್ಟು ಕಮಿಷನ್‍ಗೆ ಬೇಡಿಕೆ ಇಟ್ಟಿದ್ದಾರೆಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದರು. ಅವರು ಈ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಹಾಗೂ ಪ್ರಧಾನಿ ಕಚೇರಿಗೆ ಮತ್ತು ದೆಹಲಿ ಮಟ್ಟದ ಬಿಜೆಪಿ ವರಿಷ್ಠರಿಗೆ ಮನವಿ ಸಲ್ಲಿಸಿದ್ದರು. ಆದರೂ ಕೂಡ ಸಂತೋಷ್ ಪಾಟೀಲ್ ನಡೆಸಿದ ಕಾಮಗಾರಿಯ ಬಿಲ್ ಪಾಸ್ ಮಾಡಿಲ್ಲ. ಇದರಿಂದ ಮನನೊಂದ ಅವರು ತನ್ನ ಮೊಬೈಲ್ ನಿಂದ ವಾಟ್ಸಾಪ್ ಮುಖೇನ ಡೆತ್‍ನೋಟ್ ಸಂದೇಶವನ್ನು ಮಾಧ್ಯಮಗಳಿಗೆ ಹಾಗೂ ಆಪ್ತರಿಗೆ ಕಳುಹಿಸಿ, ಉಡುಪಿಯ ಶಾಂಭವಿ ಲಾಡ್ಜ್‍ನ 7ನೇ ನಂಬರ್ ರೂಂನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದಕ್ಕೆ ಸಚಿವರಾದ ಈಶ್ವರಪ್ಪ, ಅವರ ಆಪ್ತರಾದ ರಮೇಶ್ ಮತ್ತು ಬಸವರಾಜು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Translate »