ಪೊಲೀಸರು ಕ್ರಿಮಿನಲ್‍ಗಳಲ್ಲಿ ಭಯ ಹುಟ್ಟಿಸಬೇಕು; ಸಜ್ಜನ ನಾಗರಿಕರಲ್ಲಲ್ಲ
ಮೈಸೂರು

ಪೊಲೀಸರು ಕ್ರಿಮಿನಲ್‍ಗಳಲ್ಲಿ ಭಯ ಹುಟ್ಟಿಸಬೇಕು; ಸಜ್ಜನ ನಾಗರಿಕರಲ್ಲಲ್ಲ

February 3, 2022

ಮೈಸೂರು,ಫೆ.2(ಆರ್‍ಕೆ)- ಕಾನೂನು ಧಿಕ್ಕರಿಸುವ ಕ್ರಿಮಿನಲ್‍ಗಳಲ್ಲಿ ಪೊಲೀಸರು ಭಯ ಹುಟ್ಟಿಸಬೇಕೇ ಹೊರತು ಸಜ್ಜನ ನಾಗರಿಕರಲ್ಲಲ್ಲಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲ್ಲಿ ತಿಳಿಸಿದ್ದಾರೆ.

ಮೈಸೂರಿನ ಕೆಪಿಎ ಮೈದಾನದಲ್ಲಿ ಬುಧವಾರ ನಡೆದ 45ನೇ ತಂಡದ ಪೊಲೀಸ್ ಸಬ್ ಇನ್ಸ್‍ಪೆಕ್ಟರ್(ಸಿವಿಲ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚ ಲನ ಕಾರ್ಯಕ್ರಮದಲ್ಲಿ ಪರೇಡ್ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಬುನಾದಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ತೆರಳುತ್ತಿರುವ ನೀವು ಈ ನೆಲದ ಕಾನೂನು ಗಳನ್ನು ವಿರೋಧಿಸುವ ಸಮಾಜಘಾತುಕ ಶಕ್ತಿಗಳಲ್ಲಿ ಭಯ ಹುಟ್ಟಿಸಿ, ಅವರನ್ನು ಸರಿದಾರಿಗೆ ತರಬೇಕು ಎಂದರು.

ಅದೇ ರೀತಿ ಕಾನೂನನ್ನು ಗೌರವಿಸುವ ಸಜ್ಜನ ನಾಗರಿಕರ ಮಾನ, ಪ್ರಾಣ, ಆಸ್ತಿ ಗಳನ್ನು ರಕ್ಷಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದ್ದು, ಒಳ್ಳೆಯವರಿಗೆ ಸದಾ ಅಭಯ ನೀಡಬೇಕು. ಇಲಾಖೆಯಲ್ಲಿ ಕೆಲ ವರ ದುರ್ವರ್ತನೆಯಿಂದಾಗಿ ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ ಎಂದ ಸಚಿವರು, ಕರ್ತವ್ಯದ ಅವಧಿಯಲ್ಲಿ ದಕ್ಷತೆಯಿಂದ ನಿಮ್ಮ ಹೆಸರು ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಕ್ರಿಮಿನಲ್‍ಗಳು ಸಮಾಜಘಾತುಕ ಶಕ್ತಿಗಳೊಂದಿಗೆ ಕೈಜೋಡಿಸುವುದರಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರು ತ್ತಿದೆ. ಈ ಬಗ್ಗೆ ಹಲವು ದೂರುಗಳಿವೆ. ಮರ್ಯಾದಸ್ಥರ್ಯಾರೂ ಪೊಲೀಸ್ ಠಾಣೆಗೆ ಹೋಗಬಾರದೆಂಬ ಭಾವನೆ ಮೂಡಿದೆ ಎಂದು ವಿಷಾದ ವ್ಯಕ್ತಪಡಿಸಿದ ಗೃಹಸಚಿ ವರು, ಉತ್ತಮ ವಿದ್ಯಾರ್ಹತೆ ಹೊಂದಿ ರುವ ನೀವು ನಾಗರಿಕರನ್ನು ಗೌರವಿಸುವ ಮೂಲಕ ತಲೆ ಎತ್ತಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಲ್ಲ, ಅಬಲೆಯೂ ಅಲ್ಲ. ರಾಷ್ಟ್ರ ಹಾಗೂ ಸಮಾಜ ರಕ್ಷಣೆಗೂ ಸಿದ್ಧ ಎಂಬುದನ್ನು ಯಶಸ್ವಿಯಾಗಿ ನಿರೂಪಿಸಿ ದ್ದಾರೆ. ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಮಥ್ರ್ಯ ಪ್ರದರ್ಶಿಸುತ್ತಿರುವ ಮಹಿಳೆ ತಾನು ಯಾವು ದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ ಎಂದು ತಿಳಿಸಿದರು.

ರಾಷ್ಟ್ರಧ್ವಜ ಮತ್ತು ಪೊಲೀಸ್ ಧ್ವಜಗಳು ಕೇವಲ ಬಟ್ಟೆಯ ಚೂರುಗಳಲ್ಲ, ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯದ ಸಂಕೇತವಾಗಿದ್ದು, ಈ ದೇಶವನ್ನು ಕಾಯುವ ಮಿಲಿಟರಿ ಪಡೆಯಂತೆಯೇ 133 ಕೋಟಿ ಜನರ ರಕ್ಷಿಸುವ ಸಲುವಾಗಿ ಪೊಲೀಸರೂ ಸಹ ಕೆಲಸ ಮಾಡುತ್ತಿದ್ದಾರೆ. ಶತ್ರುಗಳ ಬಗ್ಗು ಬಡಿಯುವ ಕಾರ್ಯವನ್ನು ಮಿಲಿಟರಿ ಮಾಡಿದರೆ ಸಮಾಜಘಾತುಕರನ್ನು ಸದೆಬಡಿದು ಸಜ್ಜನರಿಗೆ ರಕ್ಷಣೆ ನೀಡುವ ಜವಾಬ್ದಾರಿಯನ್ನು ಪೊಲೀಸರು ನಿರ್ವಹಿಸು ತ್ತಿದ್ದಾರೆ ಎಂದರು. ಎಡಿಜಿಪಿ (ತರಬೇತಿ) ಪಿ. ಹರಿಶೇಖರನ್, ಕೆಪಿಎ ನಿರ್ದೇಶಕ ವಿಫುಲ್‍ಕುಮಾರ್, ಉಪನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »